April 29, 2024

Bhavana Tv

Its Your Channel

ಕೊಳಚೆ ನೀರನ್ನು ಪರಿಷ್ಕರಿಸದೆ ನೇರವಾಗಿ ನದಿಗೆ ಬಿಡುತ್ತಿದ್ದ ಭಟ್ಕಳ ಪುರಸಭೆ

ಭಟ್ಕಳ : ವೆಂಕಟಾಪುರದ ಹೆಗಲೆ ಗ್ರಾಮದಲ್ಲಿ ಪುರಸಭೆ ನಿರ್ಮಾಣ ಮಾಡಿರುವ ಸೇವೆಜ್ ಟ್ರೀಟಮೆಂಟ್ ಪ್ಲಾಂಟ್ ನಲ್ಲಿ ಕೊಳಚೆ ನೀರನ್ನು ಪರಿಷ್ಕರಿಸದೆ ನೇರವಾಗಿ ನದಿಗೆ ಬಿಡುಲಾಗುತ್ತಿದ್ದು ಇದರಿಂದಾಗಿ ಸ್ಥಳಿಯರು ಯಮಯಾತನೆಯನ್ನು ಪಡುವಂತ ದುಸ್ಥಿತಿ ನಿರ್ಮಾಣವಾಗಿದೆ.

ಕೊಳಚೆ ನೀರಿನ ಪರಿಣಾಮ ನದಿಯ ಜೊತೆಗೆ ಸುತ್ತಮುತ್ತಲಿನ ಪರಿಸರ ಮಲೀನವಾಗಿದ್ದು, ದುರ್ವಾಸನೆಯೊಂದಿಗೆ ಜೀವನ ನಡೆಸಬೇಕಾಗಿದೆ. ಚಿಕ್ಕ ಮಕ್ಕಳು ಪದೇ ಪದೇ ಜ್ವರ, ತಲೆನೋವಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಅಲ್ಲದೆ ಅಂತರ್ಜಲವು ಕೂಡ ದಿನದಿಂದ ದಿನಕ್ಕೆ ಮಲೀನವಾಗುತ್ತಿದೆ.

ಮನೆಯಲ್ಲಿ ಕುಳಿತು ಊಟ ಮಾಡಲು ಕೂಡ ಸಾಧ್ಯವಾಗುದಿಲ್ಲ ಒಮ್ಮೊಮ್ಮೆ ದುರ್ವಾಸನೆಯ ಕಾರಣಕ್ಕೆ ಊಟ ಮಾಡಿದ ನಂತರ ವಾಂತಿಯಾಗುತ್ತದೆ. ಮನೆಯಲ್ಲಿ ಕೃಷಿ ಕೆಲಸಕ್ಕಾಗಿ ಬರುವ ನೆಂಟರೀಸ್ಟರು ಕೂಡ ಸೊಳ್ಳೆ ಮತ್ತು ಕೆಟ್ಟ ವಾಸನೆಯ ಕಾರಣಕ್ಕೆ ನಮ್ಮ ಮನೆಯಲ್ಲಿ ಉಳಿದುಕೊಳ್ಳುವುದಿಲ್ಲ ಎಂದು ಸ್ಥಳಿಯ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಡಿದ್ದಾರೆ.

ಶಾಲೆಗೆ ಹೋಗುವ ಮಕ್ಕಳು ಕೂಡ ಈ ಪ್ಲಾಂಟ್ ಕಡೆಯಿಂದಲೆ ಹೋಗಬೇಕಾದ ಕಾರಣಕ್ಕೆ ಮುಖಕ್ಕೆ ಮಾಸ್ಕನ್ನು ಧರಿಸಿ ಹೋಗುವಂತ ಪರಿಸ್ಥಿತಿ. ಈ ಕುರಿತಾಗಿ ಅನೇಕ ಬಾರಿ ಸಂಬ0ಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು ಕೊಳಚೆ ಪರಿಷ್ಕರಿಸುವ ಯಂತ್ರವನ್ನು ಸರಿಪಡಿಸದೆ ಇಲ್ಲಸಲ್ಲದ ಸಬೂಬು ನೀಡಿ ಸ್ಥಳಿಯರ ಆರೋಗ್ಯದ ಜತೆ ಚಲ್ಲಾಟವಾಡುತ್ತಿದ್ದಾರೆ.

ಒಟ್ಟಿನಲ್ಲಿ ನಗರಕ್ಕೆ ಹತ್ತಿರದಲ್ಲೇ ನದಿದಂಡೆಯ ಹಳ್ಳಿಯ ಪರಿಸರದಲ್ಲಿ ಸ್ವಚ್ಛಂದವಾಗಿ ಜೀವನ ಸಾಗಿಸುತ್ತಿದ್ದ ರೈತಾಪಿ ಕುಟುಂಬಗಳು ಈ ಪ್ಲಾಂಟ್ ಕಾರಣಕ್ಕೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದಾನೆ. ಉಳ್ಳವರ ಸವಲತ್ತಿಗಾಗಿ ಬಡವ ತನಗೇನಾದರೂ ಮೌನವಾಗಿಯೇ ಸಹಿಸಕೊಳ್ಳದೆ ವಿಧಿಯಿಲ್ಲ ಎಂಬುದು ಇಲ್ಲಿ ಮತ್ತೊಮ್ಮೆ ಸಾಬಿತಾದಂತಾಗಿದೆ. ಭಾವನಾ ಟಿವಿಗಾಗಿ ಈಶ್ವರ ನಾಯ್ಕ ಭಟ್ಕಳ

error: