May 2, 2024

Bhavana Tv

Its Your Channel

ಹೊನ್ನಾವರ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಗೆ ಹಾನಿ

ಹೊನ್ನಾವರ ತಾಲ್ಲೂಕಿನಾದ್ಯಂತ ಒಂದು ವಾರದಿಂದ ಮುಸಲಧಾರೆ ನಿರಂತರವಾಗಿ ಸುರಿಯುತ್ತಿದೆ. ರವಿವಾರವು ಕೂಡ ಒಂದೇ ಸಮನೆ ಸುರಿಯುತ್ತಿರುವ ಮಳೆ ಜನರಿಗೆ ಮನೆಯಿಂದ ಹೊರಗಡೆ ಹೋಗಲು ಆಗದಷ್ಟು ಅನಾನೂಕೂಲತೆ ಉಂಟಾಯಿತು.

ಜನ ಸಾಮಾನ್ಯರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಗದ್ದೆ ನಾಟಿ , ಕೆಲವೇ ಕೆಲವು ಕೃಷಿ ಚಟುವಟಿಕೆ ಬಿಟ್ಟರೆ, ಮತ್ತೆಲ್ಲ ಕೆಲಸಕ್ಕೂ ವಿರಾಮ ಹಾಕಿದಂತಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಜನರ ಪ್ರತಿದಿನದ ದಿನಚರಿಗೂ ತೊಂದರೆ ಉಂಟು ಮಾಡಿದೆ. ವ್ಯಾಪಾರ ವಹಿವಾಟಿಗೂ ಮಳೆ ತಡೆ ಉಂಟು ಮಾಡಿದೆ.

ಜೋರಾಗಿಯೂ ಬೀಳದೆ, ಬಿಟ್ಟು ಬಿಟ್ಟು ಮಳೆ ಬೀಳುತ್ತಿದೆ. ಜಿಟಿಜಿಟಿ ಮಳೆಯ ಜೊತೆ ಮೋಡ ಕವಿದು ಕತ್ತಲು ಆವರಿಸಿ ಬಿಟ್ಟಿದೆ. ಸೂರ್ಯನ ಬೆಳಕು ನೋಡದೆ ತುಂಬಾ ದಿನಗಳೇ ಕಳೆದಿದೆ. ವಾತಾವರಣ ಮಬ್ಬು ಕವಿದು ಮಂದಗತಿಯಿAದ ಕೂಡಿದೆ.ಶರಾವತಿ ನದಿ ಬಡಗಣಿ ನದಿ, ಗುಂಡಬಾಳ ಹೊಳೆ, ಭಾಸ್ಕೇರಿ ಹೊಳೆ, ಸಣ್ಣ ಪುಟ್ಟ ಹಳ್ಳ – ಕೊಳ್ಳಗಳು ತುಂಬಿ ಹರಿಯುತ್ತಿದೆ. ದಡದ ಮೇಲೆ ನೀರು ಬರದಿದ್ದರು ಕೂಡ ಹೊಳೆಯ ದಡದ ಹತ್ತಿರದ ವರೆಗೆ ನೀರು ತುಂಬಿ ಹರಿಯುತ್ತಿದೆ.

ಮೀನುಗಾರರಿಗೂ ಕೂಡ ಸಾಂಪ್ರದಾಯಿಕ ಮೀನುಗಾರಿಕೆಗೆ ಹೋಗಲು ಆಗುತ್ತಿಲ್ಲ. ವಾಯುಬಾರ ಕುಸಿತದಿಂದ ಸಮುದ್ರಕ್ಕೆ ಇಳಿಯಲು ಆಗುತ್ತಿಲ್ಲ. ಸಮುದ್ರದಲ್ಲಿ ಅಲೆಗಳ ಅಬ್ಬರವು ಅಷ್ಟೇ ಜೋರಾಗಿ ಇದೆ. ಒಟ್ಟಾರೆ ಬಿಡುವೆ ನೀಡದೆ ಸುರಿಯುತ್ತಿರುವ ಮಳೆರಾಯ ಎಲ್ಲಾ ಚಟುವಟಿಕೆಗೂ ಬ್ರೇಕ್ ಹಾಕಿ ಬಿಟ್ಟಿದ್ದಾನೆ. ವಾತಾವರಣ ನೋಡಿದರೆ ಇನ್ನೂ ಕೂಡ ಒಂದೆರಡು ದಿನ ಮಳೆ ಸುರಿಯುವ ಸಾಧ್ಯತೆ ಇದ್ದ ಹಾಗೆ ಕಾಣುತ್ತಿದೆ.
ತಾಲೂಕಿನ ಮುಗ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ನಗರೆಯ ಹೊಸಹಿತ್ಲಲಿನ ಸುಬ್ರಾಯ ಶಂಕರ ಹೆಗಡೆ ಇವರ ಮನೆಯ ಗೋಡೆ ಕುಸಿದು ಹಾನಿ ಉಂಟಾಗಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ, ಜಾನುವಾರಿಗೂ ಹಾನಿ ಉಂಟಾಗಿಲ್ಲ.

error: