May 3, 2024

Bhavana Tv

Its Your Channel

ವಿಜೃಂಭಣೆಯಿOದ ನಡೆದ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ನಗರದೇವಿಯ ನೂತನ ರಥದ ಭೂಸ್ಪರ್ಶ ಕಾರ್ಯಕ್ರಮ

ಹೊನ್ನಾವರ ತಾಲೂಕಿನ ಗೇರುಸೊಪ್ಪಾದ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ನಗರದೇವಿಯ ನೂತನ ರಥದ ಭೂಸ್ಪರ್ಶ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನದಂತೆ ವಿಜೃಂಭಣೆಯಿoದ ಸಂಪನ್ನವಾಯಿತು.

ಗುತ್ತಿಕನ್ನಿಕಾ ಪರಮೇಶ್ವರಿ ನಗರದೇವಿಯ ಸನ್ನಿಧಿಯಲ್ಲಿ ನೂತನ ರಥದ ಭೂ ಸ್ಪರ್ಶ ಕಾರ್ಯಕ್ರಮವು ಪ್ಲವನಾಮ ಸಂವತ್ಸರದ ಮಾಘ ಶುಕ್ಲ ಬಿದಿಗೆ ಬುಧವಾರದಂದು ರಾತ್ರಿ ಪುಣ್ಯಾಹ, ರಾಕ್ಷೋಘ್ನ ಬಲಿ ಮತ್ತು ಮಾಘ ಶುಕ್ಲ ತದಿಗೆ ಗುರುವಾರ ಬೆಳಿಗ್ಗೆ 9-38ರ ಸಮಯದ ಮೀನ ಲಗ್ನದ ಶುಭಮುಹೂರ್ತದಲ್ಲಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಮಠಾದೀಶ ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಪೀಠಾದೀಶ ಮಹಾಸ್ವಾಮಿಗಳ ಕೃಪಾಶೀರ್ವಾದದೊಂದಿಗೆ ನೆರವೇರಿತು. ಪಂಚವಾದ್ಯದೊAದಿಗೆ ನೂತನ ರಥ ಪೂಜೆ,ಫಲ,ಕಾಣಿಕೆ ಸಮರ್ಪಣೆ,ಮಹಾ ಮಂಗಳಾರತಿಯೊoದಿಗೆ ಜರುಗಿತು.

ನೂತನ ರಥದ ಭೂ ಸ್ಪರ್ಶ ಕಾರ್ಯಕ್ರಮವು ಶ್ರೀ ಸಿಗಂಧೂರು ಚೌಡೇಶ್ವರಿ ದೇವಳದ ಧರ್ಮದರ್ಶಿಗಳಾದ ಪೂಜ್ಯ ಡಾ.ರಾಮಪ್ಪನವರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿತು. ನೂತನ ರಥ ಲೋಕಾರ್ಪಣೆಯಲ್ಲಿ ಪಾಲ್ಗೊಂಡು ದೇವಿಯ ನಂಬಿದ ಭಕ್ತರ ನ್ಯಾಯಯುತ ಬೇಡಿಕೆ,ಅಭಿಷ್ಠಗಳೆಲ್ಲ ಈಡೇರಲಿ, ಈ ದೇವಾಲಯವು ಉತ್ತಮೋತ್ತಮ ರೀತಿಯಲ್ಲಿ ಅಭಿವೃದ್ದಿ ಹೊಂದುತ್ತಾ, ಜಗತ್ ಪ್ರಸಿದ್ದಿಗೊಳ್ಳಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕ ಮಂಕಾಳ ವೈದ್ಯ ಅವರು ಈ ಶುಭಗಳಿಗೆಯಲ್ಲಿ ಪಾಲ್ಗೊಂಡು ಊರನಾಗರಿಕರ ಹಾಗೂ ಡಾ.ರಾಮಪ್ಪನವರ ಜೊತೆ ಸೇರಿ ದೇವಾಲಯದ ನೂತನ ಬ್ರಹ್ಮರಥ ಎಳೆದು ಶ್ರೀ ಗುತ್ತಿಕನ್ನಿಕಾ ನಗರ ದೇವಿಯ ದೇವಿ ದರ್ಶನ ಪಡೆದರು. ದೇವಾಲಯದ ಆವಾರದಲ್ಲಿನ ಪುಷ್ಪ ರಥವನ್ನು ಸಹ ಇದೇ ವೇಳೆ ಪೂಜೆ ಸಲ್ಲಿಸಿ ಲೋಕಾರ್ಪಣೆಗೊಳಿಸಿದರು.
ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗೋವಿಂದ ನಾಯ್ಕ ಮಾತನಾಡಿ ಇಂದಿನ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಅಮೃತಗಳಿಗೆಯಾಗಿದೆ.ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ನಗರದೇವಿಯು ಬ್ರಹ್ಮ ರಥದಲ್ಲಿ ವಿರಾಜಮಾನವಾಗಿರುವುದು ಕಣ್ತುಂಬಿಕೊಳ್ಳುವ ಬಹುವರ್ಷದ ಕನಸಾಗಿತ್ತು. ಇದಿಗ ನೂತನ ರಥದ ಲೋಕಾರ್ಪಣೆ ಮೂಲಕ ನೆರವೇರಲಿದೆ. ದೇವಿಯ ಸನ್ನಿದಿಯಲ್ಲಿ ಫೆಬ್ರವರಿ 12ರಿಂದ 16ರವರೆಗೆ ರಥೊತ್ಸವ ನಡೆಯಲಿದೆ. ಫೆಬ್ರವರಿ 14ರಂದು ಪುಷ್ಪ ರಥೋತ್ಸವ ಫೆಬ್ರವರಿ 15ರಂದು ಬ್ರಹ್ಮರಥೋತ್ಸವ ಜಾತ್ರಾ ಮಹೋತ್ಸವ ಜರುಗಲಿದೆ ಎಂದರು.

error: