May 2, 2024

Bhavana Tv

Its Your Channel

ಎಸ್. ಡಿ. ಎಂ. ಪದವಿ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ

ಹೊನ್ನಾವರ:- ಮಂಗಳವಾರ ದಂದು ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್‌ನ ಆಶ್ರಯದಲ್ಲಿ ಮಂಗಳೂರು ಮೂಲದ ಗ್ಲೋಟಚ್ ದಿಯಾ ಸಿಸ್ಟಮ್ಸ್ ಕಂಪನಿಯ ವತಿಯಿಂದ ಬಿ.ಎಸ್ಸಿ. & ಬಿ.ಸಿ.ಎ. ಪದವಿಧರರಿಗೆ ಟೆಕ್ನಿಕಲ್ ಸಪೋರ್ಟರ್ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು 55 ಪದವಿಧರರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಅಂತಿಮವಾಗಿ 7 ವಿದ್ಯಾರ್ಥಿಗಳ ಆಯ್ಕೆಯಾಗಿ ನೇಮಕಾತಿ ಆದೇಶ ಪಡೆದುಕೊಂಡರು.
ಕಾರ್ಯಕ್ರಮವನ್ನು ಎಂ. ಪಿ. ಇ. ಸೊಸೈಟಿಯ ಕಾರ್ಯದರ್ಶಿ ಎಸ್. ಎಂ. ಭಟ್ಟ ಉದ್ಘಾಟಿಸಿ ಮಾತನಾಡುತ್ತ ಉದ್ಯೋಗದಾತರೇ ಇಂದು ನಮ್ಮ ಮನೆಬಾಗಿಲಿಗೆ ಬರುತ್ತಿದ್ದು, ನಾವು ಒದಗಿಸಿದ ಇಂತಹ ಅವಕಾಶಗಳನ್ನು ಯುವ ಪದವೀಧರರು ಉಪಯೋಗಿಸಿಕೊಳ್ಳಬೇಕು. ಹಾಗೂ ಶ್ರದ್ಧೆಯಿಂದ ನೀಡಿದ ಕೆಲಸಗಳನ್ನು ಮಾಡಿದಲ್ಲಿ ಉನ್ನತ ಹುದ್ದೆಗೆ ತರಲು ಸಾಧ್ಯವಿದೆ ಎಂದು ಹೇಳಿದರು.
ಕಂಪನಿಯ ಎಚ್.ಅರ್. ಮ್ಯಾನೇಜರ್ ಎಬಿನೈಜರ್ ಉದ್ಯೋಗದ ವಿವರ ನೀಡಿ ಆಯ್ಕೆಯ ವಿಧಾನಗಳನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ವಿಜಯಲಕ್ಷಿö್ಮ ನಾಯ್ಕ ಉದ್ಯೋಗಾಕಾಂಕ್ಷಿಗಳಿಗೆ ಶುಭ ಕೋರಿದರು. ಆರಂಭದಲ್ಲಿ ಕುಮಾರಿ ಸೊನಾಲಿ ಕೊಟಾರಕರ್ ಪ್ರಾರ್ಥಿಸಿದರು. ಪ್ಲೇಸ್‌ಮೆಂಟ್ ಆಫೀಸರ್ ಡಾ. ಡಿ. ಎಲ್. ಹೆಬ್ಬಾರ ಪ್ರಾಸ್ಥಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. ಡಾ. ಶಿವರಾಮ ಶಾಸ್ತಿç ವಂದಿಸಿದರು ಹಾಗೂ ಡಾ. ಪಿ. ಎಂ. ಹೊನ್ನಾವರ ನಿರೂಪಿಸಿದರು.

error: