May 2, 2024

Bhavana Tv

Its Your Channel

ಜಿಲ್ಲಾ ಬಾಂಬ್ ನಿಷ್ಕ್ರಿಯ ತಂಡ ತರಬೇತಿ ಪಡೆದ ಶ್ವಾನ ಬೆಳ್ಳಿಯೊಂದಿಗೆ ಹೊನ್ನಾವರ ನ್ಯಾಯಾಲಯ ಸಂಕೀರ್ಣದ ಶೋಧನಾ ಕಾರ್ಯ

ಹೊನ್ನಾವರ: ಜಿಲ್ಲಾ ಬಾಂಬ್ ನಿಷ್ಕಿçÃಯ ತಂಡವು ತರಬೇತಿ ಪಡೆದ ಶ್ವಾನ ಬೆಳ್ಳಿಯೊಂದಿಗೆ ಗುರುವಾರ ಹೊನ್ನಾವರ ನ್ಯಾಯಾಲಯ ಸಂಕೀರ್ಣದ ಶೋಧನಾ ಕಾರ್ಯ ನಡೆಸಿತು.
ಪಂಜಾಬ್ ಮತ್ತು ದೆಹಲಿ ನ್ಯಾಯಾಲಯಗಳ ಆವರಣದಲ್ಲಿ ಬಾಂಬ್ ವಿದ್ವಂಸಕ ಕೃತ್ಯ ನಡೆದ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲಾ ಬಾಂಬ್ ಪತ್ತೆ ಮತ್ತು ನಿಷ್ಕಿçಯ ತಂಡವು ಸರ್ಕಾರದ ಆದೇಶದ ಪ್ರಕಾರ ನ್ಯಾಯಾಲಯ ಸಂಕೀರ್ಣವನ್ನು ಭೇಟಿ ನೀಡಿ ಪರಿಶೀಲಿಸಿತು.
ತಂಡದಲ್ಲಿದ್ದ ತರಬೇತಿ ಪಡೆದ ಶ್ವಾನ ಬೆಳ್ಳಿಯೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನ್ಯಾಯಾಲಯ ಕಟ್ಟಡದ ವಿವಿಧ ಕೋಣೆಗಳನ್ನು ಪರೀಕ್ಷಿಸಿದರು. ಶ್ವಾನ ಬೆಳ್ಳಿ ಅನುಮಾನವಿದ್ದ ಮೂಲೆ-ಮೂಲೆಗಳನ್ನು ಹುಡುಕಿತು. ತಂಡದ ಮುಖಂಡ ಸಂಜಯ ಭೋವಿ ನೇತೃತ್ವದ ತಂಡದ ಸಿಬ್ಬಂದಿಗಳು ಪರಿಶೀಲನಾ ಕಾರ್ಯ ನೆರವೇರಿಸಿದರು.
ತಂಡದಲ್ಲಿದ್ದ ಬೆಳ್ಳಿಯು ತರಬೇತಿದಾರನ ನಿರ್ದೇಶನದ ಪ್ರಕಾರ ತನ್ನ ಪರಿಶೀಲನಾ ಕಾರ್ಯವನ್ನು ಶಿಸ್ತಿನ ಸಿಪಾಯಿಯಂತೆ ನಡೆಸಿದ್ದನ್ನು ನೋಡಿ ಕಾರ್ಯ ಚಟುವಟಿಕೆ ನೋಡಿ ವಕೀಲರು, ಸಿಬ್ಬಂದಿಗಳು ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ ಕಕ್ಷಿದಾರರು ಆಶ್ಚರ್ಯಗೊಂಡರು. ಕೇವಲ 7 ವರ್ಷದ ಲೆಬ್ರಡೋಬ ಜಾತಿಗೆ ಸೇರಿದ ಶ್ವಾನವನ್ನು ಪ್ರದೀಪ ನಾಯ್ಕ ತರಬೇತಿ ನೀಡಿ ಸೇವೆಗೆ ಅಣಿಗೊಳಿಸಿದ್ದಾರೆ. ಶ್ವಾನವನ್ನು ತಂಡಕ್ಕೆ ಸೇರಿಸಿಕೊಂಡು 7 ವರ್ಷಗಳಾಗಿದೆ. ಬೆಳ್ಳಿಯೊಂದಿಗೆ ಸಿಬ್ಬಂದಿಗಳಾದ ಜಗನ್ನಾಥ ನಾಯ್ಕ, ಈರಪ್ಪ, ಶೇಖೋ ಪೂಜಾರಿ, ಸಂತೋಷ ಉಪಸ್ಥಿತರಿದ್ದರು.

error: