May 2, 2024

Bhavana Tv

Its Your Channel

ಅಪರೂಪದ ರಿಡ್ಲೆ ಜಾತಿಯ 197 ಕಡಲಾಮೆ ಮರಿಗಳ ಜನನ

ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕದ ಉದ್ದೇಶಿತ ವಾಣಿಜ್ಯ ಬಂದರು ಯೋಜನಾಪ್ರದೇಶದ ಹತ್ತಿರದ ಕಡಲತೀರದಲ್ಲಿ ಅಪರೂಪದ ರಿಡ್ಲೆ ಜಾತಿಯ ಕಡಲಾಮೆಗಳು ಎರಡು ಗೂಡುಗಳಲ್ಲಿ ಇಟ್ಟಿರುವ ಮೊಟ್ಟೆಗಳಲ್ಲಿ ಬುಧವಾರ ತಡರಾತ್ರಿ ಸುಮಾರು 197 ಮರಿಗಳು ಜನಿಸಿದೆ.

ಸ್ಥಳೀಯ ಮೀನುಗಾರರು ಗುರುವಾರ ಬೆಳಗ್ಗೆ ಹಿಂದು, ಮುಸ್ಲಿಂ ಮತ್ತು ಕ್ರೈಸ್ತ ಧರ್ಮದಂತೆ ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಪೂಜನೀಯ ಭಾವನೆಯಿಂದ ಆರಾಧಿಸಿ ಅವುಗಳನ್ನು ಸಮುದ್ರಕ್ಕೆ ತೇಲಿ ಬಿಟ್ಟು ಸಂಭ್ರಮಿಸಿದರು. ಬೆಳ್ಳಂಬೆಳಗ್ಗೆ ಗುರುವಾರ ಇಲ್ಲಿನ ಕಡಲತೀರದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಸೇರಿದ್ದರು.
ಉದ್ದೇಶಿತ ವಾಣಿಜ್ಯ ಬಂದರು ವಿವಾದವು ಹೈಕೋರ್ಟ್ಗೆ ಹೋಗಿ ಉದ್ದೇಶಿತ ವಾಣಿಜ್ಯ ಬಂದರು ಯೋಜನಾ ಪ್ರದೇಶದ ಹಾಗೂ ಅದರ ಸುತ್ತ ಮುತ್ತಲಿನ ಕಡಲತೀರವು ಕಡಲಾಮೆಗಳು ಮೊಟ್ಟೆ ಇಡುವ ಪ್ರದೇಶವಾಗಿದ್ದು. ಅಳಿವಿನ ಅಂಚಿನಲ್ಲಿರುವ ಅಪರೂಪದ ರಿಡ್ಲೆ ಜಾತಿಯ ಕಡಲಾಮೆಗಳು ಸೇರಿದಂತೆ ವಿವಿಧ ಜೀವವೈವಿಧ್ಯತೆಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಇಲ್ಲಿ ವಾಣಿಜ್ಯ ಬಂದರು ಸ್ಥಾಪಿಸುವುದು ಸೂಕ್ತವಲ್ಲ ಎಂದು ಇಲ್ಲಿನ ಸಂಘಟನೆಯೊAದು ಹಿಂದೆ ನ್ಯಾಯಾಲಯದ ಗಮನ ಸೆಳೆದಿರುವದನ್ನು ಇಲ್ಲಿ ಸ್ಮರಿಸಬಹುದು. ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ಈ ಭಾಗದಲ್ಲಿ ಕೇಂದ್ರ ತನಿಖಾ ದಳದ ಸಿಬ್ಬಂದಿ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಆರ್ ಎಫ್ ಓ. ವಿಕ್ರಂ ಮತ್ತು ಅವರ ಸಿಬ್ಬಂದಿ, ಕಡಲ ವಿಜ್ಞಾನಿ ಡಾ. ಸೂರ್ಯ ಅಡ್ಡೂರ, ಡಾ. ಪ್ರಕಾಶ ಮೇಸ್ತ ಮುಂತಾದವರು ಉಪಸ್ಥಿತರಿದ್ದು ಅವರ ಮೇಲುಸ್ತುವಾರಿಯಲ್ಲಿ ಸ್ಥಳೀಯರ ಸಹಕಾರದಿಂದ ಕಡಲಾಮೆ ಮರಿಗಳನ್ನು ಜತನದಿಂದ ಸಮುದ್ರಕ್ಕೆ ಬಿಡುವ ಕೆಲಸ ನಡೆಯಿತು. ಇನ್ನೊಂದೆಡೆ ಅರಣ್ಯ ಇಲಾಖೆ ಮತ್ತು ಕಡಲ ವಿಜ್ಞಾನಿಗಳು ದಾಖಲೀಕರಣಕ್ಕೂ ಅಗತ್ಯ ವ್ಯವಸ್ಥೆ ಕೈಗೊಂಡಿರುವ ಕಂಡು ಬಂತು. ರೆ. ಫಾದರ್ ಶ್ಯಾಮ್ಸನ್ ಪಿಂಟೋ, ಮಹ್ಮದ ಕೋಯಾ ಮತ್ತು ರಾಜು ತಾಂಡೆಲ ಕಡಲಾಮೆ ಮರಿಗಳಿಗೆ ಪೂಜೆ ಸಲ್ಲಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯರಾದ ಜಗದೀಶ್ ತಾಂಡೇಲ್, ಪ್ರೀತಿ ತಾಂಡೇಲ್, ಮೀನುಗಾರರ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಣಪತಿ ತಾಂಡೇಲ, ಕಾರ್ಮಿಕರ ಸಂಘದ ಕಾರ್ಯದರ್ಶಿ ರಾಜುತಾಂಡೇಲ, ಜೈನಜಟಗೇಶ್ವರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಮೀನುಗಾರರ ಮಹಿಳಾ ಸಂಘಟನೆಯವರು ಉಪಸ್ಥಿತರಿದ್ದರು.

error: