April 29, 2024

Bhavana Tv

Its Your Channel

ಪೊಲೀಸ್ ಬೆಂಗಾವಲು ವಾಹನ- ರಿಕ್ಷಾ ಡಿಕ್ಕಿ : ಸವಾರರಿಗೆ ಪೆಟ್ಟು

ಹೊನ್ನಾವರ : ತಾಲೂಕಿನ ಕವಲಕ್ಕಿಯಲ್ಲಿ ಸಚಿವ ಶಿವರಾಮ ಹೆಬ್ಬಾರರವರ ಬೆಂಗಾವಲು ಪೊಲೀಸ್ ವಾಹನ ಮತ್ತು ಪೆಸೆಂಜರ್ ಅಟೋ ನಡುವೆ ಅಪಘಾತವಾಗಿ ಅಟೋದಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಒಬ್ಬರಿಗೆ ಸಣ್ಣ ಪ್ರಮಾಣದ ಗಾಯವಾದ ಘಟನೆ ನಡೆದಿದೆ.

ಖಾಸಗಿ ಕಾರ್ಯಕ್ರಮದ ನಿಮಿತ್ತ ಸಚಿವ ಶಿವರಾಮ ಹೆಬ್ಬಾರರವರು ಹೊನ್ನಾವರ ಕಡೆಯಿಂದ ಕವಲಕ್ಕಿ ಮಾರ್ಗವಾಗಿ ತಾಲೂಕಿನ ಜಲವಳ್ಳಿಗೆ ತೆರಳುತ್ತಿದ್ದಾಗ, ಆಟೋ ರಿಕ್ಷಾವೊಂದು ರಸ್ತೆ ಕ್ರಾಸ್ ಮಾಡುವ ಸಮಯದಲ್ಲಿ ಪೊಲೀಸ್ ವಾಹನ ಮತ್ತು ರಿಕ್ಷಾ ನಡುವೆ ನೇರ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಅಟೋ ಪಲ್ಟಿಯಾಗಿ ರಸ್ತೆಯ ಮೇಲೆ ಬಿದ್ದಿತ್ತು. ವೇಗವಾಗಿ ಚಲಿಸುತ್ತಿದ್ದರು ಕೂಡ ಪೊಲೀಸ್ ವಾಹನದ ಚಾಲಕ ಬ್ರೇಕ್ ಹಾಕಿ ಸಂಭವಿಸಬೇಕಾದ ದೊಡ್ಡ ಅನಾಹುತ ತಡೆದಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಅಟೋದಲ್ಲಿ ಚಾಲಕ ಸೇರಿ ನಾಲ್ಕು ಜನರಿದ್ದು, ಅದರಲ್ಲಿ ಮಹಿಳೆಯೊಬ್ಬರ ತಲೆಗೆ ಪೆಟ್ಟಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಅಂತಹ ಗಂಭೀರ ಪೆಟ್ಟಾಗಿಲ್ಲ ಎಂದು ತಿಳಿದು ಬಂದಿದೆ. ಘಟನೆಗೆ ಸಂಬAಧ ಪಟ್ಟಂತೆ ಸಂಜೆ ತನಕ ಯಾವುದೇ ದೂರು ದಾಖಲಾಗಿಲ್ಲ

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: