May 16, 2024

Bhavana Tv

Its Your Channel

ಜನತಾ ವಿದ್ಯಾಲಯ ಅನಿಲಗೋಡ ಪ್ರೌಢ ಶಾಲೆಯಲ್ಲಿ “ಹರ್ ಘರ್ ತಿರಂಗಾ” ಅಭಿಯಾನ

ಹೊನ್ನಾವರ: ಬುಧವಾರ ಜನತಾ ವಿದ್ಯಾಲಯ ಪ್ರೌಢ ಶಾಲಾ ಅನಿಲಗೋಡನಲ್ಲಿ “ಹರ್ ಘರ್ ತಿರಂಗಾ” ಅಭಿಯಾನ ಪ್ರಯುಕ್ತ ಭಾರತ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಕಿರಿಯ / ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಭಾರತದ ಧ್ವಜ ಬಿಡಿಸುವ ಹಾಗೂ ದೇಶಭಕ್ತಿ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕ ಭಾರತ ಸೇವಾ ದಳದ ಅಧ್ಯಕ್ಷರು ಹಾಗೂ ಮಾಜಿ ಸೈನಿಕರಾದ ವಾಮನ ಎಸ್.ನಾಯ್ಕರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಭೆಯಲ್ಲಿ ಹಾಜರಿದ್ದ ಶಾಲಾ ಮಕ್ಕಳಿಗೆ ಉದ್ಘಾಟಕರು ಮಾತನಾಡಿ ದೇಶಭಕ್ತಿ ರಾಷ್ಟ್ರ ಧ್ವಜ ಹಾಗೂ ರಾಷ್ಟ್ರ ಗೀತೆಗಳ ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸಿದರು ಶಾಲಾ ಮುಖ್ಯಾಧ್ಯಾಪಕರು ಆದ ಸುಬ್ರಮಣ್ಯ ಶೇರೆಗಾರ ಇವರು ಸ್ವಾತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಅನಿಲಗೋಡ ಗ್ರಾಮದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಭಾರತದ ಧ್ವಜ ಬಿಡಿಸುವ ಹಾಗೂ ದೇಶಭಕ್ತಿ ಗಾಯನ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು ಒಂದು ಉತ್ತಮ ಕಾರ್ಯಕ್ರಮವಾಗಿದ್ದು ಮಕ್ಕಳಲ್ಲಿ ದೇಶಪ್ರೇಮ ಮತ್ತು ಭಾವೈಕ್ಯತೆ ಮೂಡಿಸುವ ಕಾರ್ಯಕ್ರಮ ಆಗಿದೆ ಎಂದು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಕೊಡಾಣಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಮಣಿಕಂಠ ನಾಯ್ಕ ಮಾತನಾಡಿ ಮನೆ ಮನೆಗಳಲ್ಲಿ ಆಗಸ್ಟ 13 ರಿಂದ 15 ವರಗೆ ತ್ರಿವರ್ಣ ಧ್ವಜವನ್ನು ಹಾರಿಸಿ ಭಾರತದ ಏಕತೆ ಸಂದೇಶವನ್ನು ಸಾರಬೇಕೆಂದು ಹೇಳಿದರು,

ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ವೇಕಟೇಶ ನಾಯ್ಕ ಅವರು ರಾಷ್ಟ್ರಧ್ವಜದ ಮಹತ್ವ ಮತ್ತು ದೇಶಪ್ರೇಮದ ಕುರಿತು ಮಕ್ಕಳಿಗೆ ತಿಳಿ ಹೇಳಿದರು
ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಮುಖ್ಯಾಧ್ಯಾಪಕರಾದ ಸುಬ್ರಮಣ್ಯ ಶೇರೆಗಾರ ಪ್ರಾಸ್ತಾವಿಕವಾಗಿ ಮಾತನಾಡುತ್ತ “ಹರ್ ಘರ್ ತಿರಂಗಾ ಅಭಿಯಾನದ ಉದ್ದೇಶ ಮತ್ತು ಮಹತ್ವವನ್ನು ಹೇಳಿದರು.

ವೇದಿಕೆಯಲ್ಲಿ ಭಾರತ ಸೇವಾದಳ ಜಿಲ್ಲಾ ಸದಸ್ಯರಾದ ಮೋಹನ ಎಂ.ನಾಯ್ಕ, .ಎಸ್ ಡಿ ಎಂ ಸಿ .ಉಪಾಧ್ಯಕ್ಷರಾದ ಶೋಭಾ ಹೆಗಡೆ, ಬೇರಂಕಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾದ ಆರ್.ಎನ್.ಹೆಗಡೆ, ಸ್ಥಳೀಯ ಗಣ್ಯರಾದ ಎಂ.ಎಲ್.ನಾಯ್ಕ ರು ಉಪಸ್ಥಿತರಿದ್ದರು.

ಎಂಟನೇ ವರ್ಗದ ವಿದ್ಯಾರ್ಥಿಯಾದ ವಿವೇಕ್ ಶಿಲ್ಪಿ ಆಚಾರಿ ತನ್ನ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಶಿಕ್ಷಕರಾದ ಜಿ.ಆರ್.ಶೆಟ್ಟಿ ಅವರು ಸರ್ವರನ್ನು ಸ್ವಾಗತಿಸಿದರು, ಶಿಕ್ಷಕಿ ಸೌಮ್ಯ ಹೆಗಡೆಯವರು ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ಎ.ಜಿ.ಗೌಡರು ಸರ್ವರನ್ನು ವಂದಿಸಿದರು.ಸ್ಪರ್ಧೆಯಲ್ಲಿ ಕಿರಿಯ /ಹಿರಿಯ ಪ್ರಾಥಮಿಕ ಶಾಲೆಗಳ 25 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಾದವರಿಗೆ ಪ್ರಥಮ, ದ್ವಿತೀಯ ತೃತೀಯ ಹಾಗೂ ಸಮಾಧಾನಕರ ಬಹುಮಾನದೊಂದಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಬಹುಮಾನಿತರ ಯಾದಿಯನ್ನು ಶಿಕ್ಷಕಿಯರಾದ ಕಲ್ಪನಾ ಬೂತರೆಡ್ಡಿ ಅವರು ಓದಿದರು

error: