May 2, 2024

Bhavana Tv

Its Your Channel

ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ದಿನಾಂಕ ೦೫-೦೯-೨೦೨೨ ರಂದು ವಿದ್ಯಾರ್ಥಿ ಒಕ್ಕೂಟದ ಆಶ್ರಯದಲ್ಲಿ ಡಾ.ರಾಧಾಕೃಷ್ಣನ್‌ರವರ ಜನ್ಮದಿನದ ಅಂಗವಾಗಿ ‘ಗುರುವಂದನಾ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಡಾ. ರಾಧಾಕೃಷ್ಣನ್‌ರವರ ಭಾವÀಚಿತ್ರಕ್ಕೆೆ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಏರ್ಪಡಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ ನಾಗರಾಜ ಹೆಗಡೆ ಅಪಗಾಲ, ಮುಖ್ಯಸ್ಥರು ಕನ್ನಡ ವಿಭಾಗ ಇವರು ಶಿಕ್ಷಣ ಕ್ಷೇತ್ರಕ್ಕೆ ಡಾ.ರಾಧಾಕೃಷ್ಣನ್‌ರವರ ಕೊಡುಗೆಗಳನ್ನು ಅವರ ಹಿರಿಮೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಬಡಕುಟುಂಬದಲ್ಲಿ ಜನಿಸಿದ ಡಾ.ರಾಧಾಕೃಷ್ಣನ್ ಶಿಸ್ತು, ಸಮಯಪಾಲನೆ ಮತ್ತು ತತ್ವಶಾಸ್ತçದ ಆಳವಾದ ಜ್ಞಾನದ ಮೂಲಕ ವಿಶ್ವವಿಖ್ಯಾತರಾದರು. ಹಾಗೂ ಪವಿತ್ರ ಶಿಕ್ಷಕ ವೃತ್ತಿಯಿಂದ ರಾಷ್ಟಾçಧ್ಯಕ್ಷರ ಹುದ್ದೆಗೆ ಏರಿದರೆಂದು ತಿಳಿಸಿದರು. ಎಸ್.ಡಿ.ಎಂ.ಕಾಲೇಜಿನ ಪ್ರಥಮ ಪ್ರಾಚಾರ್ಯರಾದ ಡಾ. ವಿ. ಸೀತಾರಾಮಯ್ಯರವರು ಡಾ.ರಾಧಾಕೃಷ್ಣನ್‌ರವರ ವಿದ್ಯಾರ್ಥಿಯಾಗಿದ್ದರು ಎನುವ ವಿಷಯವನ್ನು ತಿಳಿಸಿದರು. ಕಾಲೇಜಿನ ಪ್ರಾಚಾರ್ಯರಾz ಡಾ. ವಿಜಯಲಕ್ಷಿö್ಮ ಎಂ. ನಾಯ್ಕ ಅಧ್ಯಕ್ಷೀಯ ಮಾತುಗಳನ್ನಾಡಿದರು. ವಿದ್ಯಾರ್ಥಿಒಕ್ಕೂಟದ ಉಪಾಧ್ಯಕ್ಷರಾದ ಡಾ. ಡಿ. ಎಲ್. ಹೆಬ್ಬಾರ ಪ್ರಾಸ್ಥಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. ಬಿ.ಕಾಂ.ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಾದ ಕುಮಾರಿ ದೇವಿಕಾ ಮತ್ತು ಮಹಾಮಾಯಿ ಪ್ರಾರ್ಥಿಸಿದರು. ಪ್ರೊ.ಎನ್. ಜಿ. ಅನಂತಮೂರ್ತಿ ವಂದಿಸಿದರು. ಪ್ರೊ.ಸಂತೋಷ ಗುಡಿಗಾರ ಮತ್ತು ಪ್ರೊ. ವಿದ್ಯಾಧರ ನಾಯ್ಕ ನಿರೂಪಿಸಿದರು. 
error: