May 3, 2024

Bhavana Tv

Its Your Channel

ಯಶಸ್ವಿಯಾಗಿ ನಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಸಿ.ಎ. ಕೋರ್ಸ್ ಮಹತ್ವದ ಕಾರ್ಯಾಗಾರ

ಹೊನ್ನಾವರ: ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ.ವಿದ್ಯಾರ್ಥಿಗಳು ಸವಾಲನ್ನು ಎದುರಿಸಲು ಸಿದ್ಧವಾಗಿರಬೇಕು.ಚಾಲೆಂಜ್ ಎದುರಿಸುವ ಗುರಿ ಇದ್ದರೆ ಏನು ಬೇಕಾದರು ಸಾಧಿಸಬಹುದು.ಎಂ.ಪಿ.ಇ ಸೊಸೈಟಿಯಕಾರ್ಯ ನಿಜಕ್ಕು ಶ್ಲಾಘನೀಯ.ಕಾಲೇಜಿನ ಆಡಳಿತ ಮಂಡಳಿ ದೂರದೃಷ್ಟಿತ್ವವನ್ನು ಹೊಂದಿದ್ದು,ಅವರ ಕೆಲಸವನ್ನುಅಭಿನಂದಿಸಲೇಬೇಕು.ಜಿಲ್ಲೆಯ ಉತ್ತಮ ಕಾಲೇಜುಗಳಲ್ಲಿ ಎಸ್.ಡಿ.ಎಮ್.ಕಾಲೇಜು ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದುಕುಮಟಾ -ಹೊನ್ನಾವರ ವಿಧಾನಸಭಾ ಶಾಸಕರು ದಿ ಇನ್ಸಿ÷್ಟಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆನ್ಸ್ ಆಫ್ ಇಂಡಿಯಾ ಹಾಗೂ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿ ಸಹಯೋಗದೊಂದಿಗೆ ನಡೆದ ವೃತ್ತಿ ಮಾರ್ಗದರ್ಶನ ಮತ್ತು ಕರಿಯರ್ ಕೌನ್ಸಲಿಂಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಿ ಇನ್ಸಿ÷್ಟಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆನ್ಸ್ ಆಫ್ ಇಂಡಿಯಾ, ಉಡುಪಿ ಬ್ರಾಂಚ್ ಹಾಗೂ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿ ಸಹಯೋಗದೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಆರಂಭಿಸಿ ಸ್ನಾತಕೋತ್ತರ ಪದವಿಯನ್ನು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ಕರಿಯರ್ ಕೌನ್ಸಲಿಂಗ್ ಕಾರ್ಯಕ್ರಮ ಹೊನ್ನಾವರದ ಎಸ್.ಡಿ.ಎಂ.ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಹಾಗೂ ಎಲ್ಲಾ ವಿದ್ಯಾರ್ಥಿಗಳು ಸ್ವಾವಲಂಬನೆಯ ಜೀವನವನ್ನು ನಡೆಸುವ ಕನಸನ್ನು ಹೊಂದಿರಬೇಕು. ಸಿ.ಎ. ಕೋರ್ಸ್ ಕಬ್ಬಿಣದ ಕಡಲೆ ಅನ್ನುವ ಮಾತು ಕೇಳಿಬರುತ್ತದೆ. ಆದರೆ ಸಿ.ಎ. ಕಬ್ಬಿಣದ ಕಡಲೆ ಅಲ್ಲ. ಸರಿಯಾದ ಮಾರ್ಗದರ್ಶನ ಸಿಕ್ಕರೆ ಈ ಕೋರ್ಸ್ ಆರಾಮವಾಗಿ ಮಾಡಬಹುದು. ಎಲ್ಲಾ ವಿದ್ಯಾರ್ಥಿಗಳು ಇಂತಹ ಕೋರ್ಸ್ಗಳಿಗೆ ಹೆಚ್ಚು ನೋಂದಣೆ ಮಾಡುವಂತಾಗಬೇಕು ಎಂದು ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಅಧ್ಯಕ್ಷಕೃಷ್ಣಮೂರ್ತಿ ಭಟ್, ಶಿವಾನಿ ಅಭಿಪ್ರಾಯಪಟ್ಟರು.

ಸ್ಥಳಿಯ ಊರಿನಲ್ಲಿಯೇ ಸಿ.ಎ.ಅಕೌಂಟೆAಟ್ ಆಗಿ ಕೆಲಸ ಮಾಡುವ ಹೆಮ್ಮೆಯೇ ಬೇರೆ ರೀತಿ ಆಗಿರುತ್ತದೆ.ಯಾರ ಜೊತೆಗೂ ನಿಮ್ಮನ್ನು ಹೋಲಿಸಿಕೊಳ್ಳಬೇಡಿ.ಎಂದು ದಿ ಇನ್ಸಿ÷್ಟಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆನ್ಸ್ ಆಫ್ ಇಂಡಿಯಾ, ಉಡುಪಿ ಬ್ರಾಂಚ್ ಸದಸ್ಯೆ ಗೀತಾ ಎ.ಬಿ ಹೇಳಿದರು.

ಸಿ.ಎ ಪ್ರದೀಪ್‌ಜೋಗಿ , ಸಿ.ಎ. ವಸಂತ್ ಶಾನುಭೋಗ್ ವಿದ್ಯಾರ್ಥಿಗಳಿಗೆ ಕರಿಯರ್‌ಕೌನ್ಸಲಿಂಗ್ ನಡೆಸಿಕೊಟ್ಟರು.

ತಾಲೂಕಿನ ಪ್ರೌಢಶಾಲೆ ಹಾಗೂ ಪದವಿ ಪೂರ್ವಕಾಲೇಜು ಮತ್ತು ಪದವಿ ಕಾಲೇಜುಗಳಿಂದ ಸುಮಾರು ೨ ಸಾವಿರ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದುಕೊಂಡರು. ದಿ ಇನ್ಸಿ÷್ಟಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆನ್ಸ್ ಆಫ್ ಇಂಡಿಯಾ, ಉಡುಪಿ ಬ್ರಾಂಚ್‌ಚೇರ್ ಮೇನ್ ಸಿ.ಎ. ಲೋಕೇಶ್ ಶೆಟ್ಟಿ, ಸ್ವಾಗತಿಸಿದರು. ದಿ ಇನ್ಸಿ÷್ಟಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆನ್ಸ್ ಆಫ್ ಇಂಡಿಯಾ, ಉಡುಪಿ ಬ್ರಾಂಚ್ ವೈಸ್‌ಚೇರ್‌ಮೇನ್ ಸಿ.ಎ.ಪ್ರಭಾಕರ್.ಎನ್.ನಾಯಕ್,ಕಾರ್ಯದರ್ಶಿ ಮಹೆಂದ್ರ ಶೆಣೈ, ಖಜಾಂಚಿಅರ್ಚನಾ ಮಯ್ಯ , ಎಸ್.ಐ.ಸಿಎಎಸ್‌ಎ ಚೇರ್ ಮನ್ ಸಿ.ಎ.ಮಲ್ಲೆಶ್ ಕುಮಾರ್ ,ಸಿ.ಎ ರಂಗನಾಥ ಆಚಾರ್ ಕೆ. ವೆದಿಕೆಯ ಮೇಲೆ ಹಾಜರಿದ್ದರು.ಎಂ.ಪಿ. ಇ ಸೊಸೈಟಿಯ ಸದಸ್ಯರು , ಪದವಿ , ಪದವಿ ಪೂರ್ವಕಾಲೇಜು, ಕೇಂದ್ರಿಯ ವಿದ್ಯಾಲಯದ ಪ್ರಾಚಾರ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: