May 3, 2024

Bhavana Tv

Its Your Channel

ಉತ್ತರಕನ್ನಡದ ಸುಬ್ರಹ್ಮಣ್ಯ ಧಾರೇಶ್ವರ , ಸಹಮದೇವಪ್ಪ ಈರಪ್ಪ ನಡಿಗೇರ ಸೇರಿ 67 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ಉತ್ತರಕನ್ನಡದ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ಹೊನ್ನಾವರ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ಪ್ರತಿವರ್ಷ ಸರಕಾರದಿಂದ ನೀಡುವ ರಾಜ್ಯೋತ್ಸವ ಪ್ರಶಸ್ತಿಯ 2022ರ ಸಾಲಿನ 67 ವಿಜೇತರ ಅಂತಿಮ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಮೊದಲ ಬಾರಿ 5 ಲಕ್ಷ ರೂ. ನಗದು 25 ಗ್ರಾಂ ಬಂಗಾರ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಿದ್ದಾರೆ.

2021-22 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಬದಲಾವಣೆ ತರಲಾಗಿದೆ. ಇದೇ ಮೊದಲ ಬಾರಿ ಜಿಲ್ಲಾವಾರು ಪ್ರತಿನಿಧ್ಯ, ಕ್ಷೇತ್ರವಾರು ಆದ್ಯತೆ ಹಾಗು ಅಚ್ಚರಿ ಆಯ್ಕೆ ಮೂಲಕ ರಾಜ್ಯೋತ್ಸವ ಪುರಸ್ಕೃತರನ್ನು ಪಟ್ಟಿ ಮಾಡಲಾಗುತ್ತಿದೆ. ಒಟ್ಟು 28 ಸಾವಿರ ಅರ್ಜಿಗಳ ಪೈಕಿ 67 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಬಿಡುಗಡೆ ಮಾಡಿದರು.

2022ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಪಟ್ಟಿ :-
ಸಂಕೀರ್ಣ ಕ್ಷೇತ್ರ :- ಸುಬ್ಬರಾಮ ಶೆಟ್ಟಿ (ಬೆಂಗಳೂರು), ವಿದ್ವಾನ್ ಗೋಪಾಲ ಕೃಷ್ಣ ಶರ್ಮಾ(ಬೆಂಗಳೂರು), ಶ್ರೀಮತಿ ಸೋಲಿಗರ ಮಾದಮ್ಮ(ಚಾಮರಾಜನಗರ)
ಸೈನಿಕ- ಸುಬೇದಾರ್ ಬಿಕೆ ಕುಮಾರಸ್ವಾಮಿ(ಬೆಂಗಳೂರು)
ಪತ್ರಿಕೋದ್ಯಮ -ಹೆಚ್.ಆರ್.ಶ್ರೀಶಾ(ಬೆಂಗಳೂರು), ಜಿ.ಎಂ.ಶಿರಹಟ್ಟಿ(ಗದಗ)
ಕೃಷಿ– ಗಣೇಶ್ ತಿಮ್ಮಯ್ಯ(ಕೊಡಗು), ಚಂದ್ರಶೇಖರ್ ನಾರಾಯಣಪುರ(ಚಿಕ್ಕಮಗಳೂರು)
ವಿಜ್ಞಾನ ಮತ್ತು ತಂತ್ರಜ್ಞಾನ- ಕೆ.ಶಿವನ್(ಬೆಂಗಳೂರು) ಡಿ.ಆರ್.ಬಳೂರಗಿ(ರಾಯಚೂರು)
ಪರಿಸರ -ಸಾಲುಮರದ ನಿಂಗಣ್ಣ(ರಾಮನಗರ)
ಪೌರಕಾರ್ಮಿಕ ಕ್ಷೇತ್ರ- ಮಲ್ಲಮ್ಮ ಹೂವಿನಹಡಗಲಿ(ವಿಜಯನಗರ)
ಆಡಳಿತ- ಎಲ್.ಹೆಚ್.ಮಂಜುನಾಥ್(ಶಿವಮೊಗ್ಗ), ಮದನ್ ಗೋಪಾಲ್(ಬೆಂಗಳೂರು)
ಹೊರನಾಡು– ದೇವಿದಾಸ ಶೆಟ್ಟಿ(ಮುಂಬೈ), ಅರವಿಂದ್ ಪಾಟೀಲ್(ಹೊರನಾಡು), ಕೃಷ್ಣಮೂರ್ತಿ ಮಾಂಜಾ(ತೆಲoಗಾಣ)
ಹೊರದೇಶ –ಗಲ್ಫ್ ದೇಶದ ರಾಜ್‌ಕುಮಾರ್(ಗಲ್ಫ್ ರಾಷ್ಟ್ರ)
ವೈದ್ಯಕೀಯ– ಡಾ.ಹೆಚ್.ಎಸ್.ಮೋಹನ್(ಶಿವಮೊಗ್ಗ), ಡಾ.ಬಸವಂತಪ್ಪ(ದಾವಣಗೆರೆ)
ಸಮಾಜ ಸೇವೆ– ರವಿಶೆಟ್ಟಿ(ದಕ್ಷಿಣ ಕನ್ನಡ), ಕರಿಯಪ್ಪ(ಬೆಂಗಳೂರು ಗ್ರಾಮಾಂತರ) ಎಂ.ಎಸ್ ಕೋರಿ ಶೆಟ್ಟರ್(ಹಾವೇರಿ) ಡಿ. ಮಾದೇಗೌಡ(ಮೈಸೂರು) ಬಲ್‌ಬೀರ್ ಸಿಂಗ್( ಬೀದರ್)
ವಾಣಿಜ್ಯೋದ್ಯಮ -ಬಿ ವಿ ನಾಯ್ಡು(ಬೆಂಗಳೂರು) ಜಯರಾಮ್ ಬನಾನ್(ಉಡುಪಿ) ಜೆ.ಶ್ರೀನಿವಾಸ್(ಕೋಲಾರ)
ರಂಗಭೂಮಿ- ತಿಪ್ಪಣ್ಣ ಹೆಳವರ್(ಯಾದಗಿರಿ) ಲಲಿತಾಬಾಯಿ ಚನ್ನದಾಸರ್(ವಿಜಯಪುರ) ಗುರುನಾಥ್ ಹೂಗಾರ್(ಕಲಬುರಗಿ) ಪ್ರಭಾಕರ್ ಜೋಶಿ(ಉಡುಪಿ) ಶ್ರೀಶೈಲ ಹುದ್ದಾರ್(ಹಾವೇರಿ)
ಸಂಗೀತ- ನಾರಾಯಣ.ಎಂ(ದಕ್ಷಿಣ ಕನ್ನಡ) ಅನಂತಚಾರ್ಯ ಬಾಳಾಚಾರ್ಯ(ಧಾರವಾಡ) ಅಂಜಿನಪ್ಪ ಸತ್ಪಾಡಿ(ಚಿಕ್ಕಬಳ್ಳಾಪುರ) ಅನಂತ ಕುಲಕರ್ಣಿ( ಬಾಗಲಕೋಟೆ).
ಜಾನಪದ- ಸಹಮದೇವಪ್ಪ ಈರಪ್ಪ ನಡಿಗೇರ್(ಉತ್ತರ ಕನ್ನಡ), ಗುಡ್ಡ ಪಾಣಾರ-ದೈವ ನರ್ತಕ(ಉಡುಪಿ) ಕಮಲಮ್ಮ ಸೂಲಗಿತ್ತಿ(ರಾಯಚೂರು) ಸಾವಿತ್ರಿ ಪೂಜಾರ್(ಧಾರವಾಡ) ರಾಚಯ್ಯ ಸಾಲಿಮಠ(ಬಾಲಕೋಟೆ), ಮಹದೇಶ್ವರಗೌಡ ಲಿಂಗದಹಳ್ಳಿ, ವೀರಗಾಸೆ(ಹಾವೇರಿ)
ಶಿಲ್ಪಕಲೆ- ಪರುಶುರಾಮ್ ಪವಾರ್(ಬಾಗಲಕೋಟೆ), ಹನುಮಂತಪ್ಪ ಬಾಳಪ್ಪ ಹುಕ್ಕೇರಿ(ಬೆಳಗಾವಿ)
ಚಿತ್ರಕಲೆ- ಸಣ್ಣರಂಗಪ್ಪ ಚಿತ್ರಕಾರ್-ಕಿನ್ನಾಳ ಕಲೆ(ಕೊಪ್ಪಳ)
ಚಲನಚಿತ್ರ- ದತ್ತಣ್ಣ(ಚಿತ್ರದುರ್ಗ), ಅವಿನಾಶ್(ಬೆಂಗಳೂರು)
ಕಿರುತೆರೆ- ಸಿಹಿಕಹಿ ಚಂದ್ರು(ಬೆAಗಳೂರು)
ಯಕ್ಷಗಾನ- ಎಂ.ಎ ನಾಯಕ್(ಉಡುಪಿ) ಸುಬ್ರಹ್ಮಣ್ಯ ಧಾರೇಶ್ವರ್( ಉತ್ತರಕನ್ನಡ) ಸರಪಾಡಿ ಅಶೋಕ್ ಶೆಟ್ಟಿ(ದಕ್ಷಿಣ ಕನ್ನಡ)
ಬಯಲಾಟ- ಅಡವಯ್ಯ ಚ ಹಿರೇಮಠ್-ದೊಡ್ಡಾಟ( ಧಾರವಾಡ) ಶಂಕರಪ್ಪ ಮಲ್ಲಪ್ಪ ಹೊರಪೇಟೆ(ಕೊಪ್ಪಳ) ಎಚ್. ಪಾಂಡುರAಗಪ್ಪ(ಬಳ್ಳಾರಿ)
ಸಾಹಿತ್ಯ –ಶಂಕರ ಚಚಡಿ(ಬೆಳಗಾವಿ) ಪ್ರೋ.ಕೃಷ್ಣೇಗೌಡ(ಮೈಸೂರು) ಅಶೋಕಬಾಬು ನೀಲಗಾರ್(ಬೆಳಗಾವಿ) ಪ್ರೋ. ಅ.ರಾ ಮಿತ್ರ(ಹಾಸನ) ರಾಮಕೃಷ್ಣ ಮರಾಠೆ(ಕಲಬುರಗಿ)
ಶಿಕ್ಷಣ- ಕೋಟಿ ರಂಗಪ್ಪ(ತುಮಕೂರು) ಎಂಜಿ ನಾಗರಾಜ್ -ಸಂಶೋಧಕರು( ಬೆಂಗಳೂರು)
ಕ್ರೀಡೆ- ದತ್ತಾತ್ರೇಯ ಗೋವಿಂದ ಕುಲಕರ್ಣಿ(ಧಾರವಾಡ) ರಾಘವೇಂದ್ರ ಅಣ್ಣೇಕರ್(ಬೆಳಗಾವಿ)
ನ್ಯಾಯಾಂಗ- ವೆಂಕಟಾಚಲಪತಿ(ಬೆoಗಳೂರು) ನಂಜುoಡರೆಡ್ಡಿ(ಬೆoಗಳೂರು)
ನೃತ್ಯ ಕಮಲಾಕ್ಷಾಚಾರ್ಯ(ದಕ್ಷಿಣ ಕನ್ನಡ)

error: