May 3, 2024

Bhavana Tv

Its Your Channel

ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಭಕ್ತಿ ಭಜನಾ ಕಾರ್ಯಕ್ರಮ

ಹೊನ್ನಾವರ ತಾಲೂಕಿನ ಹರಡಸೆಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಪ್ರತಿಭಾನ್ವಿತರಿಂದ ಭಕ್ತಿ ಭಜನಾ ಕಾರ್ಯಕ್ರಮ ನಡೆಯಿತು.

ತನ್ನ ಅಪಾರ ಮಹಿಮೆ ಹಾಗೂ ಶಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ದೇವನು, ಶೃದ್ದೆಯಿಂದ ಬರುವ ಭಕ್ತರ ಬಾಳನ್ನು ಬೆಳಗುತ್ತಾ, ಬಡವರ ದೀನದಲಿತರ ಕಷ್ಟ ಕಾರ್ಪಣ್ಯವನ್ನು ಪರಿಹರಿಸುತ್ತಾ ಕರುಣಾಮಯಿಯಾಗಿ ಹರಡಸೆಯಲ್ಲಿ ನೆಲೆಸಿದ್ದಾನೆ.

ಇಲ್ಲಿ ಶ್ರೀ ದೇವರಿಗೆ ಶ್ರೀಗಂಧ ಲೇಪನ ಸೇವೆ, ಸರ್ವಾಭರಣ ಸೇವೆ, ಕಿಚಡಿ ನೈವೇದ್ಯ, ಕಾರ್ತಿಕ ದೀಪೋತ್ಸವದಂತ ಭಕ್ತಿ ಪ್ರಧಾನ ಸೇವೆಗಳು ನಡೆಯುತ್ತದೆ. ಅದರಲ್ಲೂ ‘ಶ್ರೀಗಂಧ ಲೇಪನ ಸೇವೆಯ ಹರಕೆಗೆ ಬಹುಬೇಗ ಸಂತುಷ್ಟನಾಗಿ ಭಕ್ತರ ಕೋರಿಕೆಯನ್ನು ಈಡೇರಿಸುತ್ತಾನೆ’ ಎಂಬ ಬಲವಾದ ನಂಬಿಕೆ ಭಕ್ತ ವೃಂದದಲ್ಲಿದೆ.

ಇನ್ನು ಕಾರ್ತಿಕ ಮಾಸದಲ್ಲಿ ದೀಪೋತ್ಸವ ಪ್ರಾರಂಭವಾಗಿ, ಊರಿನ ಹಾಗೂ ಪರ ಊರಿನ ಭಕ್ತಾದಿಗಳ ಸೇವೆಯಲ್ಲಿ ಎರಡು ತಿಂಗಳುಗಳ ಪರ್ಯಂತ ಜರುಗಲಿದೆ. ಕಾರ್ತಿಕ ಮಾಸದ ಪ್ರತಿದಿನ ಸಂಜೆ 7 ಗಂಟೆಯಿAದ ರಾತ್ರಿ 9 ಗಂಟೆಯ ತನಕ ಭಜನಾ ಕಾರ್ಯಕ್ರಮ, ನಂತರ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಮಾರ್ಗಶಿರ ಮಾಸದಲ್ಲೂ ಪ್ರತಿ ಶನಿವಾರ ಹಾಗೂ ಭಕ್ತರ ಅನುಕೂಲಕ್ಕೆ ತಕ್ಕಂತೆ ಇತರ ದಿನಗಳಲ್ಲೂ ಈ ದಿಪೋತ್ಸವ ಸೇವೆ ಜರುಗಲಿದೆ.

ಅದರಂತೆ ಹರಡಸೆಯ ನರಸಿಂಹ ನಾಯ್ಕರ ದೀಪೋತ್ಸವ ಸೇವೆಯು ಶೃದ್ದಾ ಭಕ್ತಿಯಿಂದ ನಡೆಯಿತು. ಭಜನಾ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಗಾಯಕರು ಹಾಗೂ ವಾದಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಜನಪ್ರಿಯ ಯಕ್ಷಗಾನ ಹಾಗೂ ಸಂಗೀತ ಕಲಾವಿದರಾದ ಹಿರೇಬೈಲ್ ಜನಾರ್ಧನ್ ನಾಯ್ಕರ ಹಾರ್ಮೋನಿಯಂ ವಾದನದಲ್ಲಿ, ಸುಬ್ರಹ್ಮಣ್ಯ ನಾಯ್ಕ್ ಮುಗ್ವಾ, ಪ್ರತಿಭಾ ವಾದ್ಯವೃಂದದ ಮಾರುತಿ ನಾಯ್ಕ್ ಮತ್ತು ಈಶ್ವರ ನಾಯ್ಕ್ ಸುಶ್ರಾವ್ಯವಾಗಿ ಹಾಡಿದರು. ಇವರಿಗೆ ಪೂರಕವಾಗಿ ತಬಲಾದಲ್ಲಿ ವಿನಾಯಕ ಭಟ್ ಹರಡಸೆ ಸಾಥ್ ನೀಡಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು.

ಇನ್ನು ಕುಮಟಾ ಎ.ಪಿ.ಎಂ.ಸಿ ಯ ಅಡಿಕೆ ಮತ್ತು ಕಾಳು ಮೆಣಸು ದಲಾಲರಾದ ಹಂದಿಗೋಣ ಗಣೇಶ ಪರಮೇಶ್ವರ ಭಟ್ ಕುಟುಂಬದವರು, ಹರಡಸೆಯ ದೇವಸ್ಥಾನದ ಹೆಸರಲ್ಲಿ ಮುದ್ರಿಸಿದ 2023 ರ ಕ್ಯಾಲೆಂಡರನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

error: