May 3, 2024

Bhavana Tv

Its Your Channel

ಬಿ.ಸಿ.ಎ. ಯಲ್ಲಿ ಎಸ್.ಡಿ.ಎಂ. ವಿದ್ಯಾರ್ಥಿಗಳ ಸಾಧನೆ

ಹೊನ್ನಾವರ: ಕ.ವಿ.ವಿ. ಧಾರವಾಡ ಇವರು ನಡೆಸಿದ ಬಿ.ಸಿ.ಎ. ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಂ. ಪಿ. ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಬಿ.ಸಿ.ಎ. 6 ನೇ ಸಮಿಸ್ಟರ್‌ನ ಎಲ್ಲಾ ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರ ಮೂಲಕ ಶೇ 100 ಫಲಿತಾಂಶ ದಾಖಲಾಗಿದೆ.

ಕರುಣಾ ಗೌಡ 94.38%, ಶ್ರುತಿ ನಾಯಕ 90.37%, ಹಾಗೂ ಆಶಿಕಾ ಭಂಡಾರಿ 89.87%, ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಬಿ.ಸಿ.ಎ. ವಿಭಾಗದ ಮುಖ್ಯಸ್ಥರಾದ ವಂದನಾ ಹೆಗಡೆ, ಪ್ರಾಚಾರ್ಯರಾದ ಡಾ. ವಿಜಯಲಕ್ಷಿö್ಮ ನಾಯ್ಕ, ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

error: