May 3, 2024

Bhavana Tv

Its Your Channel

ಹೊನ್ನಾವರ ಭಾರತೀಯ ವೈದ್ಯಕೀಯ ಸಂಘ (ಐ ಎಮ್ ಎ) ಮಹಿಳಾ ವೈದ್ಯರ ಘಟಕಕ್ಕೆ ಅತ್ಯುತ್ತಮ ಸೇವಾ ಪ್ರಶಸ್ತಿ.

ಹೊನ್ನಾವರ:- 2021-22 ನೇ ಸಾಲಿನ ಉತ್ತಮ ಸೇವೆಗಾಗಿ ಭಾರತೀಯ ವೈದ್ಯಕೀಯ ಸಂಘ (ಐ ಎಮ್ ಎ) ಹೊನ್ನಾವರ-ಮಹಿಳಾ ವೈದ್ಯರ ಘಟಕಕ್ಕೆ ಪ್ರಶಸ್ತಿಯನ್ನು ಮೂಡಬಿದರೆ ಆಳ್ವಾಸಿರಿಯಲ್ಲಿ ಏರ್ಪಡಿಸಿದ 88ನೇ ರಾಜ್ಯಮಟ್ಟದ ಐ ಎಮ್ ಎ ಸಮ್ಮೇಳನದಲ್ಲಿ ನೀಡಲಾಯಿತು.

ಐ ಎಮ್ ಎ ಹೊನ್ನಾವರ-ಮಹಿಳಾ ಘಟಕದ ಅಧ್ಯಕ್ಷರಾದ ಡಾ ಮಂಜುಳಾ ಯುವರಾಜ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು ಭಾರತೀಯ ವೈದ್ಯಕೀಯ ಸಂಘ ಹೊನ್ನಾವರದ ಎಲ್ಲ ಸದಸ್ಯರು ಇದಕ್ಕೆ ಪಾತ್ರರು ಎಂದು ಡಾ ಮಂಜುಳಾ ಯುವರಾಜ ಅವರು ತಮ್ಮ ಅಭಿಪ್ರಾಯ ವನ್ನು ವ್ಯಕ್ತಪಡಿಸಿದರು.

error: