May 2, 2024

Bhavana Tv

Its Your Channel

ಕಾಂಗ್ರೇಸ್ ಕಾರ್ಯಕರ್ತನ ಮೇಲೆ ಪೋಲಿಸ್ ಠಾಣಿಯಲ್ಲಿ ದೂರು ದಾಖಲು ಹಿನ್ನಲೆ ಬಿ.ಕೆ.ಹರಿಪ್ರಸಾದ ನೇತ್ರತ್ವದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ

ಕಾರವಾರ : ಕಾರವಾರದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸ ಠಾಣೆಯಲ್ಲಿ ದೂರು ದಾಖಲು ಮಾಡಿದ ಪ್ರಯುಕ್ತ ವಿಧಾನ ಪರಿಷತ ಸದ್ಯಸ್ಯರಾದ ಬಿ.ಕೆ.ಹರಿಪ್ರಸಾದ ನೇತೃತ್ವದಲ್ಲಿ ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಕಾರವಾರ ಕಾಂಗ್ರೆಸ ಪಕ್ಷದ ಸೋಷಿಯಲ್ ಮೀಡಿಯಾ ಘಟಕದ ಅಧ್ಯಕ್ಷ ಅಜಯ ಸಿಗ್ಲಿ ಎನ್ನುವವರ ಮೇಲೆ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ಹಾಕಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಉದಯ ಬ ಶೆಟ್ಟಿ ದೂರು ನೀಡಿದ್ದರು . ದೂರಿನನ್ವಯ ನಗರ ರಾಣೆ ಪಿಎಸ್‌ಐ ಅಜಯ್ ಸಿದ್ದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು . ಆದರೆ ಅಜಯ ವಿರುದ್ಧ ವಿನಾಕಾರಣ ದೂರು ದಾಖಲಿಸಲಾಗಿದೆ . ಇಲ್ಲಸಲ್ಲದ ಸೆಕ್ಷನ್‌ಗಳನ್ನ ಬಳಸಿ ಪ್ರಕರಣ ದಾಖಲಿಸಿ ಮಾನಸಿಕ ಹಿಂಸೆಯನ್ನು ಕೊಡಲು ಪೊಲೀಸರು ಮುಂದಾಗಿದ್ದಾರೆ ಎಂದು ಬಿ.ಕೆ.ಹರಿಪ್ರಸಾದ , ಮಾಜಿ ಶಾಸಕ ಸತೀಶ ಸೈಲ್ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು .ಈ ಕುರಿತು ಮಾತನಾಡಿದ ಬಿ.ಕೆ.ಹರಿಪ್ರಸಾದ್ , ಪಿಎಸ್‌ಐ ವಿನಾಕಾರಣ ಕೇಸ್ ಬುಕ್ ಮಾಡಿದ್ದು , ಕಾರವಾರದಲ್ಲಿ ಯಾವ ರೀತಿ ದೌರ್ಜನ್ಯ ಎಸಗಲಾಗುತ್ತಿದ ಎಂದು ಆಜಮ್ ಸಿಗ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನ ಹೇಳಿಕೊಂಡಿದ್ದಾರೆ . ಕಾನೂನು ಚೌಕಟ್ಟಿನಲ್ಲಿ ಪಿಎಸ್ ಐ ಕ್ರಮ ತೆಗೆದುಕೊಳ್ಳುವ ಬದಲು ಅಜಯ್ ಸಿದ್ದಿ ಮೇಲೆ ಹಲ್ಲೆ ಮಾಡಿದ್ದಾರೆ . ಪೊಲೀಸ ಅಧಿಕಾರಿಗಳು ತಮ್ಮ ನಿಷ್ಠೆಯನ್ನ ಸಂವಿಧಾನಕ್ಕೆ ತೋರಿಸಬೇಕು . ರಾಷ್ಟ್ರ ಧ್ವಜಕ್ಕೆ ಅವರ ನಿಷ್ಟೆ ಇರಬೇಕು . ಅದನ್ನ ಬಿಟ್ಟು ರಾಜಕಾರಣಿಗಳಿಗೆ ತೋರಿಸುವುದು ಸರಿಯಾದುದ್ದಲ್ಲ . ಪಿಎಸ್‌ಐ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು . ಈ ಬಗ್ಗೆ ಡಿಜಿಪಿ ಹಾಗೂ ಗೃಹ ಸಚಿವರಿಗೆ ದೂರು ಕೊಡಲಾಗುವುದು . ಇಂತಹ ದೌರ್ಜನ್ಯ ದೆಹಲಿಯಿಂದ ಬೆಂಗಳೂರಿಗೆ ನಡೆಯುತ್ತಿದೆ ಎಂದರು . ಸರ್ಕಾರದ ಕಾರ್ಯಕ್ರಮದ ಬಗ್ಗೆ ಧ್ವನಿ ಎತ್ತಿದರೆ ಅದನ್ನ ಮಟ್ಟ ಹಾಕುವ ಹುನ್ನಾರ ನಡೆಯುತ್ತಿದ್ದು , ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು . ಸ್ಥಳೀಯ ಶಾಸಕರ ಒತ್ತಡಕ್ಕೆ ಪೊಲೀಸರು ಒಳಗಾಗಿದ್ದಾರೆ, ಇಂತಹ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ನಾಯ್ಕ, ಶಂಭು ಶೆಟ್ಟಿ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ವರದಿ.. ವೇಣುಗೋಪಾಲ ಮದ್ಗುಣಿ.

error: