May 14, 2024

Bhavana Tv

Its Your Channel

ವಿದ್ಯಾರ್ಥಿಗಳಿಗೆ ಸುಲಭ ಸೇವಾ ಸಂಸ್ಥೆ ಕುಮಟಾ ಇವರಿಂದ ಗುರುತಿನ ಚೀಟಿ ವಿತರಣೆ.

ಕುಮಟಾ: ಸುಲಭ ಸೇವಾ ಸಂಸ್ಥೆ(ರಿ)ಕುಮಟಾ. ಇದರ ಸಹಕಾರದಿಂದ ಸರಕಾರಿ ಪ್ರಾಥಮಿಕ ಶಾಲೆ, ಅಘನಾಶಿನಿಯ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸುಲಭ ಸೇವಾ ಸಂಸ್ಥೆ ಅಧ್ಯಕ್ಷರಾದ ದಿವಾಕರ ಅಘನಾಶಿನಿ ಹಾಜರಿದ್ದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಿಸಿ ಶುಭ ಹಾರೈಸಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸದಸ್ಯರು. ಶಿಕ್ಷಕವೃಂದ ,ಊರ ನಾಗರಿಕರು ಹಾಜರಿದ್ದರು. ಶಿಕ್ಷಕರಾದ ಮಂಜುನಾಥ ನಾಯ್ಕ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಹಕಾರ ನೀಡಿದ ಸುಲಭ ಸೇವಾ ಸಂಸ್ಥೆಯ ಅಧ್ಯಕ್ಷರಾದ ದಿವಾಕರ ಅಘನಾಶಿನಿ ಇವರನ್ನು ಸನ್ಮಾನಿಸಿ ಗೌರವ ಸಮರ್ಪಣೆ ಮಾಡಿದರು.

error: