April 29, 2024

Bhavana Tv

Its Your Channel

ಕುಮಟಾ ಹೊನ್ಮಾವ್ ಕ್ರಾಸ್‌ನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ

ಕುಮಟಾ ಪಟ್ಟಣ ಹೊನ್ಮಾವ್ ಕ್ರಾಸ್‌ನಲ್ಲಿ ಸಂಭವಿಸಿದ ಗ್ಯಾಸ್ ಟ್ಯಾಂಕರ್ ಪಲ್ಟಿಯಿಂದ ಗ್ಯಾಸ್ ಲೀಕ್ ಆಗಿದ್ದು, ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು. ಭಾರತ್ ಗ್ಯಾಸ್ ನವರ ಕ್ವಿಕ್ ರೆಸ್ಪಾನ್ಸ್ ವೆಹಿಕಲ್‌ನ ತಾಂತ್ರಿಕ ಸಿಬ್ಬಂದಿಯು ಸ್ಥಳಕ್ಕಾಗಮಿಸಿ ಗ್ಯಾಸ್ ಲೀಕೇಜ್ ನಿಲ್ಲಿಸುವ ಮೂಲಕ ಆತಂಕವನ್ನು ದೂರ ಮಾಡಿದರು.

ಮಂಗಳೂರಿನಿAದ ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳೆಸಿದ್ದ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕುಮಟಾ ಪಟ್ಟಣದ ಹೊನ್ಮಾವ್‌ನ ದುರ್ಗಾ ದೇವಿ ದೇವಸ್ಥಾನ ಬಳಿ ಬೆಳಗ್ಗೆ 9.15 ಗಂಟೆಗೆ ಟ್ಯಾಂಕರ್ ಪಲ್ಟಿಯಾಗಿದೆ.

ಟ್ಯಾಂಕರ್ ಪಲ್ಟಿಯಾದ ರಭಸಕ್ಕೆ ಟ್ಯಾಂಕರ್‌ನ ಹಿಂಭಾಗದಲ್ಲಿರುವ ಗೇಜ್ ವ್ಹಾಲ್ ಓಪನ್ ಆಗಿ ಗ್ಯಾಸ್ ಲೀಕ್ ಆಗಿದೆ. ಈ ವಿಷಯ ಕಾಡ್ಗಿಚ್ಚಿನಂತೆ ಹರಡಿದ್ದರಿಂದ ಸ್ಥಳೀಯ ಮನೆಗಳಲ್ಲಿರುವ ಜನರು ಮನೆ ಬಿಟ್ಟು ದೂರ ಓಡುವಂತಾಯಿತು. ಈ ಬಗ್ಗೆ ಮಾಹಿತಿ ಪಡೆದ ಅಗ್ನಿ ಶಾಮಕ ದಳವು ತಕ್ಷಣ ಸ್ಥಳಕ್ಕೆ ತೆರಳಿ, ಟ್ಯಾಂಕರ್‌ನ ಗೇಜ್ ವ್ಹಾಲ್‌ಗೆ ಎಂಸೀಲ್ ಹಾಕಿ ಪ್ಯಾಕ್ ಮಾಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ, ಟ್ಯಾಂಕರ್‌ನಿAದ ಕನಿಷ್ಠ 1 ಕಿಮೀ ದೂರದಲ್ಲೆ ಹೆದ್ದಾರಿಯ ಎರಡು ಬದಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದರು. ಇದರಿಂದ ಗಂಟೆಗಳ ಕಾಲ ಹೆದ್ದಾರಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಸಮಸ್ಯೆಯಿಂದ ಪ್ರಯಾಣಿಕರು ಪರದಾಡುವಂತಾಯಿತು. ಹೆದ್ದಾರಿಯ ಎರಡು ಕಡೆಗಳಲ್ಲಿ ಕಿಮೀಗಳ ವರೆಗೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.
ಟ್ಯಾಂಕರ್ ಬಿದ್ದ ಸ್ಥಳದಿಂದ ಸಮೀಪದಲ್ಲಿರುವ ಮನೆಗಳಲ್ಲಿರುವ ಜನರಿಗೆ ಹೊರ ಹೋಗುವಂತೆ ಮತ್ತು ಯಾರೂ ಬೆಂಕಿ ಹಚ್ಚದಂತೆ ಪೊಲೀಸ್ ಇಲಾಖೆಯಿಂದ ಸೂಚನೆ ನೀಡಲಾಯಿತು.

error: