May 15, 2024

Bhavana Tv

Its Your Channel

ಫೆ.12 ಕ್ಕೆ ಡಾ. ಸಿ. ಫರ್ನಾಂಡೀಸ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 8ನೇ ಶಾಖೆ ಉದ್ಘಾಟನೆ

ಕುಮಟಾ: ಡಾ.ಸಿ.ಫರ್ನಾಂಡಿಸ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 8 ನೆಯ ಶಾಖೆಯು ಕುಮಟಾ ಪಟ್ಟಣದ ಪ್ರಮಿಳಾ ಕಾಂಪ್ಲೆಕ್ಸ್ನಲ್ಲಿ ಫೆ.12 ರಂದು ಬೆಳಿಗ್ಗೆ 10.30 ಘಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಸಹಕಾರಿಯ ಅಧ್ಯಕ್ಷ ಪೀಟರ್ ಮಿನಿನ್ ಮೆಂಡಿಸ್ ತಿಳಿಸಿದರು.

ಅವರು ಬುಧವಾರ ಕುಮಟಾ ಪಟ್ಟಣದ ಸಂಘದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಡಾ.ಸಿ.ಫರ್ನಾಂಡಿಸ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಹೊನ್ನಾವರದ ಪ್ರಭಾತನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಸುಮಾರು 106 ವರ್ಷಗಳ ಹಿಂದೆ 1916 ರಲ್ಲಿ ಉದಾರ ಮನಸ್ಸಿನ, ಬಡವರ ಬಗ್ಗೆ ಕಾಳಜಿ ಹೊಂದಿರುವ ಫಾ.ಎಂ.ಡಿಸೋಜಾ ಮಾರ್ಗದರ್ಶನದಲ್ಲಿ ರೋಮನ್ ಪಿಂಟೋ ಅಧ್ಯಕ್ಷತೆಯಲ್ಲಿ ಹೊನ್ನಾವರ ಕ್ಯಾಥೋಲಿಕ್ ಎಗ್ರಿಕಲ್ಚರ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅನಿಯಮಿತ ಎಂದು ನೋಂದಣಿಯಾಗಿ ತನ್ನ ಕಾರ್ಯವನ್ನು ಆರಂಭಿಸಿತು. ಖ್ಯಾತ ವೈದ್ಯ ಡಾ.ಸಿ.ಫರ್ನಾಂಡಿಸ್ 3 ಸಾವಿರ ರೂ. ಬಂಡವಾಳ ತೊಡಗಿಸಿ, ಸೊಸೈಟಿಯ ಏಳ್ಗೆಗೆ ಶ್ರಮಿಸಿದ್ದರು. ಇದೀಗ ಸಂಘವು 105 ವರ್ಷ ಪೂರ್ಣಗೊಳಿಸಿ, 106 ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದೆ ಎಂದರು.
ಫೆ.12 ರಂದು ಬೆಳಿಗ್ಗೆ 10.30 ಘಂಟೆಗೆ ಕುಮಟಾ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಹೊನ್ಮಾವ ಚರ್ಚನ ಧರ್ಮಗುರು ವಂದನಿಯ ಫಾದರ್ ಜೋನ್ ರೊಡ್ರಿಗಿಸ್ ನೂತನ ಶಾಖೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ದಿನಕರ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಸಹಕಾರಿಯ ಅಧ್ಯಕ್ಷ ಪೀಟರ್ ಮಿನಿನ್ ಮೆಂಡಿಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಹೆಡ್‌ಬಂದರ್‌ನ ಸಂತ ಅಂತೋನಿ ದೇವಾಲಯದ ಧರ್ಮಗುರು ಫಾ.ಜೋನ್ ಆಬೆಲ್ ಡಿಸೋಜಾ, ಮಣಕಿ ಸಂತ ಜೋಸೆಫರ್ ದೇವಾಲಯದ ಧರ್ಮಗುರು ಫಾ.ವಿಲ್ಸನ್ ಫರ್ನಾಂಡಿಸ್, ಕಡ್ಲೆ ಸೆಂಟ್ ವಿನ್ಸೆಂಟ್ ಪಲೋತ್ತಿ ಚರ್ಚ್ನ ಧರ್ಮಗುರು ಫಾ.ತಿಯೋಧರ್ ಡಿಕುನ್ಹಾ, ನಿರ್ಮಲಾ ವಿಕಾಸ ಟ್ರಸ್ಟ್ನ ನಿರ್ದೇಶಕ ಫಾ.ಜೋನ್ ವರ್ತ್, ಸಹಕಾರಿ ಸಂಘಗಳ ಉಪ ನಿಬಂಧಕಿ ಅನ್ನಪೂರ್ಣ ಎಚ್, ಸಹಾಯಕ ನಿಬಂಧಕ ನಾಗಭೂಷಣ ಕಲ್ಮನೆ, ಪ್ರಮೀಳಾ ಕಾಂಪ್ಲೆಕ್ಸ್ ಮಾಲೀಕ ಫೆಲಿಕ್ಸ್ ಫರ್ನಾಂಡಿಸ್ ಉಪಸ್ಥಿತರಿಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕಾಮಿನ್ ಲೋಪಿಸ್, ಹೆನ್ರಿ ಲೀಮಾ, ಅಣ್ಣಪ್ಪ ನಾಯ್ಕ, ಜೂಲಿಯಟ್ ಮಿರಾಂದಾ, ಮುಖ್ಯ ಕಾರ್ಯನಿರ್ವಾಹಕ ಕೊಲಿನ ಹೋರ್ಟ್ ಉಪಸ್ಥಿತರಿದ್ದರು.

error: