May 14, 2024

Bhavana Tv

Its Your Channel

ಪುರಸಭೆ ಉಪಾಧ್ಯಕ್ಷ ರಾಜೇಶ್ ಪೈ ಸಾಮಾನ್ಯ ಸಭೆಯಲ್ಲಿ ರುದ್ರಾವತಾರ

ಕುಮಟಾ ಪುರಸಭೆಯ ರಾ.ರಾ ಅಣ್ಣಾ ಪೈ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ 2022-23ನೇ ಸಾಲಿನ ಬಜೆಟ್ ಪೂರ್ವ ಸಮಾಲೋಚನಾ ಸಭೆಯಲ್ಲಿ ಉಪಾಧ್ಯಕ್ಷ ರಾಜೇಶ ಪೈ ಅವರು ಶಾಸಕರ ವಿರುದ್ಧ ಕಿಡಿಕಾರಿದರು.

ಕೋವಿಡ್ ಸಂದರ್ಭದಲ್ಲಿ ಕುಮಟಾ ಜಾತ್ರೆ ಕುರಿತು ಜನರಲ್ಲಿ ಜಿಜ್ಞಾಸೆ ಇತ್ತು. ಪುರಸಭೆ ಕೂಡ ಪ್ರಕಟಣೆ ಹೊರಡಿಸಿ, ಸರಳವಾಗಿ ಜಾತ್ರೆ ಆಚರಿಸುವ ಜೊತೆಗೆ ಅಂಗಡಿ ಮುಂಗಟ್ಟುಗಳನ್ನು ಹಾಕಲು ಅವಕಾಶ ವಿಲ್ಲ ಎಂದು ಸ್ಪಷ್ಟ ಸೂಚನೆ ನೀಡಲಾಗಿತ್ತು. ಆದರೆ ಶಾಸಕರು ಜಾತ್ರೆಯ ಮುನ್ನದಿನ ಆತುರದಲ್ಲಿ ತುರ್ತು ಸಭೆ ಕರೆದು, ಅದ್ಧೂರಿಯಾಗಿ ಜಾತ್ರೆ ನಡೆಸಲು ನಿರ್ಣಯ ಕೈಗೊಂಡಿದ್ದಾರೆ. ಈ ಸಭೆಗೆ ಅಧ್ಯಕ್ಷರು, ಉಪಾಧ್ಯಕ್ಷರು, ಛೇರಮೆನ್ ಹಾಗೂ ಸದಸ್ಯರನ್ನು ಆಹ್ವಾನಿಸಿಲ್ಲ. ಹಾಗಾದರೆ ನಾವು ಲೆಕ್ಕಕ್ಕಿಲ್ಲವೆ..? ಶಾಸಕರಿರಲಿ ಯಾರೇ ಇರಲಿ ಎಲ್ಲದಕ್ಕೂ ರಾಜಕಾರಣ ಮಾಡಬಾರದು. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಇಡೀ ಪುರಸಭೆಗೆ ಮಾಡಿದ ಅವಮಾನ ಎಂದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಾತ್ರೆಗಳಲ್ಲಿ ಅಂಗಡಿಗಳಿಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳು ಎಲ್ಲ ಪುರಸಭೆಗೆ ಲಿಖಿತ ರೂಪದಲ್ಲಿ ಆದೇಶ ಮಾಡಿದ್ದಾರೆ. ಆ ಕಾರಣದಿಂದ ಈ ವರ್ಷ ಅಂಗಡಿಗಳಿಗೆ ಅವಕಾಶವಿಲ್ಲ ಎಂದು ಮುಖ್ಯಾಧಿಕಾರಿಗಳು ಮೊದಲೇ ತಿಳಿಸಿದ್ದರು. ಆ ನಂತರ ಅಂಗಡಿಗಳಿಗೆ ಅವಕಾಶ ನೀಡಿರುವುದು ಯಾಕೆ? ಬಡ ಅಂಗಡಿಕಾರರು ಬಂದು ಪುನಃ ವಾಪಸ್ಸು ತೆರಳಿದ್ದಾರೆ. ಮೊದಲೇ ಕೊವಿಡ್‌ನಿಂದ ವ್ಯಾಪಾರಸ್ಥರು ತೀವೃ ಸಂಕಷ್ಟ ಎದುರಿಸಿದ್ದಾರೆ. ಈ ಗೊಂದಲದಿAದ ಬಡವರಿಗೆ ತೊಂದರೆಯಾಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಅಂಗಡಿಗಳಿಗೆ ಅನುಮತಿ ನೀಡಿರುವುದು ತಪ್ಪು ಎಂದು ನಾವು ಹೇಳುತ್ತಿಲ್ಲ. ನಮಗೂ ಮಾಹಿತಿ ನೀಡುವ ಕನಿಷ್ಠ ಸೌಜನ್ಯ ಮುಖ್ಯಾಧಿಕಾರಿಗಳಿಗೆ ಇಲ್ಲವೇ? ಈ ರೀತಿಯ ತಪ್ಪು ಮುಂದಿನ ದಿನಗಳಲ್ಲಿ ಮರುಕಳಿಸಬಾರದು ಎಂದು ಸದಸ್ಯರಾದ ಸಂತೋಷ ನಾಯ್ಕ, ಎಂ.ಟಿ.ನಾಯ್ಕ ಹಾಗೂ ಮಹೇಶ ನಾಯ್ಕ ವನ್ನಳ್ಳಿ ಆಗ್ರಹಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ನಾಯ್ಕ, ಪುರಸಭಾ ಸದಸ್ಯರಾದ ಅನಿಲ ಹರ್ಮಲಕರ ತುಳುಸು ಗೌಡ, ಹನುಮಂತ ಗೌಡ, ಶೈಲಾ ಗೌಡ, ಸುಮತಿ ಭಟ್ಟ, ಅನುರಾಧಾ ಬಾಳೇರಿ, ವಿನಯಾ ಜಾರ್ಜ್, ಟೋನಿ ರೊಡ್ರಿಗಿಸ್ ಸೇರಿದಂತೆ ಮತ್ತಿತರರು ಇದ್ದರು.

error: