April 29, 2024

Bhavana Tv

Its Your Channel

ಲುಕ್ಕೆರಿ ಬ್ರೀಜ್‌ನಿಂದ ಮೊಸಳೆಸಾಲದ ಕಾರ್ಲಾಂಡೆ ರಸ್ತೆಯ ಕಾಮಗಾರಿ ಕಳಪೆ -ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷರಾದ ಆರ್.ಎಚ್.ನಾಯ್ಕ ಆರೋಪ

ಕುಮಟಾ: ಕೆಲವು ದಿನಗಳ ಹಿಂದೆ ಮಾಣಿಕಟ್ಟಾದ 12 ಜನ ರೈತ ಮುಖಂಡರು, ಆರ್.ಎಚ್.ನಾಯ್ಕ ವಿನಾಕರಣ ಕೆ.ಬಿ.ಎಲ್ ಯೋಜನೆ ಅವೈಜ್ಞಾನಿಕ ಎಂದು ಆರೋಪ ಮಾಡುತ್ತಿದ್ದಾರೆ, ಯಾರ ರೀತಿಯಲ್ಲಿ ಅವೈಜ್ಞಾನಿಕವಾಗಿದೆ ಎಂದು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷರಾದ ಆರ್.ಎಚ್.ನಾಯ್ಕ ಅವರು ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡು ಸ್ಪಷ್ಟನೆ ನೀಡಿದರು.

ಕುಮಟಾದ ತಾಲೂಕಿನ ಲುಕ್ಕೆರಿ ಬ್ರೀಜ್‌ನಿಂದ ಮೊಸಳೆಸಾಲದ ಊರಿನ 7.8 ಕಿ.ಮಿ ವರೆಗಿನ ಕಾರ್ಲಾಂಡೆ ರಸ್ತೆಯ ಕಾಮಗಾರಿ ಕಳಪೆಯಾಗಿರುವುದರ ಬಗ್ಗೆ ವರ್ಷಗಳ ಹಿಂದೆ ಗಂಭೀರ ಆರೋಪ ಮಾಡಿದ್ದೆ. ಆದರೆ ಇಲ್ಲಿಯ ತನಕ ಸಂಭAಧ ಪಟ್ಟ ಇಲಾಖೆಯ ಅಧಿಕಾರಿಗಳಾಗಲಿ ಅಥವಾ ಗುತ್ತಿಗೆದಾರರು ಆಗಲಿ ಕಳಪೆ ಕಾಮಗಾರಿ ನಡೆದಿರುವುದರ ಬಗ್ಗೆ ಸಮಜಾಯಿಶಿ ನೀಡುವ ಬಗ್ಗೆ ಯಾವುದೆ ಕೆಲಸ ಮಾಡಿದಿಲ್ಲ.

ಆದರೆ ಇತ್ತಿಚಿನ ದಿನಗಳಲ್ಲಿ ಮಾಣಿಕಟ್ಟಾದ 12 ಜನ ರೈತರು ಮುಖಂಡರು ಒಂದು ಸಮಿತಿಯ ರಚಿಸಿಕೊಂಡು ಅವೈಜ್ಞಾನಿಕ ಕಾಮಗಾರಿ ನಡೆದಿಲ್ಲ ಎಂದು ನನ್ನ ಹೇಳಿಕೆಗೆ ಬಗ್ಗೆ ಆಪಾದನೆ ಮಾಡುತ್ತಿದ್ದಾರೆ. ತಾಲೂಕಿನ ಲುಕ್ಕೆರಿ ಬ್ರೀಜ್‌ನಿಂದ ಮೊಸಳೆಸಾಲದ ಊರಿನ 7.8 ಕಿ.ಮಿ ವರೆಗಿನ ಕಾಲ್ಲೆಂಡ್ ರಸ್ತೆಯ ಸಾರ್ವಜನಿಕರಿಗೆ ರೈತರಿಗೆ ಹಾಗೂ ಮೀನುಗಾರರಿಗೆ ಅನುಕೂಲಕರವಾದ ರಸ್ತೆಯಾಗಿದೆ. ಮಾಣಿಕಟ್ಟಾ ಗಜನಿ ಪ್ರದೇಶವೂ ಸೇರಿದಂತೆ ಐದಾರೂ ಗಜನಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಅಕ್ಕ ಪಕ್ಕದಲ್ಲಿ ಕೆಬಿಎಲ್ ಯೋಜನೆಯಲ್ಲಿ ಬಂಡ ನಿರ್ಮಾಣದ ಕಾಮಗಾರಿಯು ಆಗಬೇಕಾಗಿರುತ್ತದೆ. ಆದರೆ ರಸ್ತೆಯ ಗಜನಿಯ ಪಕ್ಕದ ಭಾಗದಲ್ಲಿ ಮಾತ್ರ ಬಂಡ್ ನಿರ್ಮಾಣದ ಕಾಮಗಾರಿಯನ್ನು ಮಾಡಿದ್ದಾರೆ. ಆದರೆ ನದಿಯ ಪಕ್ಕದಲ್ಲಿನ ನೀರಿನ ತೀವ್ರತೆ ಜಾಸ್ತಿ ಇರುವ ಭಾಗದಲ್ಲಿ ಬಂಡ್ ನಿರ್ಮಾಣದ ಕಾಮಗಾರಿಯನ್ನು ಮಾಡದೆ ಹಾಗೆ ಬಿಟ್ಟಿರುವುದು ಅವೈಜ್ಞಾನಿಕವಾಗಿರುವುದು ಕನಿಷ್ಟ ಪಕ್ಷ ಎಂತವರಿಗಾದರೂ ತಿಳಿಯುತ್ತದೆ. ನದಿಯ ಪಕ್ಕ ಪಿಚಿಂಗ್‌ನ್ನು ಸಹ ನಿರ್ಮಾಣ ಮಾಡದೆ ಇರುವುದರಿಂದ ಮಳೆಗಾಲದಲ್ಲಿ ನದಿಯು ಉಕ್ಕಿ ಪ್ರವಾಹ ಉಂಟಾದಾಗ ನೀರು ರಸ್ತೆಯ ಮೇಲಿಂದ ಗಜನಿಯ ಪ್ರದೇಶಕ್ಕೆ ನುಗ್ಗುತ್ತದೆ. ಇದರಿಂದ ರಸ್ತೆಯು ಹಾಳಾಗುತ್ತದೆ, ಕಳೆದ ಭಾರಿಯು ಸಹ ನೀರು ಉಕ್ಕಿ ಪ್ರವಾಹ ಉಂಟಾಗಿ ನೀರು ಗಜನಿ ಪ್ರದೇಶಕ್ಕೂ ಬಂದಿದೆ, ಇದು ಕೆಲವು ರೈತರಿಗೆ ಅಷ್ಟೆ ಅಲ್ಲದೆ ಮೀನುಗಾರರಿಗೆ ಹಾಗೂ ಲುಕ್ಕೇರಿ ಬ್ರೀಜ್‌ನಿಂದ ಮೊಸಳೆಸಾಲದ ಭಾಗದ ಗ್ರಾಮಸ್ಥರಿಗೂ ಸಮಸ್ಯೆಯಾಗಿದೆ.
ಈ ಗಜನಿ ಅಂಚಿನಲ್ಲಿ ಮಾಣಿಕಟ್ಟಾ ಗಜನಿ ಪ್ರದೇಶ ಮಾತ್ರ ಒಳಗೊಂಡಿಲ್ಲ ಒಟ್ಟು ಆರು ಗಜನಿ ಪ್ರದೇಶ ಒಳಗೊಂಡಿದೆ. ಕಲ್ಲಕಟ್ಟಾ ಗಜನಿ,ತುಂಬ್ರಿಕಟ್ಟಾ ಗಜನಿ, ಹೋರಿ ಹೊಳೆ ಗಜನಿ, ಮಾಣಿಕಟ್ಟಾ ಹೀಗೆ ಒಟ್ಟು 6 ಒಳಗೊಂಡಿದೆ. .ಸಾರ್ವಜನಿಕರಿಗೆ ರೈತರಿಗೆ ವಿಶೇಷವಾಗಿ ಮೀನುಗಾರರಿಗೆ ಅನುಕೂಲವಾಗುವಂತಹ ಬಂಡ್ ಅನ್ನು ವೈಜ್ಞಾನಿಕವಾಗಿ ಮಾಡಿದ್ರೆ ಮಾತ್ರ ಬಹಳ ಉತ್ತಮವಾಗಿರುತ್ತದೆ, ಈ ಕಾಮಗಾರಿಯು ವೈಜ್ಞಾನಿಕವಾಗಿ ಆಗುವುದಿಲ್ಲ ಎನ್ನುವ ಆರೋಪ ಮಾಡುತ್ತಿದ್ದೇನೆ. ಈ ಮಾಣಿಕಟ್ಟಾ ರೈತರು 12 ಜನ ಸಮಿತಿಯನ್ನು ರಚಿಸಿಕೊಂಡು ನನ್ನ ಮೇಲೆ ವಿನಾಕಾರಣ ರಾಜಕೀಯ ಪ್ರೆರೀತವಾಗಿ ಆಪಾದನೆಯನ್ನು ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದರು.

ಒAದು ವೇಳೆ 2 ಮೂರು ವರ್ಷದಲ್ಲಿ ಈ ಕೆಲಸ ಹಾನಿಗೆ ಒಳಗಾದರೆ ಈ ಜವಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಿರಿ ನೀವು ಮಾಣಿಕಟ್ಟಾದ 12 ರೈತರ ಮುಖಂಡರು ತೆಗೆದುಕೊಳ್ಳುತ್ತಿರಾ. ವಲ್ಡ್ ಬ್ಯಾಂಕ್‌ನಿAದ ಮಾಡಿರುವ ಈ ಕಾಮಗಾರಿ ಎನಾದರೂ 5 ವರ್ಷದ ಒಳಗಾಗಿ ಎನಾದರೂ ಹಾನಿಗೆ ಒಳಗಾದರೆ ಯಾರು ಜವಬ್ದಾರರರು, ಈ ಬಗ್ಗೆ ಉತ್ತರ ಸಣ್ಣ ನೀರಾವರಿ ಇಲಾಖೆಯವರು ನೀಡಬೇಕು, ಗುತ್ತಿಗೆದಾರರು ನೀಡಬೇಕು
ಅದರ ಬದಲು ನನಗೆ ರೈತ ಮುಖಂಡರಿAz ಉತ್ತರ ನೀಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು

.

error: