May 15, 2024

Bhavana Tv

Its Your Channel

ಕುಮಟಾ ಕೊಡ್ಕಣಿ ಗ್ರಾ.ಪಂ ವ್ಯಾಪ್ತಿಯ ಶಶಿಹಿತ್ತಲ ಮತ್ತು ಚಿಪ್ಪಿಬೊಳೆ ಗ್ರಾಮಕ್ಕೆ ನೀರಿನ ಪೂರೈಕೆಯಾಗುವಂತೆ ಆಗ್ರಹಿಸಿ, ಗ್ರಾ ಪಂ ಎದುರು ಪ್ರತಿಭಟನೆ

ಕುಮಟಾ ತಾಲೂಕಿನ ಕೊಡ್ಕಣಿ ಗ್ರಾ.ಪಂ ವ್ಯಾಪ್ತಿಯ ಶಶಿಹಿತ್ತಲ ಮತ್ತು ಚಿಪ್ಪಿಬೊಳೆ ಗ್ರಾಮದ ಜನರಿಗೆ ಸರಿಯಾಗಿ ನೀರಿನ ಸೌಲಭ್ಯವಿಲ್ಲ. ಬೇಸಿಗೆಯಲ್ಲಿ ಬಹಳಷ್ಟು ನೀರಿನ ಸಮಸ್ಯೆಯಾಗುತ್ತಿದೆ. ಈ ೨ ಗ್ರಾಮಕ್ಕೆ ಸಮರ್ಪಕ ನೀರಿನ ಪೂರೈಕೆಯಾಗುವಂತೆ ಆಗ್ರಹಿಸಿ, ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.

ಈ ಗ್ರಾಮಕ್ಕೆ ಕೆಲವು ವರ್ಷಗಳಿಂದ ದಿನಬಿಟ್ಟು ದಿನ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ದಿನನಿತ್ಯದ ಉಪಯೋಗಕ್ಕೆ ಸಾಲುತ್ತಿಲ್ಲ. ಪ್ರತಿನಿತ್ಯ ನೀರು ಪೂರೈಸಲು ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದರೂ, ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಕಳೆದ ವರ್ಷ ಮೇ ೧೯ ರಂದು ನೀರಿನ ವ್ಯವಸ್ಥೆ ಮಾಡುವ ಬಗ್ಗೆ ಅಧ್ಯಕ್ಷರು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಈ ವರ್ಷ ಮೇ. ೩೦ ರಂದು ಪುನಃ ಮನವಿ ಸಲ್ಲಿಸಿದಾಗ ಮೇಲಧಿಕಾರಿಗಳ ಜತೆ ಚರ್ಚಿಸಿ ತಿಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ಗ್ರಾಮದಲ್ಲಿ ಸುಮಾರು ೮೦ ಕುಟುಂಬಗಳು ನೀರಿಗಾಗಿ ಪರಿತಪಿಸುತ್ತಿದ್ದಾರೆ, ನಮ್ಮ ಬೇಡಿಕೆಗೆ ಲಿಖಿತ ಉತ್ತರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೊಡ್ಕಣಿ ಗ್ರಾ.ಪಂ ವ್ಯಾಪ್ತಿಯ ಶಶಿಹಿತ್ತಲ ಮತ್ತು ಚಿಪ್ಪಿಬೊಳೆ ಗ್ರಾಮಸ್ಥರ ಬೇಡಿಕೆಯಂತೆ ಜೂ.೪ ರಿಂದ ಪ್ರತಿದಿನ ನೀರು ಪೂರೈಕೆ ಮಾಡಲಾಗುತ್ತದೆ. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಮುಗಿದ ಬಳಿಕ ಅಧಿಕಾರಿಗಳು ಮತ್ತು ಸಾರ್ವಜನಿಕರ ನೇತೃತ್ವದಲ್ಲಿ ಸಭೆ ನಡೆಸಿ, ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ಅಧ್ಯಕ್ಷರು ಲಿಖಿತ ರೂಪದಲ್ಲಿ ಭರವಸೆ ನೀಡಿದ ನಂತರ ಪ್ರತಿಭಟನೆ ಮುಕ್ತಾಯಗೊಳಿಸಿದರು.
ಪ್ರತಿಭಟನೆಯಲ್ಲಿ ನಾರಾಯಣ ನಾಯ್ಕ, ಸುನೀಲ ನಾಯ್ಕ, ಬಾಬು ನಾಯ್ಕ, ಗಣಪತಿ ನಾಯ್ಕ, ಮಂಜುನಾಥ ನಾಯ್ಕ, ರೋಹಿಣಿ ನಾಯ್ಕ, ಸಾವಿತ್ರಿ ನಾಯ್ಕ, ಬೇಬಿ ನಾಯ್ಕ, ಸುಮಾ ನಾಯ್ಕ, ರೇವತಿ ನಾಯ್ಕ, ದೀಪಾ ನಾಯ್ಕ, ಶಾಂತಿ ನಾಯ್ಕ ಸೇರಿದಂತೆ ಮತ್ತಿತರರು ಇದ್ದರು.

error: