May 15, 2024

Bhavana Tv

Its Your Channel

ರಸ್ತೆ ಅಪಘಾತದಲ್ಲಿ ನಿಧನರಾದ ಪತ್ರಕರ್ತ ವಿನಾಯಕ ಬ್ರಹ್ಮೂರ ಅವರಿಗೆ ಶ್ರದ್ಧಾಂಜಲಿ

ಕುಮಟಾ: ರಸ್ತೆ ಅಪಘಾತದಲ್ಲಿ ನಿಧನರಾದ ಪತ್ರಕರ್ತ ವಿನಾಯಕ ಬ್ರಹ್ಮೂರ ಅವರಿಗೆ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯ್ ವತಿಯಿಂದ ಕುಮಟಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿನಾಯಕ ಬ್ರಹ್ಮೂರ ಭಾವಚಿತ್ರಕ್ಕೆ ಶಾಸಕ ದಿನಕರ ಶೆಟ್ಟಿ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಪ್ರವೀಣ ಹೆಗಡೆ, ಕರ್ನಾಟಕ ಜರ್ನಲಿಸ್ಟ್ ಯೂನಿಯ್ ಅಧ್ಯಕ್ಷ ಅನ್ಸಾರ್ ಶೇಖ್ ಸೇರಿದಂತೆ ಪತ್ರಕರ್ತರು ಪುಷ್ಪ ನಮನ ಸಲ್ಲಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಉತ್ತಮ ಪತ್ರಕರ್ತ ಎಂಬ ಬಿರುದು ಪಡೆದ ವಿನಾಯಕ ಅವರ ಅಕಾಲಿಕ ನಿಧನ ತುಂಬಲಾರದ ನಷ್ಟವಾಗಿದೆ. ನೇರ ನುಡಿ, ನಿಷ್ಠುರ ವರದಿ ಮೂಲಕ ಹೆಸರು ಗಳಿಸಿದ್ದರು. ಅವರು ಅಂಕೋಲಾ ತಾಲೂಕಿನವನಾದರೂ, ಕುಮಟಾ ತಾಲೂಕಿನ ಒಡನಾಟವಿತ್ತು. ಎರಡೂ ತಾಲೂಕಿನ ಅಭಿವೃದ್ಧಿ ಕುರಿತು ಬಹಳ ಬಾರಿ ನನ್ನ ಜತೆ ಚರ್ಚಿಸಿದ್ದರು. ಕಳೆದ 2 ತಿಂಗಳು ನನ್ನ ಜತೆ ಮಾಧ್ಯಮ ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಸಮಾಜ ಅತ್ಯುತ್ತಮ ಪತ್ರಕರ್ತನನ್ನು ಕಳೆದುಕೊಂಡAತಾಗಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಕಳೆದ 2 ತಿಂಗಳಿನಿAದ ನನ್ನ ಮಾಧ್ಯಮ ಸಲಹೆಗಾರರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ನನ್ನ ದುರಾದೃಷ್ಟ ನನ್ನ ಬಲಗೈ ಮುರಿದಂತಾಗಿದೆ. ರಾಜಕಾರಣಿಗಳಿಗೆ ಸಾಮಾಜಿಕ ಜಾಲತಾಣ ಅತ್ಯಗತ್ಯ. ಅವರು ಅತ್ಯುತ್ತಮವಾಗಿ ನಿರ್ವಹಿಸಿ, ಸಾಕಷ್ಟು ಪ್ರಚಾರ ಮಾಡಿದ್ದರು. ಅತ್ಯಂತ ಚಿಕ್ಕವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ದೂರ ಹೊರಟಿರುವುದು ಅತ್ಯಂತ ಬೇಸರದ ಸಂಗತಿ ಎಂದರು.
ಕಾ.ನಿ.ಪತ್ರಕರ್ತರ ಸಂಘ ಅಧ್ಯಕ್ಷ ಪ್ರವೀಣ ಹೆಗಡೆ ಮತನಾಡಿ, ಹುಟ್ಟು-ಸಾವು ಸಹಜ. ಸಣ್ಣ ವಯಸ್ಸಿನಲ್ಲಿ ಅತ್ಯುನ್ನತ ಸಾಧನೆ ಮಾಡಿ, ವಿನಾಯಕ ಬ್ರಹ್ಮೂರು ನಮ್ಮನ್ನು ಅಗಲಿದ್ದಾರೆ. ಮನುಷ್ಯ ಜೀವನ ಶಾಶ್ವತವಲ್ಲ. ಇರುವ ಸಮಯದಲ್ಲಿಯೇ ಸಾಧಿಸಿ, ಇತರರಿಗೆ ಸ್ಪೂರ್ತಿಯಾಗಬೇಕು. ವಿನಾಯಕ ಬ್ರಹ್ಮೂರು ಇಲೆಕ್ಟ್ರಾನಿಕ್ ಮಾಧ್ಯಮಕ್ಕೆ ಹೇಳಿ ಮಾಡಿಸಿದಂತಹ ವ್ಯಕ್ತಿ. ಇವರು ನಮ್ಮ ಮಧ್ಯೆ ಇಲ್ಲದಿರುವುದು ಖೇದದ ಸಂಗತಿ ಎಂದರು.
ಪತ್ರಕರ್ತರ ಹವ್ಯಾಸಗಳು ನಮ್ಮ ಜೀವನಕ್ಕೆ ತೊಂದರೆಯಾಗಬಾರದು. ವಿನಾಯಕ ಅವರ ಬರವಣಿಗೆ, ಕಾರ್ಯತತ್ಪರತೆಯನ್ನು ಅನುಸರಿಸಬೇಕು ಎಂದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯ್ ಅಧ್ಯಕ್ಷ ಅನ್ಸಾರ್ ಶೇಖ್ ಮಾತನಾಡಿ, ಅಲ್ಪ ಅವಧಿಯಲ್ಲಿ ಯುವಕನ ಶ್ರದ್ಧಾಂಜಲಿ ಸಭೆ ನಡೆಸುತ್ತಿರುವುದು ನೋವಿನ ಸಂಗತಿ. ವಿನಾಯಕ ಕಳೆದ ನಾಲ್ಕೈದು ವರ್ಷಗಳಿಂದ ನಿಟಕ ಸಂಬAಧ ಹೊಂದಿದ್ದರು. ಚರ್ಚೆ-ವಿಚರ್ಚೆಗಳಲ್ಲಿ ತೊಡಗಿಕೊಂಡು ಸ್ನೇಹಮಯಿ ವ್ಯಕ್ತಿತ್ವ ಹೊಂದಿದ್ದರು. ಚಿಕ್ಕ ಸುದ್ದಿಗಳನ್ನು ವಿಶೇಷ ವರದಿಯನ್ನಾಗಿ ಬರೆಯುತ್ತಿದ್ದರು. ಒಂದು ವಸ್ತುವನ್ನು ಚಿತ್ರವನ್ನಾಗಿ ಬಿಂಬಿಸುವ ಕ್ರಿಯಾಶೀಲತೆ ಹೊಂದಿದ್ದರು. ಅವರು ನಮ್ಮನ್ನು ಅಗಲಿರುವುದು ನೋವಿನ ವಿಚಾರ ಎಂದರು.
ವಿನಾಯಕ ಬ್ರಹ್ಮೂರು ಕುರಿತು ಕಾ.ನಿ.ಪತ್ರಕರ್ತರ ಸಂಘ ಉಪಾಧ್ಯಕ್ಷ ಎಂ.ಜಿ.ನಾಯ್ಕ, ಖಜಾಂಚಿ ವಿ.ಡಿ.ಭಟ್ಟ, ಜಿಲ್ಲಾ ಪ್ರತಿನಿಧಿ ಗಣೇಶ ರಾವ್, ಪತ್ರಕರ್ತರಾದ ಸದಾನಂದ ದೇಶಭಂಡಾರಿ, ಶಂಕರ ಶರ್ಮಾ, ನಾಗರಾಜ ಪಟಗಾರ, ಶಾಸಕರ ಆಪ್ತ ಕಾರ್ಯದರ್ಶಿ ಶ್ರೀಧರ ಭಟ್ಟ ಮಾತನಾಡಿದರು.
ಕಾ.ನಿ.ಪತ್ರಕರ್ತರ ಸಂಘ ಕಾರ್ಯದರ್ಶಿ ಮಂಜುನಾಥ ಈರಗೊಪ್ಪ, ಪತ್ರಕರ್ತರಾದ ಎಸ್.ಎಸ್.ಹೆಗಡೆ, ಸಂತೋಷ ನಾಯ್ಕ, ಸುಬ್ರಹ್ಮಣ್ಯ ಭಟ್ಟ, ಯೊಗೇಶ ಮಡಿವಾಳ ಉಪಸ್ಥಿತರಿದ್ದರು. ಪತ್ರಕರ್ತ ಜಯದೇವ ಬಳಗಂಡಿ ನಿರೂಪಿಸಿ, ವಂದಿಸಿದರು.

error: