April 29, 2024

Bhavana Tv

Its Your Channel

ಜಿಲ್ಲಾ ಹಂತದ ಹಾಲಕ್ಕಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕುಮಟಾ:-ಹಾಲಕ್ಕಿ ಒಕ್ಕಲಿಗರ ಸಂಘ (ರಿ) ಕುಮಟಾವು 2021-22 ನೇ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿಯಲ್ಲಿ ಶೇಕಡ 85 ಮತ್ತು ಪಿಯುಸಿಯಲ್ಲಿ ಶೇಕಡ 80 ಕ್ಕಿಂತ ಹೆಚ್ಚು ಅಂಕ ಪಡೆದ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸಮಾಜದ ಪ್ರತಿಭಾವಂತರನ್ನು ಗೌರವಿಸಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಜೊತೆಗೆ ಕ್ರೀಡೆ ಹಾಗೂ ಇನ್ನಿತರ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರತಿಭೆ ತೋರಿಸಿರುವ ಪ್ರತಿಭಾವಂತರನ್ನು ಸಹ ಗೌರವಿಸಲು ಯೋಜಿಸಿದೆ. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ದೃಢೀಕರಿಸಿದ ತಮ್ಮ ಅಂಕಪಟ್ಟಿ/ರಾಜ್ಯ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಪ್ರಮಾಣ ಪತ್ರ, ವರ್ಗಾವಣೆ ಪ್ರಮಾಣ ಪತ್ರ ಮತ್ತು ವಿಳಾಸ ದೃಢೀಕರಿಸುವ ಆಧಾರ ಕಾರ್ಡ್ ಇಲ್ಲವೇ ಪಡಿತರ ಚೀಟಿ ಹಾಗೂ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಸಂಪರ್ಕಿಸುವ ಮೊಬೈಲ್ ಸಂಖ್ಯೆಗಳೊAದಿಗೆ ತಮ್ಮ ಅರ್ಜಿಯನ್ನು 22 ಜುಲೈ 2022 ರ ಒಳಗಾಗಿ
ಅಧ್ಯಕ್ಷರು/ಕಾರ್ಯದರ್ಶಿ, ಹಾಲಕ್ಕಿ ಒಕ್ಕಲಿಗರ ಸಂಘ (ರಿ) ಕುಮಟಾ, ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನ ದೀವಗಿ, ಅಂಚೆ: ದೀವಗಿ, ತಾ; ಕುಮಟಾ(ಉ.ಕ) ಇವರಿಗೆ ಅಂಚೆ ಮೂಲಕ ಇಲ್ಲವೇ ಖುದ್ದಾಗಿ ಕಾರ್ಯಾಲಯದ ಸಮಯದಲ್ಲಿ ಬಂದು ನೀಡಬಹುದು ಎಂದು ಸಂಘದ ಅಧ್ಯಕ್ಷ ಗೋವಿಂದಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶ್ರೀಧರ ಗೌಡ ಕಾರ್ಯದರ್ಶಿ 8310764316/ ಮಹೇಂದ್ರ ಗೌಡ ವ್ಯವಸ್ಥಾಪಕರು 7349635289 ಕರೆ ಮಾಡಿ ಮಾಹಿತಿ ಪಡೆದುಕೊಳ್ಳಲು ತಿಳಿಸಿದ್ದಾರೆ

error: