April 29, 2024

Bhavana Tv

Its Your Channel

ವಿಜೃಂಭಣೆಯಿoದ ನಡೆದ ಚಂದಾವರದ ಹನುಮಂತ ದೇವರ ಪಲ್ಲಕ್ಕಿ ಮೆರವಣಿಗೆ

ಕುಮಟಾ: ಡಿ.ಜೆ ಹಾಡಿಗೆ ಕುಣಿದು ಕುಪ್ಪಳಿಸುತ್ತಿರುವ ಜನರು, ಪೂರ್ಣ ಕುಂಭವನ್ನು ಹೊತ್ತು ಸಾಗುತ್ತಿರುವ ಮಹಿಳೆಯರು, ಇನ್ನೊಂದೆಡೆ ದೇವರಿಗೆ ಹಣ್ಣುಕಾಯಿ ಸಮರ್ಪಿಸಿ ಪೂಜೆ ಸಲ್ಲಿಸುತ್ತಿರುವ ಜನರು ಈ ದೃಶ್ಯ ಕಂಡು ಬಂದಿರುವುದು, ಪುರಾಣ ಪ್ರಸಿದ್ದ ಶಕ್ತಿ ಕ್ಷೇತ್ರ ಚಂದಾವರದ ಹನುಮಂತ ದೇವರ ಪಲ್ಲಕ್ಕಿ ಮೆರವಣಿಗೆಯಲ್ಲಿ. ಸುಂದರ ದೃಶ್ಯ.

ಹೌದು ಚಂದಾವರ ಸೀಮೆಯ ಹನುಮಂತ ದೇವರು ಎಂದರೆ ನಂಬಿ ಬರುವ ಭಕ್ತರ ಕಷ್ಟಗಳನ್ನು ಪರಿಹರಿಸುವ ಆರಾಧ್ಯ ದೇವರು, ಚಂದಾವರ ಹನುಮಂತ ಪುರಾಣ ಪ್ರಸಿದ್ದ ಹಿನ್ನೆಲೆಯನ್ನು ಹೊಂದಿರುವ ಶಕ್ತಿ ಕ್ಷೇತ್ರ, ಪ್ರತಿ ವರ್ಷ ಕಾರ್ತಿಕ ದೀಪೋತ್ಸವ ಮುಗಿದ ಬಳಿಕ ಹನುಮಂತ ದೇವರ ಪಲ್ಲಕ್ಕಿ ಸೀಮೆಯ ಸಂಚಾರವನ್ನು ಕೈಗೊಂಡು ಭಕ್ತರ ಕಷ್ಟಗಳನ್ನು ಪರಿಸುವುದು ವಾಡಿಕೆ. ಚಂದಾವರ ಸೀಮೆಗೆ ಒಳಪಡುವ ಊರುಗಳಿಗೆ ಪ್ರತಿವರ್ಷವೂ ಪಲ್ಲಕ್ಕಿ ಮೇರವಣಿಗೆ ತೆರಳಿ ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾ ಬಂದಿದೆ. ಈ ವರ್ಷವೂ ಪಲ್ಲಕ್ಕಿಯು ಸೀಮೆಯ ಸಂಚಾರಕ್ಕೆ ತೆರಳಿದ್ದು, ಚಂದಾವರ, ವಡಗೇರಿ, ಅಂತರವಳ್ಳಿ, ದೀವಗಿ, ದುಂಡುಕುಳ್ಳಿ, ಊರುಗಳಿಂದ ಹೆಗಡೆ ಗ್ರಾಮಕ್ಕೆ ಸಂಚರಿಸಿ, 19 ದಿನಗಳ ಕಾಲ ಹೆಗಡೆಯ ಶಾಂತಿಕಾ ಪರಮೇಶ್ವರಿ ದೇವಾಲಯಲ್ಲಿ ವಾಸ್ತವ್ಯ ಹೂಡಿತ್ತು. ಆ ವೇಳೆ, ಹೆಗಡೆ ಗ್ರಾಮದ ಪ್ರತಿಯೊಂದು ಊರು, ಹಾಗೂ ಕೇರಿಗಳಿಗೆ ಭಕ್ತರು ಮನೆಗಳಿಗೆ ತೆರಳಿತು. ಈ ವೇಳೆ ಭಕ್ತಾದಿಗಳು ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾ. ಪ್ರತಿ ದಿನವೂ ಪಲ್ಲಕ್ಕಿ ಇರುವ ಊರುಗಳಲ್ಲಿ ಭಜನೆ, ಯಕ್ಷಗಾನ, ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ದಂಡಾವಳಿ ಪೂಜೆ, ವಿಶೇಷಗಳನ್ನು ಸಲ್ಲಿಸುತ್ತಾರೆ, 19 ದಿನಗಳ ಕಾಲ ಹೆಗಡೆ ಗ್ರಾಮದಲ್ಲಿ ವಾಸ್ತವ್ಯ ಹೂಡಿದ ನಂತರ ಬೃಹತ ಮೆರವಣಿಗೆಯಲ್ಲಿ ದೇವರ ಪಲ್ಲಕ್ಕಿಯು ಸಾಗಿ ಚಂದಾವರದ ಹನುಮಂತ ದೇವಾಲಯದಲ್ಲಿ ಮೂಲ ಸ್ಥಾನಕ್ಕೆ ಬಂತು ಕುಳಿತು ಕೊಂಡಿತ್ತು. ಮೆರವಣಿಗೆಯಲ್ಲಿ 5000 ಸಾವಿರಕ್ಕೂ ಅಧಿಕ ಮಂದಿ ಮೇರವಣಿಗೆಯಲ್ಲಿ ಸಾಗಿದರು. ಎಲ್ಲೆಲ್ಲೂ ಕೆಸರಿ ಭಾವುಟವೂ ರಾರಾಜಿಸುತ್ತಿತ್ತು, ಜೈ ಶ್ರೀರಾಮ ಎನ್ನುವ ಜಯಘೋಷದೊಂದಿಗೆ ಪಲ್ಲಕ್ಕಿಯಲ್ಲಿ ಜನರು ಸಂಚರಿಸಿತು. ಜಿ.ಜೆ. ಹಾಡಿಗೆ ಯುವಕರಂತು ಕುಣಿದು ಕುಪ್ಪಳಿಸಿದರು, ಈ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದAತೆ ಬಿಗಿ ಪೋಲಿಸ್ ಬಂದೋಬಸ್ತ ಅನ್ನು ಕೈಗೋಳ್ಳಲಾಗಿತ್ತು.
ವರದಿ:- ನಟರಾಜ ಗದ್ದೆಮನೆ. ಕುಮಟಾ

error: