May 2, 2024

Bhavana Tv

Its Your Channel

ಕುಮಟಾದ ಮಣಕಿ ಮೈದಾನದಲ್ಲಿ ಧ್ವಜಾರೋಹಣ ನೇರವೇರಿಸಿದ ಸಹಾಯಕ ಆಯುಕ್ತರಾದ ರಾಘವೇಂದ್ರ

ಕುಮಟಾ: ರಾಷ್ಟ ಧ್ವಜವನ್ನು ಹಾರಿಸುವಂತಹ ಸುವರ್ಣ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ, ಇದು ನನ್ನ ವೃತ್ತಿ ಜೀವನದಲ್ಲಿ ಸಿಕ್ಕಿ ಅಮೃತ ಘಳಿಗೆ ಎಂದು ಸಹಾಯಕ ಆಯುಕ್ತರಾದ ರಾಘವೇಂದ್ರ ಹೇಳಿದರು.

ಅವರು ಕುಮಟಾದ ಮಣಕಿ ಮೈದಾನದಲ್ಲಿ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು. ಅಗಷ್ಟ 15ರಂದು ನಮ್ಮ ದೇಶಕ್ಕೆ ಸ್ವಾಂತತ್ರ‍್ಯ ಸಿಕ್ಕಿರುವುದು ಅಸಂಖ್ಯಾತ ಹೋರಾಟದಿಂದ ಸ್ವಾತಂತ್ರ‍್ಯ ಸಿಕ್ಕಿದ ದಿನವಾಗಿದ್ದು ಜಗತ್ತಿನಲ್ಲಿ ದೊಡ್ಡ ಮಟ್ಟದ ಸ್ವಾತಂತ್ರ‍್ಯ ಕಾಂತ್ರಿಗೆ ನಾಂದಿ ಹಾಡಿದ್ದು ನಮ್ಮ ದೇಶ ಭಾರತವಾಗಿದೆ. ನಮ್ಮ ಸ್ವಂತತ್ರ‍್ಯದ ಪ್ರತಿ ಹಂತದಲ್ಲೂ ನಾವು ಸೃರಿಸುತ್ತಾ ಹೋಗಬೇಕಾಗಿದೆ. ಸ್ವಾತಂತ್ರ‍್ಯ ಹೋರಾಟಕ್ಕೆ ಪ್ರತಿ ಹಂತದಲ್ಲೂ ಜನರಲ್ಲಿ ಸ್ವಾತಂತ್ರ‍್ಯದ ಹೋರಾಟದ ಕಿಚ್ಚು ಕಾಣಬಹುದಾಗಿದೆ. ಈ ನಾವು ಅಭಿವೃದ್ದಿ ಹೊಂದುತ್ತಿರುವ ದೇಶವಾಗಿದ್ದು, ರಕ್ಷಣೆ, ವಾಯುದಳ, ಭೂದಳ, ವಿಜ್ಞಾನ ತಂತ್ರಜ್ಞಾನದ ಕ್ಷೇತ್ರದಲ್ಲೂ ನಾವು ಅಭಿವೃದ್ದಿಯನ್ನು ಹೊಂದಿದ್ದೇವೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ ಮಾತನಾಡಿ, ನಮ್ಮ ದೇಶವು ಜಗತ್ತಿನದಲ್ಲಿ ಉತ್ತಮವಾದ ಸಂವಿಧಾನ ಹೊಂದಿರುವ ಪ್ರಜಾಪ್ರಭುತ್ವ ರಾಷ್ಟವಾಗಿದ್ದು, ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಗಳಿಗೆ ನಾವು ಸಾಕ್ಷಿಯಾಗುತ್ತಿರುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು. ಈ ವೇಳೆ ವಿವಿಧ ಶಾಲಾ ವಿಧ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆ, ಹಾಗೂ ನೃತ್ಯವೂ ನೆರೆದಿದ್ದ ಜನರ ಗಮನಸೆಳೆಯಿತು.
ಪಿ.ಎಸ್.ಐ. ನವೀನ್ ನಾಯ್ಕ ಅವರ ನೇತೃತ್ವದಲ್ಲಿ ಪಥ ಸಂಚಲನ, ಹಾಗೂ ಶಾಲಾ ಎನ್.ಸಿ.ಸಿ. ಸ್ಕೌಟ್ ಮತ್ತು ಗೈಡ್ಸ್, ಪತಸಂಚಲನ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಇದ್ದರು. ವೇಧಿಕೆಯಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಆಜ್ಞಾ ನಾಯಕ, ಪುರಸಭಾ ಮುಖ್ಯಾಧಿಕಾರಿ ಅಜಯ, ಪುರಸಭಾ ಅಧ್ಯಕ್ಷೆ, ಅನುರಾಧಾ ಬಾಳೇರಿ, ಸಿ.ಪಿ.ಐ ತಿಮ್ಮಪ್ಪ ನಾಯ್ಕ, ಪಿ.ಎಸ್.ಐ ನವೀನ್ ನಾಯ್ಕ , ರವಿಗುಡ್ಡಿ, ಪುರಸಭಾ ಸದಸ್ಯರು ಇದ್ದರು.

error: