May 15, 2024

Bhavana Tv

Its Your Channel

ಹೆಗಡೆ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಂಭ್ರಮದ 67ನೇ ಕನ್ನಡ ರಾಜ್ಯೋತ್ಸವ

ಕುಮಟಾ; ತಾಲೂಕಿನ ಹೆಗಡೆ ಹೆಣ್ಣು ಮಕ್ಕಳ ಶಾಲೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವ ಅತ್ಯಂತ ಸಡಗರ ಸಂಭ್ರಮದಿAದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಗಡೆ ಕ್ಲಸ್ಟರ್ ಸಿ. ಆರ್. ಪಿ, ಎನ್. ಆರ್. ನಾಯ್ಕ ಅವರು ನವೆಂಬರ್ ತಿಂಗಳು ನಮಗೆಲ್ಲ ಅತ್ಯಂತ ಹೆಮ್ಮೆ ಸ್ವತಂತ್ರವಾದ ಬಳಿಕ ಭಾಷಾವಾರು ಪ್ರಾಂತ ರಚನೆಯಾಗಿ ಕರ್ನಾಟಕದ ಏಕೀಕರಣಗೊಂಡು ರಾಜ್ಯ ಉದಯವಾಯಿತು. ಇಂಗ್ಲಿಷ್ ವ್ಯಾಮೋಹದ ನಡುವೆಯೂ ಕನ್ನಡ ತನ್ನ ಜೀವಂತಿಕೆ ಉಳಿಸಿಕೊಂಡಿದೆ. ಕನ್ನಡ ಭಾಷೆಯ ಉಳಿವಿನಲ್ಲಿ ಯಕ್ಷಗಾನದ ಕೊಡುಗೆ ದೊಡ್ಡದಿದೆ ಎಂಬುದನ್ನು ಮರೆಯಬಾರದು ಎಂದರು. ಮುಖ್ಯಾಧ್ಯಾಪಕಿ ಮಂಗಲ ಹೆಬ್ಬಾರ್ ಮಾತನಾಡಿ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದ್ದು ಇದುವರೆಗೆ ಕುವೆಂಪು, ಬೇಂದ್ರೆ, ಕಾರ್ನಾಡ್, ಕಂಬಾರ್, ಮಾಸ್ತಿ ಆದಿಯಾಗಿ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಂತ ಒಂದು ಭಾಷೆ ಅದು ನಮ್ಮ ಭಾಷೆ ಎನ್ನುವುದಕ್ಕೆ ಅತೀವ ಸಂತಸವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಿಕ್ಷಕಿ ನಯನ ಪಟಗಾರ ರವರು ನಾವು ಶಿಕ್ಷಣ ಪಡೆಯಲು ಬೇರೆ ಬೇರೆ ಭಾಷೆಗಳನ್ನು ಅಧ್ಯಯನ ಮಾಡಿದ್ದರೂ ನಾವು ಮನೆಯಲ್ಲಿ ಮತ್ತು ವ್ಯವಹಾರ ಮಾಡುವಾಗ ನಮ್ಮ ಮಾತೃಭಾಷೆ ಕನ್ನಡದ ಮೂಲಕವೇ ವ್ಯವಹರಿಸಬೇಕು ಅಂದಾಗ ಮಾಡ ಮಾತ್ರ ಕನ್ನಡ ಭಾಷೆ ಹೆಚ್ಚು ಪ್ರಚಲಿತದಲ್ಲಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು. ಶಿಕ್ಷಕ ಶ್ರೀಧರ್ ಗೌಡ ಸ್ವಾಗತಿಸಿದರು. ವೇದಿಕೆಯಲ್ಲಿ ಶಿಕ್ಷಕಿರಾದ ಶ್ಯಾಮಲ ಪಟಗಾರ, ಭಾಗ್ಯಲಕ್ಷ್ಮಿ ನಾಯಕ, ಲಕ್ಷ್ಮಿ ನಾಯ್ಕ ಮತ್ತು ಶಾಲಾ ಮಂತ್ರಿ ರಕ್ಷಾ ನಾಯ್ಕ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ನಮ್ರತ ಪಟಗಾರ, ಧನ್ಯಶ್ರೀ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ನಂತರದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು..

error: