May 2, 2024

Bhavana Tv

Its Your Channel

ಆರ್.ಎನ್.ಎಸ್. ವಿದ್ಯಾನಿಕೇತನ ವಾರ್ಷಿಕ ಸ್ನೇಹಸಮ್ಮೇಳನ

ಮುರುಡೇಶ್ವರ :- ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಬಹಳ ಮುಖ್ಯ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯ, ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಸಂಬOಧಗಳ ಪ್ರಾಮುಖ್ಯತೆಯನ್ನು ತಿಳಿಸುವುದರ ಜೊತೆಗೆ ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಿ ಬೆಳೆಸುವಲ್ಲಿ ಮಾರ್ಗದರ್ಶನ ನೀಡಬೇಕು ಹಾಗೂ ಪೋಷಕರು ತಮ್ಮ ಮಕ್ಕಳಿಗೆ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಮುಂದುವರಿಯಲು ಪ್ರೋತ್ಸಾಹ ನೀಡಿ ನಮ್ಮ ಆರ್.ಎನ್.ಶೆಟ್ಟಿ ರವರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಕನಸನ್ನು ನನಸಾಗಿಸಬೇಕು. ಮುರುಡೇಶ್ವರ ಹಾಗೂ ಆರ್.ಎನ್ ಶೆಟ್ಟಿ ರವರ ಹೆಸರನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕೆಂದು ಆರ್.ಎನ್.ಎಸ್ ವಿದ್ಯಾನಿಕೇತನದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿದ ಹಿರಿಯ ವರದಿಗಾರರಾದ ಶ್ರೀ ಜಿ. ಯು ಭಟ್ ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಆರ್.ಎನ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾದ ಡಾ. ಸುಧೀರ್ ಪೈ ಕೆ.ಎಲ್ ವಹಿಸಿದ್ದರು. ಅವರು ಮಕ್ಕಳಿಗೆ ಬೋಧನೆಯನ್ನ ಮಾತ್ರ ಮಾಡದೇ, ನೀತಿ, ಪ್ರಾಮಾಣಿಕತೆಗಳ ಮಹತ್ವವನ್ನರಿತು ಅವುಗಳನ್ನು ಸ್ವತಃ ಪಾಲಿಸಿ ಮಕ್ಕಳಿಗೆ ಆದರ್ಶಪ್ರಾಯರಾಗಬೇಕು ಎಂದು ಹೇಳಿದರು. ಪೋಷಕರು ಮಕ್ಕಳನ್ನು ದೇಶದ ಸತ್ಪçಜೆಗಳನ್ನಾಗಿ ರೂಪಿಸಬೇಕು, ಹಿರಿಯರಿಗೆ ಗೌರವಿಸುವ, ಕಿರಿಯರನ್ನು ಆದರಿಸುವ, ನೊಂದವರ ಕಂಬನಿಯೊರೆಸುವ ವ್ಯಕ್ತಿಗಳಾಗಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಮುರುಡೇಶ್ವರದ ಆರ್.ಎನ್.ಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶ್ರೀ. ದಿನೇಶ್ ಗಾಂವಕರ್ ಮಾತನಾಡಿದರು. ಆರ್.ಎನ್.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ. ಮಾಧವ ಪಿ. ಉಪಸ್ಥಿತರಿದ್ದರು ಹಾಗೂ ಆರ್.ಎನ್.ಎಸ್ ವಿದ್ಯಾನಿಕೇತನದ ಪ್ರಾಚಾರ್ಯರಾದ ಶ್ರೀಮತಿ. ಗೀತಾ ಕಿಣಿ ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು. ಶಿಕ್ಷಕಿ ಶ್ರೀಮತಿ. ಮಾಲತಿ ನಾಯ್ಕ ಸ್ವಾಗತಿಸಿ, ಶ್ರೀಮತಿ. ವಂದನಾ ರಾಣೆ ವಂದಿಸಿದರು. ಶ್ರೀಮತಿ. ಶೃತಿ ನಾಯ್ಕ, ಗೌತಮಿ ಶೇಟ್, ಕರ‍್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕರ‍್ಯಕ್ರಮ ನೆರವೇರಿತು.

error: