May 15, 2024

Bhavana Tv

Its Your Channel

ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ

ಯಲ್ಲಾಪುರ : ರೈತರು ಅನುಕೂಲಕ್ಕೆ ಸರ್ಕಾರ ವಿವಿಧ ಯೋಜನೆಗಳ ಮೂಲಕ ನಿರಂತರ ಸಹಕಾರ ನೀಡುತ್ತಿದ್ದು ತನ್ನ ಉತ್ಪನ್ನದ ಶೇ. ೧೬ರಷ್ಟು ಭಾಗವನ್ನು ರೈತರು ಸಲುವಾಗಿ ಮಿಸಲಿಟ್ಟಿದೆ,ದೇಶದ ಜನರಿಗೆ ಅನ್ನ ನೀಡುವ ರೈತ ಹಾಗೂ ದೇಶವನ್ನು ಕಾಯ್ದ ವೈರಿಗಳಿಂದ ರಕ್ಷಿಸುವ ಸೈನಿಕರಿರ್ವರೂ ದೈವ ಸಮಾನರಾಗಿದ್ದು ಅವರು ರಾಷ್ಟ್ರದ ಬೆನ್ನೆಲುಬಾಗಿದ್ದಾರೆ. ವಾಣಿಜ್ಯ ಬೆಳೆಯನ್ನು ಹೊರತುಪಡಿಸಿ ಉಳಿದೆಲ್ಲಾ ಬೆಳೆಗಳನ್ನು ಬೆಳೆಯುವ ಕೃಷಿಕರು ಸಂಕಷ್ಟದಲ್ಲಿದ್ದಾರೆ . ರೈತ ತಾನು ಬೆಳೆದ ಬೆಳೆಗೆ ತಾನೇ ದರ ನಿಗದಿಪಡಿಸುವ ದಿನ ಬರುವವರೆಗೂ ರೈತರಿಗೆ ಕಷ್ಟ ತಪ್ಪಿದ್ದಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರವರು ಹೇಳಿದರು. ಅವರು ಯಲ್ಲಾಪುರ ತಾಲೂಕಿನ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು , ಸರ್ಕಾರಗಳು ರೈತರ ಕಷ್ಟ ಹೋಗಲಾಡಿಸಲು ನಿರಂತರವಾಗಿ ವಿವಿಧ ಯೋಜನೆಗಳ ಮೂಲಕ ನೆರವಾಗುತ್ತಿದೆ . ಕ್ಷೇತ್ರದಲ್ಲಿ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದ ಅವರು , ಕೃಷಿ ಅಭಿಯಾನದ ಮೂಲಕ ಹಳ್ಳಿ ಹಳ್ಳಿಗಳಿಗೆ ಹೋಗಿ ರೈತರಿಗೆ ಇಲಾಖೆಯ ಸೌಲಭ್ಯಗಳ ಮಾಹಿತಿ ನೀಡಲಾಗುತ್ತಿದೆ . ಕೃಷಿ ಅಧಿಕಾರಿಗಳು ಕಚೇರಿಯಲ್ಲಿರದೇ ರೈತರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸಬೇಕು. ಆಸಕ್ತಿಯಿಂದ ಅದರ ಪರಿಹಾರಕ್ಕೆ ಪ್ರಯತ್ನಿಸಿದಾಗ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ , ಕೃಷಿ ಇಲಾಖೆಗೂ ಉತ್ತಮ ಹೆಸರು ಬರುತ್ತದೆ ಎಂದರು . ಉತ್ತಮ ಕೃಷಿಕ ಪ್ರಶಸ್ತಿಗೆ ಭಾಜನರಾದ ವೆಂಕಟರಮಣ ಹೆಗಡೆ ತೋಟದಕಲ್ಲಳ್ಳಿ , ಕಮಲಾಕರ ಹೆಗಡೆ ಚವತ್ತಿ , ಗಂಗೂಬಾಯಿ ಗಾಂವ್ಕರ ಮದನೂರ , ಹೇಮಂತ ಮರಾಠಿ , ಗಣಪತಿ ನಾಯ್ಕ ಆನಗೋಡ ಅವರನ್ನು ಗೌರವಿಸಲಾಯಿತು . ಈ ಸಂದರ್ಭದಲ್ಲಿ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ , ಎಪಿಎಂಸಿ ಅಧ್ಯಕ್ಷರಾದ ಎಂ.ಜಿ.ಭಟ್ಟ ಸಂಕದಗುAಡಿ , ಜಿಪಂ ಮಾಜಿ ಸದಸ್ಯರಾದ ರಾಘವೇಂದ್ರ ಭಟ್ಟ , ರೂಪಾ ಬೂರ್ಮನೆ , ತಾಪಂ ಮಾಜಿ ಉಪಾಧ್ಯಕ್ಷೆ ಸುಜಾತಾ ಸಿದ್ದಿ , ಮಾಜಿ ಸದಸ್ಯ ರಾಧಾ ಹೆಗಡೆ , ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ , ಗ್ರಾಪಂ ಅಧ್ಯಕ್ಷ ವಿನಾಯಕ ನಾಯ್ಕ , ಉಪಾಧ್ಯಕ್ಷೆ ರಂಜನಾ ಆಚಾರಿ , ಕೃಷಿಕ ಸಮಾಜದ ಉಪಾಧ್ಯಕ್ಷ ಶ್ಯಾಮ ಹೆಗಡೆ ಉಪಸ್ಥಿತರಿದ್ದರು . ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ನಿರ್ವಹಿಸಿದರು .

ವರದಿ.. ವೇಣುಗೋಪಾಲ ಮದ್ಗುಣಿ.

error: