May 17, 2024

Bhavana Tv

Its Your Channel

ಕಳಚೆಯಲ್ಲಿ ಮಣ್ಣು ಕುಸಿತದಿಂದ ಅಪಾಯಕ್ಕೆ ಸಿಲುಕಿದ ಉಪಾಧ್ಯ ಭಟ್ಟರ ಕುಟುಂಬ ಸುರಕ್ಷಿತ ಸ್ಥಳಕ್ಕೆ ತಾಲೂಕು ಆಡಳಿತದಿಂದ ಸ್ಥಳಾಂತರ

ಯಲ್ಲಾಪುರ : ತಾಲೂಕಿನ ಕಳಚೆ ಗ್ರಾಮದ ರವೀಂದ್ರ ಉಪಾಧ್ಯ ಎನ್ನುವವರು ತಾನು ಮತ್ತು ನನ್ನ ತಂದೆ, ತಾಯಿ ಅವರು ಮನೆಗೆ ಹತ್ತಿರ ಮಣ್ಣು ಕುಸಿದು ತೊಂದರೆ ಅನುಭವಿಸುತ್ತಿದ್ದೆವೆ ತೀವ್ರ ಕಷ್ಟದಲ್ಲಿರುವ ಬಗ್ಗೆ ತಮ್ಮನ್ನು ರಕ್ಷಿಸುವಂತೆ ಸಾಮಾಜಿಕ ಜಾಲತಾಣದ ಮೂಲಕವಾಗಿ ಮನವಿ ಮಾಡಿದರು. ಸಚಿವರಾದ ಶಿವರಾಮ ಹೆಬ್ಬಾರ್ ಅವರ ಈ ಬಗ್ಗೆ ಅತೀವವಾದ ಕಾಳಜಿ ವಹಿಸಿ ಉಪಾಧ್ಯ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವAತೆ ತಾಲೂಕಾಡಳಿಕ್ಕೆ ಸೂಚಿಸಿದರು, ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ ಅವರ ತಂಡವು ಸಚಿವರ ಹಾಗೂ ಜಿಲ್ಲಾಡಳಿತ ಸೂಚನೆಯಂತೆ ಇಂದು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯು ಸಹ ರವೀಂದ್ರ ಉಪಾಧ್ಯ ಅವರನ್ನು ಹಾಗೂ ಅವರ ಕುಟುಂಬಸ್ಥರನ್ನು ಭೇಟಿಯಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಸಚಿವರ ಸೂಚನೆಯಂತೆ ತಹಶೀಲ್ದಾರ ತಂಡವು ಈ ರಕ್ಷಣಾ ಕಾರ್ಯಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ತಾಲೂಕಾಡಳಿತ, ಅಗ್ನಿ ಶಾಮಕದಳ ಹಾಗೂ ಗ್ರಾಮ ಪಂಚಾಯತ ಸದಸ್ಯರು, ಊರ ನಾಗರಿಕರ ಈ ಕಾರ್ಯಕ್ಕೆ ಸಚಿವರಾದ ಶಿವರಾಮ ಹೆಬ್ಬಾರವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ರಕ್ಷಣಾ ಕಾರ್ಯಾಚರಣೆ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷಿ ಬಂಟ, ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ರತ್ನಾ ಬಾಂದೇಕರ, ಸದಸ್ಯರಾದ ಗಜಾನನ ಭಟ್ಟ ಪ್ರಮುಖರಾದ ಉಮೇಶ ಭಾಗ್ವತ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ.

error: