April 30, 2024

Bhavana Tv

Its Your Channel

ಜನ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಯಲ್ಲಾಪುರ ತಾಲೂಕಿನ ಅತಿವೃಷ್ಟಿ ಪ್ರದೇಶವನ್ನು ವೀಕ್ಷಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್

ಯಲ್ಲಾಪುರ:- ಯಲ್ಲಾಪುರ ತಾಲೂಕಿನಲ್ಲಿ ಇತ್ತಿಚೆಗೆ ಸುರಿದ ಬಾರಿ ಮಳೆ ಬಿದ್ದು ಅತಿವೃಷ್ಟಿಯಿಂದಾಗಿರುವ ಪ್ರದೇಶವಾದ ಗುಳ್ಳಾಪುರ,ಅರಬೈಲ ಘಾಟ, ತಳಕೆಬೈಲ, ಕಳಚೆ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭೂ ಕುಸಿತ ಗುಳ್ಳಾಪುರದ ಸೇತುವೆ ಬಿದ್ದು ಹೊಗಿದೆ.ಅರಬೈಲ ಘಟ್ಟದ ರಸ್ತೆಯು ಸಹ ಕುಸಿದು ಸಂಚಾರಕ್ಕೆ ತೊಂದರೆಯಾಗಿದೆ. ತಳಕೆಬೈಲ, ಕಳಚೆ ರಸ್ತೆ ಭೂ ಕುಸಿತದಿಂದ ಭೂಮಿ ಬಿರುಕು ಬಿಟ್ಟಿದೆ.ಕಳಚೆ ಪ್ರದೇಶದಲ್ಲಿ ಊರಿನ ಒಳಗೆ ಹೋಗಲು ಸಂಪರ್ಕದ ಸಮಸ್ಯೆ ಇದೆ.ಈಗಾಗಲೇಸಹಾಯಕ ಆಯುಕ್ತರು, ತಹಶೀಲ್ದಾರರು ಈಗಾಗಲೇ ಬಂದು ಸಮಸ್ಯೆಯನ್ನು ಆಲಿಸಿದ್ದಾರೆ. ಆದರೂ ಸಹ ನಾನು ಇದನ್ನು ಸ್ವತಃ ಪರಿಕ್ಷಿಸಲು ಬಂದಿದ್ದೇನೆ. ಸಹಾಯುಕ ಆಯುಕ್ತರು , ತಹಶೀಲ್ದಾರರು ಈ ಪ್ರದೇಶಗಳಿಗೆ ಬಂದು ಜನರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಇಲ್ಲಿಯ ಪರಿಸ್ಥಿತಿ ಯನ್ನು ನೋಡಿದಾಗ ಸ್ಥಿತಿ ಗಂಭಿರವಾಗಿದ್ದ ಬಗ್ಗೆ ತಿಳಿಯಿತು.ಒಂದಿಷ್ಟು ಕಡೆ ಪೂರ್ಣ ಪ್ರಮಾಣದಲ್ಲಿ ಕುಸಿದು ಕೊಂಡು ಹೋಗಿ ರಸ್ತೆಯೇ ಇಲ್ಲವಾಗಿದೆ. ಸಣ್ಣ ನಾಲೆಗಳಿಂದ ನೀರು ಮುಂದೆ ಸಾಗಿ ಕೊಳ್ಳವಾಗಿ ಹರಿದು ಮನೆ ,ತೋಟವೆಲ್ಲ ಕೊಚ್ಚಿಕೊಂಡು ಹೋಗಿದೆ. ಕೆಲವು ಮನೆಗಳು ಬಿರುಕು ಬಿಟ್ಟಿದ್ದು ಯಾವುದೇ ಸಮಯದಲ್ಲಿ ಬಿಳುವ ಹಂತದಲ್ಲಿದೆ. ಈಗಲೂ ಕೂಡ ಜನರು ಮನೆಯಿಂದ ಬೇರೆ ಸ್ಥಳಗಳಿಗೆ ಹೋಗುತ್ತಿರುವುದು ಕಂಡು ಬಂತು. ಪ್ರಾಥಮಿಕ ಹಂತದ ಮಾಹಿತಿ ಪ್ರಕಾರ ೧೧ರಿಂದ ೧೫ ಮನೆಗಳು ಸಂಪೂರ್ಣ ಹಾನಿಯಾಗಿದ್ದು ಕೆಲವು ಮನೆಗಳು ಭಾಗಶಃ ಕುಸಿದಿದೆ.ಎಲ್ಲವನ್ನು ಸರ್ವೇ ಮಾಡಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ.ಎಲ್ಲ ಮನೆಗಳು ಒಂದೆ ಕಡೆ ಇರದೇ ಬೇರೆ ಬೇರೆ ಭಾಗದಲ್ಲಿದೆ.ಹೋಗಿ ಬರಲು ಸಮಯ ಬೇಕು. ಮನೆಯ ಮೇಲ್ಬಾಗದಲ್ಲಿ ಸಣ್ಣ ಹೊಂಡ ತೆಗೆದು ಅದರಲ್ಲಿ ನೀರನ್ನು ಶೇಖರಿಸಿಡುತ್ತಿದ್ದರು.ಅದು ಸಹ ಕೊಚ್ಚಿಕೊಂಡು ಹೋಗಿ ಕುಡಿಯಲಿಕ್ಕೆ ನೀರಿಲ್ಲದೆ ತೊಂದರೆನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಮಾಡುವ ನಿಟ್ಟಿನಲ್ಲಿ ಒಂದಿಷ್ಟು ವಿಚಾರಗಳನ್ನು ಭೂಗೋಳಿಕವಾಗಿ ಅಭ್ಯಾಸ ಮಾಡಬೇಕಾಗಿದೆ.ಈ ಕಡೆ ಕಾಳಿ ಮತ್ತೊಂದು ಕಡೆ ಗಂಗಾವಳಿ ಎರಡು ನದಿಗೆ ಪ್ರವಾಹ ಬಂದಿದೆ ಇದಕ್ಕೆ ಕಾರಣ ಜೋರಾಗಿ ಮಳೆ ಬಿದ್ದಿರುವುದು ಕಾರಣವಾಗಿರಬಹುದು ಅಂತ ಅನ್ನಿಸುತ್ತದೆ. ಅರಣ್ಯ ಇಲಾಖೆ ಮತ್ತು ಲೊಕೋಪಯೊಗಿ ಇಲಾಖೆಗಳು ಪರ್ಯಾಯ ರಸ್ತೆ ಮಾಡಲಿಕ್ಕೆ ಶುರು ಮಾಡಿದ್ದಾರೆ.ಸಂಪರ್ಕದ ವ್ಯವಸ್ಥೆಯಾದರೆ ಕುಡಿಯುವ ನೀರಿನ ಸಹಿತ ಮುಂದೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗುತ್ತದೆ.ಇಲ್ಲಿ ದೊಡ್ಡ ಮಟ್ಟದ ಭೂ ಕುಸಿತವಾದ್ದರಿಂದ ಕೂಡಲೇ ಪರಿಹಾರದ ಸಾಧ್ಯವಾಗುವುದಿಲ್ಲ ಸ್ವಲ್ಪ ಸಮಯಾವಕಾಶ ಹಿಡಿಯುತ್ತದೆ.ಎನೇ ತೊಂದರೆಯಾದರೂ ನಾವು ನಿಮ್ಮೊಟ್ಟಿಗಿದ್ದೇವೆ,ಗೊಂದಲ ಪಟ್ಟುಕೊಳಬೇಡಿ.ಕೆಲವರು ಶಾಶ್ವತ ತಮ್ಮ ಮನೆಗಳನ್ನು ಬೇರೆ ಕಡೆ ಸ್ಥಳಾಂತರಿಸ ಬಗ್ಗೆ ಬೇಡಿಕೆಗಳನ್ನು ಇಟ್ಟಿದ್ದಾರೆ. ಅವುಗಳನ್ನು ಸಹ ಪರಿಹರಿಸಲು ಸರ್ಕಾರಕ್ಕೆ ತಿಳಿಸುತ್ತೇವೆಂದರು.

ಕಳಚೆಯ ಕೊಡ್ಲಿನಲ್ಲಿ ಜಿಲ್ಲಾಧಿಕಾರಿಗಳ ಪ್ರಯಾಣ-
ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರು ಕಳಚೆ ಊರಿಗೆ ಹೋಗುವ ಮಧ್ಯದಲ್ಲಿ ಕುಸಿದ ರಸ್ತೆ, ಕೆಸರಿನಿಂದ ತುಂಬಿದ ಸಣ್ಣ ಕಾಲು ದಾರಿ, ಗಿಡಗಂಟಿಗಳ ನಡುವೆ ಸುಮಾರು ಹತ್ತು ಕಿ.ಮಿ ನಡೆಯುವಾಗ ಜನರ ಸಮಸ್ಯೆಗಳನ್ನು ಆಲಿಸಿ ಮಾತನಾಡುವ ವೈಖರಿ ವಿಶಿಷ್ಟ ವಾಗಿತ್ತು.ನಡುವೆ ಮುದುಕಿ ಯೊಬ್ಬರನ್ನು ದೊಡ್ಡ ಕೊಲಿನಲ್ಲಿ ಕಟ್ಟಿಕೊಂಡು ಅವರ ಸಂಬAಧಿಕರ ಮನೆಗೆ ಹೊತ್ತೊಯ್ಯುವ ದೃಶ್ಯವನ್ನು ನೋಡಿ ಮರುಗಿದರು.ರಸ್ತೆ ಸರಿ ಇರುವ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿಗಳಾದ ಮುಲೈ ಮುಗಿಲನ್ ರವರು ಸ್ಥಳೀಯರ ಬೈಕ್ ನಲ್ಲಿ ಕುಳಿತು ಸಾಗಿದರು.ಇವರ ಜೊತೆ ಮತ್ತೊಂದು ಬೈಕಿನಲ್ಲಿ ಸಹಾಯಕ ಆಯುಕ್ತರಾದ ಆಕೃತಿ ಬನ್ಸಾಲರವರು ತೆರಳಿದ್ದು ವಿಶೇಷವಾಗಿತ್ತು.ಇವರೊಟ್ಟಿಗೆ ಯಲ್ಲಾಪುರ ತಾಲೂಕಿನ ತಹಶೀಲ್ದಾರ ಶ್ರೀ ಕೃಷ್ಣ ಕಾಮ್ಕರ,ಲೋಕೊಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ವಿನಾಯಕ ಭಟ್ಟ, ವಿವಿಧ ಇಲಾಖೆಯ ಮುಖ್ಯಸ್ಥರು, ಊರಿನ ಗಣ್ಯರು ಹಾಜರಿದ್ದು ಸಹಕರಿಸಿದರು.

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

error: