May 17, 2024

Bhavana Tv

Its Your Channel

ಯಲ್ಲಾಪುರದಲ್ಲಿ ಗಿಡಮೂಲಿಕೆ ದಿನಾಚರಣೆ ಹಾಗೂ ನವಗ್ರಹ ಸಮಿಧ ನಿರ್ಮಾಣ, ಔಷಧಿ ಗಿಡ ವಿತರಣೆ

ಯಲ್ಲಾಪುರ:- ಸಂಸ್ಕಾರ ಶಿಕ್ಷಣ ಸೇವಾ ಪ್ರತಿಷ್ಠಾನ ಯಲ್ಲಾಪುರ, ಪತಂಜಲಿ ಯೋಗ ಸಮಿತಿ ಯಲ್ಲಾಪುರ, ಶ್ರೀ ಶಕ್ತಿ ಗಣಪತಿ ಆಡಳಿತ ಮಂಡಳಿ ಯಲ್ಲಾಪುರ ಆಶ್ರಯದಲ್ಲಿ ಗಿಡಮೂಲಿಕೆ ದಿನಾಚರಣೆಯ ಅಂಗವಾಗಿ ನವಗ್ರಹ ಸಮಿಧ ವನ ನಿರ್ಮಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪತಂಜಲಿಯ ಸಂಸ್ಥಾಪಕರಲ್ಲಿ ಒಬ್ಬರಾದ ಆಯುರ್ವೇದ ಔಷಧಿಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಬಾಲಕೃಷ್ಣ ಜಿ ಅವರ ಜನ್ಮ ದಿನವನ್ನು (ಜಡಿಬೂಟಿ ದಿನ) ಆಚರಿಸಲಾಯಿತು. ಶ್ರೀ ಶಕ್ತಿ ಗಣಪತಿ ದೇವಸ್ಥಾನದ ಆವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನವಗ್ರಹ ಸಮಿಧವನ ನಿರ್ಮಾಣ ಮಾಡಲಾಯಿತು. ಈ ಕುರಿತು ರಾಮಕೃಷ್ಣ ಭಟ್ಟ ಕವಡಿಕೆರೆ ಅವರು ಮಾಹಿತಿ ನೀಡಿ ನವಗ್ರಹಗಳಲ್ಲಿ ಪ್ರಧಾನವಾಗಿ ಸೂರ್ಯ ಹಾಗೂ ಅಷ್ಟ ದಿಕ್ಕುಗಳಲ್ಲಿ ಗ್ರಹಗಳಿಗೆ ಸೂಚಕವಾಗಿ ಅಶ್ವತ್ಥ, ಅತ್ತಿ, ಮುತುಕಲ, ಖೈರ, ಶಮಿ, ಉತ್ತರಣೆ, ದರ್ಬೆ, ದೂರ್ವ, ಹೀಗೆ ಪ್ರತಿಯೊಂದು ಗ್ರಹ ಸೂಚಕವಾಗಿ ಇರುವಂತಹ ಸಸಿಗಳನ್ನು ನೆಡುವುದರ ಮಹತ್ವ ತಿಳಿಸಿಕೊಟ್ಟರು. ಎನ್.ಕೆ ಭಟ್ಟ ಅಗ್ಗಾಸಿ ಕುಂಬ್ರಿ ಅಧ್ಯಕ್ಷರು ಟಿಎಂಎಸ್ ಯಲ್ಲಾಪುರ ಅವರು ಫಲಕ ಅನಾವರಣಗೊಳಿಸಿ ಮನುಷ್ಯನ ಜೀವನದಲ್ಲಿ ಅತಿ ಮುಖ್ಯವಾಗಿ ರುವಂತಹ ಗ್ರಹ ದೋಷಗಳನ್ನು ನಿವಾರಿಸಲು ಹಾಗೂ ಈ ಭೂಮಿಯನ್ನು ಪವಿತ್ರಗೊಳಿಸಲು ಇಂತಹ ನವಗ್ರಹಗಳ ನಿರ್ಮಾಣ ಹೆಚ್ಚು ಹೆಚ್ಚು ಆಗಬೇಕು ಎಂದರು. ಶಕ್ತಿ ಗಣಪತಿ ದೇವಸ್ಥಾನದ ಅರ್ಚಕ ವೆಂಕಟರಮಣ ಭಟ್ಟ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಕಾರ ಶಿಕ್ಷಣ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣಭಟ್ಟ ಜೋಗಿನ ಜಡ್ಡಿ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್ ವಿ ಹೆಗಡೆ, ಬಿಜೆಪಿ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ಗಾವ್ಕರ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಕಲಾ ಭಟ್ಟ, ಮಾತೃ ಭೂಮಿ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀರಂಗ ಕಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್ ಭಟ್ಟ ,ಶಾರದಾಂಬಾ ಸಂಸ್ಕೃತ ಪಾಠಶಾಲೆಯ ಅಧ್ಯಕ್ಷ ಶಂಕರ ಭಟ್ಟ ಕೃಪಾ, ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ವಿ ಕೆ ಭಟ್ಟ ಶಿಗೇಪಾಲ, ಶಕ್ತಿ ಗಣಪತಿ ದೇವಸ್ಥಾನದ ಸಂಚಾಲಕ
ಅನಂತ ಗಾವ್ಕರ, ಮಾಚಣ್ಣ ಗವೆಗುಳಿ ದಂಪತಿ, ಸಂಸ್ಕಾರ ಶಿಕ್ಷಣ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪತಂಜಲಿ ಯೋಗ ಸಮಿತಿ ಜಿಲ್ಲಾ ವಿಸ್ತಾರಕ ಸುಬ್ರಾಯ ಭಟ್ಟ,ಪತಂಜಲಿ ಜಿಲ್ಲಾ ಯುವ ಪ್ರಭಾರಿ ದಿವಾಕರ ಮರಾಠಿ, ಸಂಜಯ ಫಾರೆಸ್ಟರ ಸತೀಶ ಹೆಗಡೆ, ನಾಗೇಶ ರಾಯ್ಕರ ಮುಂತಾದವರು ಇದ್ದರು. ಕಾರ್ಯಕ್ರಮದಲ್ಲಿ ನವಗ್ರಹ ಸಮಿಧ ವನ ನಿರ್ಮಾಣ ಮಾಡಲು ಬೇಕಾದ ಸಸಿಗಳನ್ನು ಹಾಗೂ ಗಿಡಮೂಲಿಕೆ ಸಸ್ಯಗಳಾದ ಅಮೃತಬಳ್ಳಿ ಮುಂತಾದವನ್ನು ವಿತರಿಸಲಾಯಿತು.

ವರದಿ:: ವೇಣುಗೋಪಾಲ ಮದ್ಗುಣಿ

error: