May 17, 2024

Bhavana Tv

Its Your Channel

ಯಲ್ಲಾಪುರ ತಾಲೂಕು ಶಿಕ್ಷಣ ಸಮಿತಿಯ ಪ್ರಾಂಶುಪಾಲರಾಗಿ ವಾಣಿಶ್ರೀ ಈಶ್ವರ ಹೆಗಡೆ ಅಧಿಕಾರ ಸ್ವೀಕಾರ

ಯಲ್ಲಾಪುರ:- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಪ್ರತಿಷ್ಠಿತ ಯಲ್ಲಾಪುರ ತಾಲೂಕು ಶಿಕ್ಷಣ
ಸಮಿತಿಯ ೬೦ವರ್ಷದ ಇತಿಹಾಸದಲ್ಲಿ ಏಳನೇ ಪ್ರಾಂಶುಪಾಲರಾಗಿ ಪ್ರಪ್ರಥಮ ಬಾರಿಗೆ ಮಹಿಳಾ ಪ್ರಾಂಶುಪಾಲರಾಗಿ ವಾಣಿಶ್ರೀ ಈಶ್ವರ ಹೆಗಡೆಯವರು ಅಧಿಕಾರವಹಿಸಿಕೊಂಡಿದ್ದಾರೆ.
೨೦೧೩ರ ನವೆಂಬರ್ ೯ರಂದು ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಕಾಲೇಜು ವಿಭಾಗದಲ್ಲಿ ಜೀವಶಾಸ್ತ್ರದ ಉಪನ್ಯಾಸಕಿಯಾಗಿ ನೇಮಕಗೊಂಡು ಇದೀಗ ಪ್ರಾಚಾರ್ಯರ ಹುದ್ದೆಗೆ ಬಡ್ತಿ ಹೊಂದಿದ್ದಾರೆ. ಮೂಲತಃ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ವರನಕೇರಿಯವರಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಳ್ಳಂಕಿಯಲ್ಲಿಯೂ, ಪ್ರೌಢಶಾಲಾ ಶಿಕ್ಷಣವನ್ನು ಹೊನ್ನಾವರದ ಪ್ರತಿಷ್ಠಿತ ನ್ಯೂ ಇಂಗ್ಲೀಷ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ. ಪದವಿಪೂರ್ವ ಶಿಕ್ಷಣವನ್ನು ಮೂಲ್ಕಿಯ ವಿಜಯಾ ಕಾಲೇಜು, ಬಿಎಸ್ಸಿ ಪದವಿಯನ್ನು ಹೊನ್ನಾವರದ ಎಸ್.ಡಿ.ಎಂ ಕಾಲೇಜಿನಲ್ಲೂ, ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ೨೦೧೪ರಲ್ಲಿ ಧಾರವಾಡ ವಿಶ್ವವಿದ್ಯಾನಿಲಯದಿಂದ ಬಿ.ಇಡಿ ಪದವಿಯನ್ನು ಪಡೆದಿದ್ದು ಜು.೨೫ರಂದು ನಡೆದ ಕೆ-ಸೆಟ್ ಪರೀಕ್ಷೆಯನ್ನೂ ಬರೆದಿದ್ದು ಫಲಿತಾಂಶ ಬರಬೇಕಿದೆ. ಪ್ರೌಢಶಾಲಾ ದಿನಗಳಿಂದಲೂ ಆದರ್ಶ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಆಸಕ್ತಿ ಹೊಂದಿದವರಾಗಿದ್ದಾರೆ. ಪ್ರೌಢಶಾಲೆ, ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿ ಹಲವಾರು ಜಿಲ್ಲಾ ಹಾಗೂ ವಿಶ್ವವಿದ್ಯಾನಿಲಯ ಮಟ್ಟದ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ. ರಾಜ್ಯಮಟ್ಟದ ನಾಟಕ ಅಕಾಡೆಮಿಯಿಂದ “ಅತ್ಯುತ್ತಮ ನಟಿ” ಪ್ರಶಸ್ತಿ ಪಡೆದಿದ್ದಾರೆ. ೨೦೦೬ರಲ್ಲಿ ಡಿಡಿ ಚಂದನದಲ್ಲಿ ಪ್ರಸಾರವಾದ ೨ ಟೆಲಿಫಿಲ್ಮ ನಲ್ಲಿಯೂ ನಟಿಸಿದ್ದಾರೆ. ಅಧ್ಯಕ್ಷರಾದ ಗಜಾನನ ಭಟ್ಟ, ಉಪಾಧ್ಯಕ್ಷರಾದ ಪ್ರಸನ್ನ ಗುಡಿಗಾರ, ಕಾರ್ಯದರ್ಶಿ ರಾಜೇಂದ್ರ ಪ್ರಸಾದ ಭಟ್ಟ ಮುಂತಾದವರು ಅಭಿನಂದಿಸಿದ್ದಾರೆ.
ವರದಿ:- ವೇಣುಗೋಪಾಲ ಮದ್ಗುಣಿ

error: