May 17, 2024

Bhavana Tv

Its Your Channel

ಚಂದಗುಳಿ ಗ್ರಾಮ ಪಂಚಾಯತದ ಸಹಸ್ರಳ್ಳಿಯಲ್ಲಿ ಮನೆ ಕುಸಿತದಿಂದ ಹಾನಿ

ಯಲ್ಲಾಪುರ; ಇತ್ತಿಚಿಗೆ ಸುರಿದ ಭಾರಿ ಮಳೆ ಗಾಳಿಯಿಂದಾಗಿ ತಾಲೂಕಿನ ಚಂದಗುಳಿ ಗ್ರಾ.ಪಂ ವ್ಯಾಪ್ತಿಯಲ್ಲಿನ ಸಹಸ್ರಳ್ಳಿಯಲ್ಲಿ ಮನೆಯೊಂದು ಕುಸಿದು ಭಾರಿ ನಷ್ಟ ಉಂಟಾಗಿದೆ.
ಸಹಸ್ರಳ್ಳಿಯ ನಿವಾಸಿ ರಾಮಚಂದ್ರ ಗೋಪಾಲ ಭಟ್ಟ ಬೆಳಸೂರು ಅವರಿಗೆ ಸೇರಿದ ವಾಸ್ತವ್ಯದ ಮನೆ ಸಂಪೂರ್ಣ ಕುಸಿದಿದೆ. ಮನೆಯ ಗೋಡೆ ಕುಸಿದು ಬಿದ್ದಿದೆ. ಮೇಲ್ಚಾವಣಿಗೆ ಹೊದೆಸಿದ ಹಂಚು ಬಿದ್ದು ಪುಡಿಯಾಗಿದೆ. ಮನೆಯಲ್ಲಿದ್ದ ಗ್ರಹೋಪಯೋಗಿ ವಸ್ತುಗಳ ಮೇಲೆ ಗೊಡೆ ಕುಸಿದಿಂದ ಹಾನಿಯಾಗಿದೆ.ಒಟ್ಟಾರೆ ಮನೆ ಕುಸಿತದಿಂದ ರಾಮಚಂದ್ರ ಭಟ್ಟ ಕುಟುಂಬ ಸಂಕಷ್ಟ ಎದುರಿಸುವಂತಾಗಿದೆ.

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

error: