May 3, 2024

Bhavana Tv

Its Your Channel

ಕೋವಿಡ್ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ- ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ

ಯಲ್ಲಾಪುರ:- ಯಲ್ಲಾಪುರ ತಾಲೂಕಿನಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ತಹಶೀಲ್ದಾರರು ಪತ್ರಿಕಾಗೋಷ್ಠಿ ಕರೆದು ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಾತನಾಡಿ ಸರ್ಕಾರದಿಂದ ಬಂದ ಸುತ್ತೋಲೆಯನ್ನು ವಿವರಿಸಿ, ತಾಲೂಕಿನಲ್ಲಿ ಸಾರ್ವಜನಿಕರು ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು.ಎಲ್ಲ ಅಂಗಡಿಕಾರರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು, ಗ್ರಾಹಕರಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಬೇಕು.ಅಂಗಡಿಯಲ್ಲಿ ಅಂತರ ಕಾಯ್ದುಕೊಳ್ಳಬೇಕು.ಅಂಗಡಿಯಲ್ಲಿ ಕೆಲಸ ಮಾಡುವ ಎಲ್ಲರಿಗೆ ಗಂಟಲು ದ್ರವ ಪರಿಕ್ಷೆ ಮಾಡಲಾಗುವುದು.ಕೋವಿಡ್ ಸೊಂಕಿತರು ಕಡ್ಡಾಯವಾಗಿ ಐಸೋಲೇಶನ್ ಒಳಪಡಬೇಕು.ಅವರು ನಿರಾಕರಿಸಿದರೆ ಅವರ ಮೇಲೆ ಎಫ್.ಐ.ಆರ್‌ನ್ನು ದಾಖಲಿಸಲಾಗುವುದು.ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಹದಿನೈದು ಐಸೋಲೇಶನ ಕೇಂದ್ರಗಳನ್ನು ತೆರೆಯಲಾಗಿದೆ. ಪಟ್ಟಣದಲ್ಲಿ ಮೂರು ಕಡೆ ಐಸೋಲೇಶನ್ ಕೇಂದ್ರ ತೆರೆಯಲಾಗಿದೆ.ಒಂದು ಮನೆಯಲ್ಲಿ ಮೂರಕ್ಕಿಂತ ಹೆಚ್ಚು ಜನರಿದ್ದರೆ ಅವರು ಮನೆಯಲ್ಲಿಯೇ ಐಸೋಲೆಶನಗೆ ಒಳಪಡಬಹುದು. ಗೋಪಾಲಕೃಷ್ಣಗಲ್ಲಿ,ಕಾಳಮ್ಮನಗರ ಕಂಟೊನ್ಮೇoಟ್ ಪ್ರದೇಶವೆಂದು ಘೋಷಿಸಲಾಗಿದೆ. ದೇವಸ್ಥಾನಗಳಲ್ಲಿ ಕೋವಿಡ್ ನಿಯಮ ಪಾಲಿಸಿ ದೇವರ ದರ್ಶನ ಪಡೆಯಬಹುದು.ಯಾವದೇ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಾರದು. ಸಾತೋಡ್ಡಿ, ಶಿರ್ಲೆ, ಮಾಗೋಡು ಸೇರಿದಂತೆ ಶನಿವಾರ, ಭಾನುವಾರ ಪ್ರವಾಸಿ ತಾಣಗಳಿಗೆ ಹೊಗುವಂತಿಲ್ಲ.ಪತ್ರಿಯೊAದು ಪ್ರವಾಸಿ ತಾಣಗಳಲ್ಲಿ ಇಬ್ಬರು ಪೋಲಿಸರನ್ನು ನಿಯೋಜಿಸಲಾಗಿದೆ.ಮದುವೆ ಮನೆಯಲ್ಲಿ ೫೦ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ವಿವಾಹ ನಡೆಯುವ ಸ್ಥಳದಲ್ಲಿ ಅಧಿಕಾರಿಗಳು ಹಾಜರಿದ್ದು ಚಲನ ವಲನಗಳನ್ನು ಗಮನಿಸುತ್ತಾರೆ.ತಪ್ಪಿದ್ದಲ್ಲಿ ಆ ಮನೆಯವರ ಮೇಲೆ ಉಗ್ರ ಕ್ರಮ ಕೈಗೊಂಡು ದಂಡ ಹಾಕುತ್ತಾರೆ.ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್ ಹಾಕದೆ ಓಡಾಡುವವರಿಗೆ ೧೦೦ರೂ ದಂಡಹಾಕುತ್ತಾರೆ.ಈ ಬಗ್ಗೆ ಆಯಾ ಗ್ರಾಮ ಪಂಚಾಯತ ಪಿಡಿಒಗಳಿಗೆ, ನಗರದಲ್ಲಿ ಆರಕ್ಷಕರಿಗೆ ಜವಾಬ್ದಾರಿ ನೀಡಲಾಗಿದೆ.ಈ ಮೇಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲದ್ದಿದ್ದರೆ ಅಧಿಕಾರಿಗಳು ದಂಡ ವಸೂಲಿ ಮಾಡುತ್ತಾರೆ.ಜನರು ಕೋವಿಡ್ ಹರಡದಂತೆ ಜಾಗೃತರಾಗಿ ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಕಾರಣಿಕರ್ತರಾಗಬೇಕೆಂದು ತಹಶೀಲ್ದಾರರು ವಿನಂತಿಸಿದ್ದಾರೆ.

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

error: