May 3, 2024

Bhavana Tv

Its Your Channel

ಇಡಗುಂದಿ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಕ್ವಿಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮ

ಯಲ್ಲಾಪುರ: ನಮಗೆ ದೊರೆತ ಎಲ್ಲಾ ಹಕ್ಕುಗಳು ಹೋರಾಟದ ಮೂಲಕ ದೊರೆತಿದೆ ಎಂದು ಮೈಸೂರಿನ ಪ್ರಮತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹರೀಶ ನಾಯಕ ಹೇಳಿದರು.ಅವರು ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ನಡೆದ “ಕ್ವಿಟ್ ಇಂಡಿಯಾ ದಿನಾಚರಣೆ” ಕಾರ್ಯಕ್ರಮದಲ್ಲಿ ಆನಲೈನ್ ಮೂಲಕ ಉಪನ್ಯಾಸ ನೀಡಿದರು.ದೇಶಕ್ಕೆ ಸ್ವಾತಂತ್ರ‍್ಯ ಬರಲು ಕ್ವಿಟ್ ಇಂಡಿಯಾ ಚಳುವಳಿಯ ಕೊಡುಗೆ ಅಪಾರ. ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಶುರುವಾದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಅನೇಕರು ಬಂಧನಕ್ಕೆ ಒಳಗಾಗಿದ್ದರು. ಆದರೂ, ಹೋರಾಟದ ಮೂಲಕ ಬ್ರಿಟೀಷರನ್ನು ಭಾರತದಿಂದ ಹೊರ ಹಾಕಲಾಯಿತು ಎಂದು ಅವರು ವಿವರಿಸಿದರು. ಹೋರಾಟ ನಡೆದು ಬಂದ ದಾರಿ, ಹೋರಾಟದ ವೇಳೆ ವಿವಿಧ ಸಂಘಟನೆಗಳು ನೀಡಿದ ಸಹಕಾರದ ಬಗ್ಗೆ ಅವರು ವಿವರಿಸಿದರು. ಇತಿಹಾಸದ ಘಟನೆಗಳ ಬಗ್ಗೆ ಉಲ್ಲೇಖಿಸಿದ ಅವರು ಇಂದಿನ ದಿನಗಳಲ್ಲಿಯೂ ಹೋರಾಟದ ಅಗತ್ಯತೆಗಳ ಬಗ್ಗೆ ತಿಳಿಸಿದರು.ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ವಿಶ್ವದರ್ಶನ ಪ್ರೌಢಶಾಲೆಯ ದೈಹಿಕ ಶಿಕ್ಷಕ ವಿಶ್ವೇಶ್ವರ ಕೆ ಗಾಂವ್ಕರ್, ಭಾರತೀಯ ಸಂಸ್ಕೃತಿ, ಬದುಕಿನ ರೀತಿ-ನೀತಿಗಳು ಹೋರಾಟದ ಒಂದು ಭಾಗವಾಗಿದೆ. ಹೋರಾಟಗಾರರ ಧೀಮಂತಿಕೆ, ಕೊಡುಗೆಗಳು ಚಿಂತನಾತ್ಮಕವಾಗಿರಬೇಕು ಎಂದು ಕರೆ ನೀಡಿದರು. ಕನ್ನಡ ಉಪನ್ಯಾಸಕ ಡಾ. ನವೀನ ಕುಮಾರ ಎ.ಜಿ ಸ್ವಾಗತಿಸಿದರು. ರಾಜೇಶ ಆಗೇರ ಪ್ರಾರ್ಥಿಸಿದರು. ಪಲ್ಲವಿ ಭಟ್ಟ ನಿರ್ವಹಿಸಿದರು. ನವೀನಾ ಅಶೋಕ ಗುನಗಾ ವಂದಿಸಿದರು.

ವೇಣುಗೋಪಾಲ ಮದ್ಗುಣಿ. ಯಲ್ಲಾಪುರ.

error: