May 2, 2024

Bhavana Tv

Its Your Channel

ಯಲ್ಲಾಪುರದಲ್ಲಿ ಮೊಹರಂ ಪ್ರಯುಕ್ತ ಸಭೆ, ಸರ್ಕಾರದ ಆದೇಶ ಪಾಲಿಸದಿದ್ದರೆ ಕ್ರಮ -ತಹಶೀಲ್ದಾರ ಶ್ರೀಕೃಷ್ಣಕಾಮಕರ

ಯಲ್ಲಾಪುರ:- ಆ.೨೦ರಂದು ಮೊಹರಂ ಹಬ್ಬ ಇರುವುದರಿಂದ ಈ ವರ್ಷವೂ ಕೋವಿಡ್ ಕಾರಣದಿಂದಾಗಿ ಮುಸ್ಲಿಂ ಬಾಂಧವರು ಪರಂಪರೆಯoತೆ ಯಾವುದೇ ರೀತಿಯ ಮೆರವಣಿಗೆ ಮಾಡುವಂತಿಲ್ಲ. ಮಸೀದಿಯಲ್ಲಿ ೫೦ ಕ್ಕಿಂತ ಕಡಿಮೆ ಜನಸಂಖ್ಯೆ, ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಪಾಲಿಸಬೇಕು. ಮನೆಯಲ್ಲಿಯೇ ಹಬ್ಬ ಆಚರಿಸಬೇಕೆಂದು ತಹಶೀಲ್ದಾರ ಶ್ರೀಕೃಷ್ಣ ಕಾಮಕರ ಹೇಳಿದರು.
ಅವರು ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಮಂಚಿಕೇರಿ, ಕಿರವತ್ತಿ ವಿವಿಧ ಭಾಗಗಳ ಮಸೀದಿ ಹಾಗೂ ಸಮಾಜದ ೪೦ ಕ್ಕೂ ಅಧಿಕ ಮುಖಂಡರ ಮೊಹರಂ ಹಬ್ಬದ ಶಾಂತಿಸಭೆಯಲ್ಲಿ ಹಬ್ಬದ ಕುರಿತು ಸರ್ಕಾರದ ಮಾರ್ಗಸೂಚಿ ನಿಯಮವನ್ನು ವಿವರಿಸುತ್ತಿದ್ದರು.
ಮಸೀದಿಗಳ ಮುಂಭಾಗದಲ್ಲಿ ಕೋವಿಡ್ ನಿಯಮ ಮತ್ತು ನಮಾಜ್ ಮಾಡಲು ಬರುವವರಿಗೆ ನಾಮಫಲಕ ಅಳವಡಿಸಬೇಕು. ಯಾವುದೇ ಕಾರಣಕ್ಕೂ ಹಸ್ತಲಾಘವ, ಆಲಿಂಗನ ಮಾಡುವಂತಿಲ್ಲ. ೬೦ ವರ್ಷ ಮೇಲ್ಪಟ್ಟವರು ಹಾಗೂ ೧೦ ವರ್ಷದೊಳಗಿನವರಿಗೆ ಮಸೀದಿಗೆ ನಮಾಜ್ ಮಾಡಲು ಬರುವಂತಿಲ್ಲ. ಅವರು ಮನೆಯಲ್ಲಿಯೇ ನಮಾಜ್ ಮಾಡಬಹುದು. ಮಸೀದಿ ಬಿಟ್ಟು ಬೇರೆಲ್ಲಿಯೂ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲವೆಂದು ವಿವರಿಸಿದರು.
ಆರಕ್ಷಕ ನಿರೀಕ್ಷಕ ಸುರೇಶ ಯಳ್ಳೂರು ಮಾತನಾಡಿ, ಕಳೆದ ವರ್ಷ ಇದೇ ರೀತಿಯ ಸೂಚನೆಗಳನ್ನು ಸಂಬAಧಪಟ್ಟ ಎಲ್ಲ ಮಸೀದಿಗಳ ಮುಖ್ಯಸ್ಥರಿಗೆ ತಿಳಿಸಿದಾಗಲೂ ಕೆಲವೆಡೆ ಘರ್ಷಣೆಗೆ ಕಾರಣವಾಗಿದೆ. ಆ ರೀತಿ ನಡೆದರೆ ಮುಲಾಜಿಲ್ಲದೇ ಕಠಿಣ ಕ್ರಮ ಜರುಗಿಸಲಾಗುತ್ತದೆ. ನಾವು ಬಂದು ನಿಮ್ಮ ಮಸೀದಿಗಳಲ್ಲಿ ಜನ ಸೇರುವುದನ್ನು ನಿಯಂತ್ರಿಸಲು ಮುಂದಾದರೆ ನಿಮಗೆ ಅಗೌರವ. ಹಾಗಾಗಿ ಅದನ್ನು ನೀವೇ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಎಲ್ಲಿಯೂ ಅನ್ನಸಂತರ್ಪಣೆ ಅಥವಾ ಪ್ರಸಾದ ಹಂಚುವುದು ಸೇರಿದಂತೆ ಯಾವುದೇ ರೀತಿಯ ಹಬ್ಬದ ವಿಶೇಷ ಆಚರಣೆಗಳಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ. ಇದು ನಮ್ಮ ವೈಯಕ್ತಿಕ ಯಾವುದೇ ಆಸಕ್ತಿಯಿಂದಲ್ಲ. ಸರ್ಕಾರದ ನಿರ್ದೇಶನದಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ರೀತಿಯಲ್ಲೇ ಈ ವರ್ಷವೂ ಗಣೇಶ ಹಬ್ಬದ ಆಚರಣೆ ಇರುವುದಿಲ್ಲ. ಆ ಕುರಿತು ಮುಂದಿನ ದಿನಗಳಲ್ಲಿ ಗಣೇಶ ಸಮಿತಿಗಳಿಗೆ ತಿಳಿಸಲಾಗುವುದು ಎಂದರು

ವರದಿ: ವೇಣುಗೋಪಾಲ ಮದ್ಗುಣಿ

error: