May 17, 2024

Bhavana Tv

Its Your Channel

ಯಲ್ಲಾಪುರದಲ್ಲಿ ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಘಟಕ ಉದ್ಘಾಟನೆ ಹಾಗೂ ಹಿರಿಯ ಪರ್ತಕರ್ತರಿಗೆ ಸನ್ಮಾನ ಕಾರ್ಯಕ್ರಮ

ವರದಿ: ವೇಣುಗೋಪಾಲ ಮದ್ಗುಣಿ


ಯಲ್ಲಾಪುರ:- ಯಲ್ಲಾಪುರ ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್’ನ ಯಲ್ಲಾಪುರ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿದರು. ಯಲ್ಲಾಪುರ ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್’ನ ಯಲ್ಲಾಪುರ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಸಂಘಟಿತ ಕಾರ್ಮಿಕರಾದ ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳನ್ನು ‘ಇ ಶ್ರಮ’ ಪೊರ್ಟಲ್ ಮೂಲಕ ನೊಂದಾವಣೆಗೆ ಚಾಲನೆ ನೀಡಿದರು. ಪತ್ರಿಕಾ ವರದಿಗಳು ಸ್ಪರ್ಧಾತ್ಮಕ ಮನೋಭಾವ ಹೊಂದಿರಬೇಕೆ ಹೊರತು, ಕೀಳರಿಮೆ, ದ್ವೇಷ ಹೊಂದಿರಬಾರದು.ಯಲ್ಲಾಪುರ ‘ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ವರದಿ ಅಥವಾ ಲೇಖನಗಳಲ್ಲಿ ವ್ಯಕ್ತವಾಗುವ ಟೀಕೆಗಳು ಅಥವಾ ವಿಮರ್ಶೆಗಳು ಸ್ಪರ್ಧಾತ್ಮಕ ಮನೋಭಾವ ಹೊಂದಿರಬೇಕೇ ಹೊರತು, ಕೀಳರಿಮೆ, ದ್ವೇಷಗಳನ್ನು ಒಳಗೊಂಡಿರಬಾರದು’ ಎಂದು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಭಾನುವಾರ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯಿಂದ ನೋಂದಾವಣೆಗೊAಡ ಇಂಡಿಯನ್ ಫೆಡರೇಷನ್ ಆಫ್ ವರ್ಕಿಂಗ್ ಜರ್ನಲಿಸ್ಟ್' ಇದರ ಸಹಯೋಗ ಸಂಸ್ಥೆಯಾಗಿರುವಕರ್ನಾಟಕ ಜರ್ನಲಿಸ್ಟ್ ಯೂನಿಯನ್’ನ ಯಲ್ಲಾಪುರ ಘಟಕದ ಉದ್ಘಾಟನೆ ನೆರವೇರಿಸಿ, ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ರಕ್ಷಣೆಯ ಅತ್ಯಂತ ಪ್ರಮುಖ ಅಂಗವಾಗಿರುವ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕರು ಇತ್ತೀಚೆಗೆ ಮೌಲ್ಯಾಧಾರಿತ ಕಾರ್ಯಚಟುವಟಿಕೆಯನ್ನು ಕಡಿಮೆಮಾಡಿ, ವ್ಯಕ್ತಿ ಆಧಾರಿತ ಕಾರ್ಯಗಳಿಗೆ ಆದ್ಯತೆ ನೀಡುತ್ತಿರುವುದು ಅತ್ಯಂತ ಬೇಸರದ ಸಂಗತಿ ಎಂದರು.
ಹಿರಿಯ ಪತ್ರಕರ್ತರಾದ ಎನ್.ಎಸ್.ಹೆಗಡೆ ಕುಂದರಗಿ, ವನರಾಗ ಶರ್ಮಾ, ಅನಂತ ವೈದ್ಯ, ಶ್ರೀರಂಗ ಕಟ್ಟಿ, ಬೀರಣ್ಣ ನಾಯಕ ಮೊಗಟಾ ಇವರನ್ನು ಸಂಘಟನೆಯ ಪರವಾಗಿ ಸಚಿವರು ಸನ್ಮಾನಿಸಿ, ಗೌರವಿಸಿದರು.
ಅಸಂಘಟಿತ ಕಾರ್ಮಿಕರಾದ ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳನ್ನು ‘ಇ ಶ್ರಮ’ ಪೊರ್ಟಲ್ ಮೂಲಕ ನೊಂದಾವಣೆಗೆ ಚಾಲನೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕೆಜೆಯು ರಾಜ್ಯಾಧ್ಯಕ್ಷ ನಾರಾಯಣ ಬಿ. ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿ, ಪ್ರಸ್ತುತ ಬದಲಾಗುತ್ತಿರುವ ಕಾಲಮಾನದಲ್ಲಿ ಪತ್ರಕರ್ತರ ಪರಿಸ್ಥಿತಿ ಅತ್ಯಂತ ಕಠಿಣಕರವಾಗಿದ್ದು, ಸೇವಾಭದ್ರತೆಯ ಕೊರತೆಯಿಂದಾಗಿ ಅತಂತ್ರ ಸ್ಥಿತಿ ಹಾಗೂ ಆರ್ಥಿಕ ದುಃಸ್ಥಿತಿ ಎದುರಿಸುವಂತಾಗಿದೆ. ಅಗತ್ಯವಿರುವ ಕನಿಷ್ಠ ಅನುಕೂಲತೆಗಳನ್ನು ಕಲ್ಪಿಸುವ ಕ್ರಮ ಕೈಗೊಳ್ಳುವ ಕಾರ್ಯ ಸರ್ಕಾರದಿಂದ ಮಾಡುವಂತೆ ಸಚಿವರಲ್ಲಿ. ಪತ್ರಕರ್ತರ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ನಿರಂತರ ಹಲ್ಲೆ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದೌರ್ಜನ್ಯ ತಡೆ ಕಾಯ್ದೆಜಾರಿಗೆ ಬರಬೇಕು. ಪ್ರಜಾಪ್ರಭುತ್ವದ ಸಂರಕ್ಷಣೆಗೆ ಪತ್ರಕರ್ತರ ರಕ್ಷಣೆಯೂ ಅತ್ಯಗತ್ಯವಾಗಿದ್ದು, ಪತ್ರಕರ್ತರ ತಪ್ಪಿಗೂ ನಿಯಂತ್ರಣವಿರುವAತಾಗಲಿ ಎಂದು ಆಶಿಸಿದರು.
ಸನ್ಮಾನಿತರ ಪರವಾಗಿ ಹಿರಿಯ ಸಹಕಾರಿ ಎನ್.ಎಸ್.ಹೆಗಡೆ ಕುಂದರಗಿ ಮಾತನಾಡಿ, ಸನ್ಮಾನ-ಅಭಿನಂದನೆಗಳು ಇತ್ತೀಚೆಗೆ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ಕಾಲಕ್ಕನುಗುಣವಾಗಿ ಬದಲಾದ ಪತ್ರಿಕಾ ಕ್ಷೇತ್ರವೂ ಭಿನ್ನ ದಾರಿಯಲ್ಲಿ ನಡೆಯುತ್ತಿದ್ದು,ಬದ್ಧತೆ ಹಾಗೂ ನೈಜತೆಗಳನ್ನು ಬಿಂಬಿಸುವ ಕಾರ್ಯ ಮಾಡಬೇಕೆಂದರು.
ಅತಿಥಿಗಳಾಗಿದ್ದ ಪಂಚಾಯತ ರಾಜ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಜಿಲ್ಲೆ ಪ್ರಥಮ ಪತ್ರಕರ್ತ ರಾಮಕೃಷ್ಣ ಹೆಗಡೆ ಜನ್ಮದಿನವಾಗಿದ್ದು, ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಅವರ ಹೆಸರು ಚಿರಸ್ಥಾಯಿಯಾಗುಳಿಯಲು ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಅವರ ಹೆಸರಿನ ಅಧ್ಯಯನಪೀಠ ಸ್ಥಾಪನೆಗೊಳ್ಳಬೇಕೆಂದು ಆಶಿಸಿದರು.ಪಟ್ಟಣ ಪಂಚಾಯತ ಅಧ್ಯಕ್ಷರಾದ ಸುನಂದಾ ದಾಸ ಮಾತನಾಡಿದರು.
ಕೆಜೆಯು ರಾಜ್ಯ ಖಜಾಂಚಿ ಡಾ.ಬಿ.ಎಂ.ಶಿವರುದ್ರಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಮನಮೋಹನ ನಾಯ್ಕ, ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಡಾ. ಸುಚೇತಾ ಮದ್ಗುಣಿ ಪ್ರಾರ್ಥನೆ ಹಾಡಿದರು, ಕೆಜೆಯು ತಾಲೂಕು ಘಟಕಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಸ್ವಾಗತಿಸಿದರು. ಸದಸ್ಯ ನಾಗರಾಜ ಮದ್ಗುಣಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ನಾಗೇಶಕುಮಾರ್ ಎನ್. ನಿರೂಪಿಸಿದರು. ಉಪಾಧ್ಯಕ್ಷ ವಿ.ಜಿ.ಗಾಂವ್ಕರ ವಂದಿಸಿದರು.

error: