May 17, 2024

Bhavana Tv

Its Your Channel

ಸದಸ್ಯತ್ವ ಅಮಾನತು ಆದೇಶ ಹಾಸ್ಯಾಸ್ಪದ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಶುಕ್ರವಾರದ ಕೆಲವು ಮಾಧ್ಯಮಗಳಲ್ಲಿ ಯಲ್ಲಾಪುರ ಕಾರ್ಯ ನಿರತ ಪತ್ರಕರ್ತರ ಸಂಘದ ನಾಲ್ವರು ಸದಸ್ಯರನ್ನು ಅಮಾನತು ಮಾಡಲಾಗಿದೆ ಎಂಬ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೇಳಿಕೆ ಹಾಸ್ಯಾಸ್ಪದವಾಗಿದೆ. ರಾಜಿನಾಮೆ ನೀಡಿದ ೧೫ ದಿನಗಳ ನಂತರದಲ್ಲಿ ಅಮಾನತು ಮಾಡಿದ್ದೇವೆ ಎಂದು ಬಿಂಬಿಸಿ ಎನೋ ಸಾಧನೆ ಮಾಡಿದವರಂತೆ ಬೀಗಿರುವುದು ನೋಡಿದರೆ ಸಾಮಾನ್ಯ ಜನರಿಗಾದರೂ ಅರ್ಥವಾಗುವಂತಿದೆ ಬೇರೆ ಸಂಘಟನೆಯ ಕಡೆಗೆ ಸದಸ್ಯರು ವಾಲುತ್ತಿದ್ದಾರೆ ಎಂಬ ಹತಾಶ ಭಾವನೆಯಿಂದ ನೀಡಿದ ಹೇಳಿಕೆ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಯಲ್ಲಾಪುರ ಘಟಕದ ಅಧ್ಯಕ್ಷರಾದ ಶಂಕರ ಭಟ್ಟ ತಾರೀ ಮಕ್ಕಿ ಹಾಗೂ ಪ್ರಧಾನ ಕಾರ್ಯದರ್ಶಿ ನಾಗೇಶ್ ಕುಮಾರ್ ಎನ್. ಹಾಗೂ ಸದಸ್ಯರಾದ ಸಿ.ಆರ್.ಶ್ರೀಪತಿ, ನಾಗರಾಜ ಮದ್ಗುಣಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರ್ಯನಿರತ ಪತ್ರಕರ್ತರ ಸಂಘದ ವಿದ್ಯಾಮನಗಳು ಕುರಿತು ಜಿಲ್ಲಾಧ್ಯಕ್ಷರಿಗೆ ಹಾಗೂ ರಾಜ್ಯಾಧ್ಯಕ್ಷರಿಗೆ ಅಸಮಾದಾನ ವ್ಯಕ್ತಪಡಿಸಿ ಪತ್ರ ಬರೆದರೂ, ನಾಲ್ಕಯದು ತಿಂಗಳಾದರೂ ಸಮಸ್ಯೆ ಬಗೆ ಹರಿಸಿದೇ, ಕನಿಷ್ಠ ಪತ್ರಕ್ಕೆ ಉತ್ತರವನ್ನೂ ನೀಡದೆ ಇರುವುದು, ಸಂಘವನ್ನು ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿ ಬಳಸಿಕೊಳ್ಳುತ್ತಿರುವುದು, ತಮ್ಮ ಅಂಕೆಯಲ್ಲಿ ಸದಸ್ಯರಿರಬೇಕು ಎನ್ನುವ ನಿಲುವು, ಕನಿಷ್ಠ ತಾಲ್ಲೂಕು ಸಂಘಗಳು ಬೈಲಾ ಪ್ರತಿ ಕೇಳಿದರೆ ಅದನ್ನೂ ಪೂರೈಸದೆ ಇರುವುದು, ತಮಗೆ ಬೇಕಾದ ಹಾಗೆ, ತಮ್ಮವರಿಗೆ ಬೇಕಾದ ಹಾಗೆ ನಿಯಮಾವಳಿಗಳನ್ನು ಬದಲು ಮಡಿಕೊಂಡು ತಮಗೆ ಬೇಕಾದವರಷ್ಟೇ ಸಂಘದಲ್ಲಿರುಬೇಕು ಅನ್ನುವ ನಿಲುವು. ಬಹುಸಂಖ್ಯಾಕ ಸದಸ್ಯರ ಭಾವನೆಗೆ ಬೆಲೆ ನೀಡದೇ, ತಮಗೇ ಬೇಕಾದವರಿಗೆ ಮಣೆ ಹಾಕುವಂತಹ, ಯಾರೂ ಪ್ರಶ್ನೆಯನ್ನೇ ಮಾಡಬಾರದೆಂಬ ನಿಲುವಿನ ಮೂಲಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತ ಸಂಘದ ಕೆಲವರು ಇಡೀ ಸಂಘವನ್ನು ತಮ್ಮ ಹಿಡಿತದಲ್ಲಿರಿಕೊಳ್ಳಬೇಕೆಂಬ ಕಾರಣದಿಂದಾಗಿ ಜಿಲ್ಲೆಯ ಬಹುತೇಕ ಎಲ್ಲ ತಾಲ್ಲೂಕಿನಲ್ಲಿಯೂ ಸದಸ್ಯರಲ್ಲಿ ಅಸಮಾದಾನವಿದೆ. ಆದರೆ ಯಾರೇ ಈ ಕುರಿತು ಮಾತನಾಡದೇ ಮೌನವಾಗಿದ್ದಾರೆ.
ಅಲ್ಲದೇ ಶಿರಸಿಯಲ್ಲಿ ಕಾರ್ಯ ನಿರತ ಪತ್ರಕರ್ತರ ಜಿಲ್ಲಾ ಸಂಘದ ಮೂಲಕ ‘ಪತ್ರಿಕಾ ಭವನ’ ನಿರ್ಮಾಣ ಮಾಡಲಾಗಿದ್ದು, ಸುಮಾರು ೬೫ ಲಕ್ಷ ರೂಪಾಯಿ ಸರ್ಕಾರ ಮತ್ತು ಜನಪ್ರತಿನಿಧಿಗಳ ಅನುದಾನದಿಂದ ಪಡೆಯಲಾಗಿದೆ. ಸುಮಾರು ೧೦ ಮಳಿಗೆಗಳ ಬಾಡಿಗೆಗಳು ಕೂಡ ಸಂಘಕ್ಕೆ ಬರುತ್ತಿವೆ. ಆದರೆ ಇದ್ಯಾವುದರ ಲೆಕ್ಕ ಪತ್ರಗಳನ್ನು ಜಿಲ್ಲೆಯ ಎಲ್ಲಾ ಸದಸ್ಯರ ಮುಂದೆ ಪಾರದರ್ಶಕವಾಗಿ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ.
ಈ ಎಲ್ಲ ಕಾರಣಗಳಿಂದ ನಾವು ನಾಲ್ವರು ವೈಯಕ್ತಿಕ ಹಿತಾಸಕ್ತಿಗೆ ಸಂಘವನ್ನು ಬಳಸಿಕೊಳ್ಳುತ್ತಿರುವುದನ್ನು ವಿರೋಧಿಸಿ ನಮಗೆ ಈ ಸಂಘದ ರೀತಿ ನೀತಿಗಳು ಹಿಡಿಸದೇ ಇದ್ದುದರಿಂದ ಆಗಸ್ಟ್ ೧೧ ರಂದು ಸಂಘದ ಕುರಿತು ಯಾವುದೇ ಚಕಾರವೆತ್ತದೇ, ಈ ಸಂಘದ ತಾಲ್ಲೂಕು ಅಧ್ಯಕ್ಷರಿಗೆ ನಮ್ಮ ರಾಜಿನಾಮೆಯನ್ನು ಗೌರವಯುತವಾಗಿ ಸಲ್ಲಿಸಿರುತ್ತೇವೆ. ಅಲ್ಲದೇ ಬೇರೆ ಸಂಘಟನೆಯ ಸದಸ್ಯತ್ವ ಪಡೆದಿರುತ್ತೇವೆ. ಆದರೂ ಕಾರ್ಯ ನಿರತ ಪರ್ತಕರ್ತರ ಸಂಘದ ಜಿಲ್ಲಾ ಘಟಕ ರಾಜಿನಾಮೆ ಅಂಗೀಕರಿಸಿ, ಸದಸ್ಯತ್ವ ಅಮಾನತು ಮಾಡಿದ್ದೇವೆ ಎಂಬ ಹೇಳಿಕೆ ಎಷ್ಟರ ಮಟ್ಟಿಗೆ ಸಮಂಜಸ, ನಮಗೆ ಅವಮಾನ ಮಾಡುವ ಉದ್ದೇಶದಿಂದ ಹೇಳಿಕೆ ನೀಡಿರುವ ಕಾರಣ ಸಂಘದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಹೇಳಲೇ ಬೇಕಾಗಿ ಬಂತು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: