May 17, 2024

Bhavana Tv

Its Your Channel

ಸಬಗೇರಿ ಶಾಲಾ ಮಕ್ಕಳಿಗೆ ಶಾಲಾ ಪ್ರಾರಂಭೋತ್ಸವದಲ್ಲಿ ಆರತಿ ಎತ್ತಿ ಸ್ವಾಗತ

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

ಯಲ್ಲಾಪುರ:- ಯಲ್ಲಾಪುರ ತಾಲೂಕಿನ ಸಬಗೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ಹಾಗೂ ಏಳನೇ ತರಗತಿಯ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಶಾಲಾ ಮಕ್ಕಳಿಗೆ ಆರತಿ ಎತ್ತಿ, ಅಕ್ಷತೆಯನ್ನು ಹಾಕಿ ಪುಷ್ಪಗುಚ್ಛವನ್ನು ನೀಡುವದರ ಮೂಲಕ ಸ್ವಾಗತಿಸಿ ಬರ ಮಾಡಿ ಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬಿ.ಆರ್.ಪಿಯ ಉಷಾ ನಾಯಕ, ಸಿ.ಆರ್.ಪಿ.ಯ ಶಿವಾನಂದ ವೇರ್ಣೆಕರ, ಯಲ್ಲಾಪುರ ತಾಲೂಕು ಶಿಕ್ಷಕರ ಸಂಘದ ಸದಸ್ಯರಾದ ಭಾರತಿ ನಾಯಕ, ಕುಸುಮಾ ನಾಯಕ,ಸರಸ್ವತಿ ಭಟ್ಟ,ಶಾಲಾ ಶೈಕ್ಷಣಿಕ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು,ಸಬಗೇರಿಯ ನಾಗರೀಕರು ಉಪಸ್ಥಿತರಿದ್ದರು.

error: