May 17, 2024

Bhavana Tv

Its Your Channel

ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶದ ಮಳೆ ಹಾನಿ ವಿವರ ಸಂಗ್ರಹಿಸಲು ಕೇಂದ್ರ ತಂಡ ಯಲ್ಲಾಪುರಕ್ಕೆ ಆಗಮನ

ವರದಿ:ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ತಿಂಗಳು ಅತೀವೃಷ್ಠಿಯಿಂದ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಆದ ಹಾನಿಯ ವಿವರಗಳನ್ನು ಕಲೆಹಾಕಲು ಕೇಂದ್ರ ತಂಡ ಜಿಲ್ಲೆಗೆ ಆಗಮಿಸಿದೆ.ಯಲ್ಲಾಪುರದ ಎಪಿಎಂಸಿ ಆವರಣದಲ್ಲಿ ನಡೆಸಿದ ಸಭೆಯಲ್ಲಿ ಜಿಲ್ಲಾಧಿಕಾರಿಯವರು ಹಾನಿಯ ವಿವರಗಳನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ಕೈಲಾಸ್ ಸಂಕ್ಲಾ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿ ಎಸ್ ವಿಜಯಕುಮಾರ್ ಹಾಗೂ ರಾಜ್ಯ ಕೆ.ಎಸ್.ಡಿ.ಎಂ.ಎ ದ ಹಿರಿಯ ಸಲಹೆಗಾರ ಡಾ.ಜಿ. ಶ್ರೀನಿವಾಸ್ ರೆಡ್ಡಿ ಇವರುಗಳ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.ಅತೀವೃಷ್ಠಿಯಿಂದ ಜಿಲ್ಲೆಯ ಹಳಿಯಾಳ, ಯಲ್ಲಾಪುರ, ಶಿರಸಿ, ದಾಂಡೇಲಿ, ಅಂಕೋಲಾ, ಕಾರವಾರ ತಾಲ್ಲೂಕಿನಲ್ಲಿ ಹೆಚ್ಚಿನ ಹಾನಿಯಾಗಿದೆ. ಯಲ್ಲಾಪುರ ತಾಲ್ಲೂಕಿನಲ್ಲಿ ಹೆಚ್ಚು ಭೂಕುಸಿತವಾಗಿದ್ದು, ಅದರಲ್ಲಿ ಹೆಚ್ಚಿನ ಪ್ರದೇಶ ಅರಣ್ಯ ಪ್ರದೇಶವಾಗಿರುವ ಕಾರಣ ಜನವಸತಿಗೆ ಹೆಚ್ಚು ಪರಿಣಾಮ ಬೀರಲಿಲ್ಲ. ಆದರೂ ಮನೆಗಳು, ರಸ್ತೆ, ಹೆದ್ದಾರಿ, ಸೇತುವೆ, ಚಿಕ್ಕ ನೀರಾವರಿಗೆ ಹೆಚ್ಚು ಪರಿಣಾಮ ಬೀರಿದೆ ಎಂದ ಜಿಲ್ಲಾಧಿಕಾರಿ ಚಿಕ್ಕ ಮತ್ತು ಅತೀ ಚಿಕ್ಕ ರೈತರಿಗೆ ೧೯.೧೩ ಕೋಟಿ ರೂಪಾಯಿ, ಪಶುಸಂಗೋಪನೆಗೆ ೦.೫೪ ಕೋಟಿ, ಮೀನುಗಾರಿಕೆ,೦.೩೦ ಕೋಟಿ, ಮನೆಹಾನಿ ೧೬.೮೫ ಕೋಟಿ, ಹಾಗೂ ರಸ್ತೆ, ಸರ್ಕಾರಿ ಕಟ್ಟಡ, ಹೆದ್ದಾರಿಯಂತಹ ಇನ್ಫ್ರಾ ಸ್ಟ್ರಕ್ಚರ್ ೮೨೮ ಕೋಟಿ ಒಟ್ಟೂ ೮೬೩.೫೭ ಕೋಟಿ ರೂಪಾಯಿ ಹಾನಿಯಾಗಿದೆ. ಆದರೆ ಕೇಂದ್ರ ಸರ್ಕಾರದ ಎಸ್.ಡಿ.ಆರ್.ಎಫ್. ಮತ್ತು ಎನ್.ಡಿ.ಆರ್.ಎಫ್ ಅನ್ವಯ ಕೇವಲ ೫೬.೨೫ ಕೋಟಿ ರೂಪಾಯಿ ಮಾತ್ರ ಪರಿಹಾರ ವಿತರಿಸಲು ಸಾಧ್ಯವಿದೆ. ಎಂದು ಪಿಪಿಟಿ ಮೂಲಕ ವಿವರಿಸಿದರು.ಸರ್ಕಾರದ ವಸತಿ ಯೋಜನೆಯಲ್ಲಿ ಧನಸಹಾಯ ಪಡೆದ ಮನೆ ಹಾನಿಯಾಗಿದ್ದರೆ ಅದರ ವಿವರ ಕಲೆಹಾಕಿ ಪರಿಹಾರದ ಹಣ ನೀಡುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ಕೇಲಾಸ್ ಸಂಕ್ಲಾ ಸಲಹೆ ನೀಡಿದರು.
ಸಭೆಗೆ ಆಗಮಿಸಿದ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಕೇಂದ್ರ ತಂಡವನ್ನು ಸನ್ಮಾನಿಸಿ ಜಿಲ್ಲೆಯಲ್ಲಿ ಸುಮಾರು ೯೦೦ ಕೋಟಿ ರೂಪಾಯಿ ಹಾನಿಯನ್ನು ಅಂದಾಜಿಸಲಾಗಿದೆ. ಜಿಲ್ಲೆಯ ಜನರ ಪರೀಸ್ಥಿತಿಯನ್ನು ಅವಲೋಕನ ಮಾಡಿ, ಜನರ ಸ್ಥಿತಿಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟು ಕೇಂದ್ರದಿAದ ಹೆಚ್ಚಿನ ಅನುದಾನ ಸಿಗುವಂತೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಡಿಸಿ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯ್ತಿ ಸಿಇಓ ಪ್ರಿಯಾಂಗಾ ಎಂ.ಶಿರಸಿ ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ, ಯಲ್ಲಾಪುರ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ, ಹಾಗೂ ಜಿಲ್ಲೆ ಮತ್ತು ತಾಲ್ಲೂಕಿನ ಹಿರಿಯ ಅಧಿಕಾರಿಗಳಿದ್ದರು. ನಂತರ ಕೇಂದ್ರ ತಂಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳಿದರು.

error: