May 17, 2024

Bhavana Tv

Its Your Channel

ರೇಷ್ಮೆ ಬೇಸಾಯದ ನವೀನ ತಾಂತ್ರಿಕತೆ ಕುರಿತು ತರಬೇತಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಮಾರುಕಟ್ಟೆ ಮತ್ತು ಸಿಬ್ಬಂದಿಗಳ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಉನ್ನತ ಮಟ್ಟದಲ್ಲಿದ್ದ ರೇಷ್ಮೆ ವ್ಯವಸಾಯ ಇಂದು ಸಂಪೂರ್ಣ ನಶಿಸುವ ಹಂತ ತಲುಪಿರುವುದು ಬೇಸರದ ಸಂಗತಿ ಎಂದು ಶಿರಸಿಯ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರ ಹೆಗಡೆ ಹೇಳಿದರು.ಅವರು ತಾಲೂಕಿನ ಗಡಿಭಾಗದ ಚಿಪಗೇರಿಯ ಶ್ರೀರಾಮ ವನವಾಸಿ ವಿದ್ಯಾರ್ಥಿ ನಿಲಯದಲ್ಲಿ ಜಿ.ಪಂ ಮತ್ತು ರೇಷ್ಮೆ ಇಲಾಖೆಗಳು ಸಂಯುಕ್ತವಾಗಿ ಆತ್ಮ ಯೋಜನೆಯಡಿ `ರೇಷ್ಮೆ ಬೇಸಾಯದ ನವೀನ ತಾಂತ್ರಿಕತೆ ಕುರಿತು ರೈತರಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಜಿಲ್ಲೆಯ ರೈತರು ಕೃಷಿ ಕುರಿತಾಗಿ ವಿವಿಧ ಕಾರಣಗಳ ತಮ್ಮ ಅನಾಸಕ್ತಿ ತೊರೆದು, ಇರುವ ಅವಕಾಶಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದರು.ಯಲ್ಲಾಪುರದ ಕೃಷಿ ಇಲಾಖೆಯ ಆತ್ಮ ಯೋಜನೆಯ ಸಂಯೋಜನಾಧಿಕಾರಿ ಎಂ.ಜಿ.ಭಟ್ಟ ಮಾತನಾಡಿ, ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುವ ಪ್ರಾಕೃತಿಕ ವೈಪರೀತ್ಯಗಳಿಂದ ರೈತರು ಕಂಗಾಲಾಗಿ, ಬದುಕು ಸವಾಲಾಗಿ ಪರಿಣಮಿಸಿದೆ. ಈ ನಡುವೆ ದೇಶದ ಬೆನ್ನೆಲುಬಾಗಿರುವ ರೈತರು ಯಾವುದಕ್ಕೂ ಧೃತಿಗೆಡದೇ, ತಮ್ಮ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ರೈತರಿಗಾಗಿ ಸರ್ಕಾರ ಅನೇಕ ಉಪಯುಕ್ತ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇಲಾಖೆಗಳ ಮೂಲಕ ಸಿಗುತ್ತಿರುವ ವಿವಿಧ ನೆರವು ಮತ್ತು ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಎಂ.ಕೆ.ಹೆಗಡೆ ಮಾತನಾಡಿ, ಸರ್ಕಾರ ಮತ್ತು ವಿವಿಧ ಸಂಘಟನೆಗಳು ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿದರೂ ಅದನ್ನು ಬಳಸಿಕೊಳ್ಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರದಿರುವುದು ಉತ್ತಮ ಸಂಗತಿಯಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಂದರಗಿ ಗ್ರಾ.ಪಂ ಸದಸ್ಯರಾದ ನಿರ್ಮಲಾ ನಾಯ್ಕ, ಪ್ರಗತಿಪರ ಕೃಷಿಕ ಮಹೇಶ ಹೆಗಡೆ ಗಿರಣಿಮನೆ, ವಿದ್ಯಾರ್ಥಿ ನಿಲಯದ ಅಧ್ಯಕ್ಷರಾದ ರಮೇಶರಾವ್ ಮಾತನಾಡಿದರು.ಪ್ರಮುಖರಾದ ಸೋಮನಾಥ ಜೋಷಿ, ಮಹಾಬಲೇಶ್ವರ ಹೆಗಡೆ ಉಪಸ್ಥಿತರಿದ್ದರು.ರೇಷ್ಮೆ ಇಲಾಖೆಯ ಶ್ರೀಪಾದ ಹೆಗಡೆ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.ಕಾರ್ಯಾಗಾರದಲ್ಲಿ ೧೫ ರೈತರು ಪಾಲ್ಗೊಂಡಿದ್ದರು

error: