May 18, 2024

Bhavana Tv

Its Your Channel

ರಾಣಿ ಅಬ್ಬಕ್ಕ ಮತ್ತು ಚೆನ್ನಭೈರಾದೇವಿ ಜಯಂತಿ ಆಚರಿಸುವಂತಾಗಬೇಕು -ಪ್ರಾಂಶುಪಾಲೆ ವಿಜಯಾ ಡಿ.ನಾಯ್ಕ ಅಭಿಮತ

ವರದಿ: ವೇಣುಗೋಪಾಲ ಮದ್ಗುಣಿ

ಕಾರವಾರ: ರಾಣಿ ಚೆನ್ನಭೈರಾದೇವಿ, ರಾಣಿ ಅಬ್ಬಕ್ಕ ಜಯಂತಿಯನ್ನು ಆಚರಿಸಲು ಸರ್ಕಾರ ಆದೇಶಿಸಬೇಕು. ವಿದ್ಯಾರ್ಥಿಗಳಿಗೆ ಇತಿಹಾಸ ಪ್ರಜ್ಞೆ ಮುಖ್ಯ ಎಲ್ಲಾ ಕಾಲದಲ್ಲೂ ಮಹಿಳೆಯನ್ನು ಹತ್ತಿಕ್ಕುವ ತಂತ್ರಗಾರಿಕೆ ನಡೆದಿದೆ. ಅದಕ್ಕೆ ಪ್ರತಿರೋಧವೂ ಬಂದಿದೆ.
ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಿದ ಮೊದಲ ಕನ್ನಡದ ರಾಣಿ. ಈಕೆಯ ಜಯಂತಿಯನ್ನು ಶಾಲಾ ಕಾಲೇಜಿನಲ್ಲೇ ಆಚರಿಸಬೇಕು. ಕಾರಣ ವಿದ್ಯಾರ್ಥಿಗಳಲ್ಲಿ ಇತಿಹಾಸ ಪ್ರಜ್ಞೆ ಬೆಳೆಯುತ್ತದೆ ಎಂದು ಸರಕಾರಿ ಕಲಾ ವಿಜ್ಞಾನ ಸ್ವಾಯತ್ತ ಪದಪ್ರಾಂಶುಪಾಲೆ ವಿಜಯಾ ಡಿ.ನಾಯ್ಕ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಸರಕಾರಿ ಕಲಾ ವಿಜ್ಞಾನ ಪದವಿ ಕಾಲೇಜಿನ ಎವಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ರಾಣಿ ಚೆನ್ನಮ್ಮ ಬ್ರಿಟಿಷರ ದಬ್ಬಾಳಿಕೆ ನೀತಿ ವಿರುದ್ಧ ಧ್ವನಿ ಎತ್ತಿದ ರಾಣಿ. ಆಕೆಗೆ ಮಲ್ಲಪ್ಪ ಶೆಟ್ಟಿ, ವೆಂಕೋಬರಾವ್ ಎಂಬುವವರು ದ್ರೋಹ ಬಗೆದರು. ಬ್ರಿಟಿಷರ ಜೊತೆ ರಾಜಿಯಾದರು. ಇಂತಹ ದ್ರೋಹಿಗಳು ಎಲ್ಲಾ ಕಾಲದಲ್ಲಿಯೂ ಇರುತ್ತಾರೆ ಎಂದರು.ಎಲ್ಲಾ ಕಾಲದಲ್ಲೂ ಮಹಿಳೆಯನ್ನು ಹತ್ತಿಕ್ಕುವ ತಂತ್ರಗಾರಿಕೆ ನಡೆದಿದೆ. ಅದಕ್ಕೆ ಪ್ರತಿರೋಧವೂ ಬಂದಿದೆ ಎಂದರು. ರಾಣಿ ಅಬ್ಬಕ್ಕ ಮತ್ತು ಚೆನ್ನಭೈರಾದೇವಿ ಜಯಂತಿ , ಉತ್ಸವಗಳನ್ನು ಸಹ ಸರ್ಕಾರ ಆಚರಿಸಲು ಮುಂದಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.ಕಿತ್ತೂರು ಸಂಸ್ಥಾನದ ರಾಣಿ ಕಿತ್ತೂರು ಚೆನ್ನಮ್ಮ ಬೃಹತ್ ಬ್ರಿಟಿಷ್ ಸೈನ್ಯವನ್ನು ಎದುರಿಸಲು ತೋರಿದ ಧೈರ್ಯ ಮತ್ತು ಸಾಹಸ ಸ್ವಾತಂತ್ರ‍್ಯ ಹೋರಾಟದ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲು ಎಂದು ಅಪರ ಜಿಲ್ಲಾಧಿಕಾರಿ ಎಚ್ .ಕೆ. ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟರು. ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಅಥಿತಿಯಾಗಿ ಆಗಮಿಸಿ ಮಾತನಾಡಿ ಬ್ರಿಟಿಷ್‌ರ ವಿರುದ್ಧ ಹೋರಾಡಿದ ಮೊಟ್ಟಮೊದಲ ರಾಣಿ ಕಿತ್ತೂರು ಚೆನ್ನಮ್ಮ, ಅವರ ಸ್ವಾಭಾಮಾನದ ಬದುಕು ನಮ್ಮೆಲ್ಲರಿಗೂ ಮಾದರಿ ಎಂದರು.ಕಿತ್ತೂರು ರಾಣಿ ಚೆನ್ನಮ್ಮ ಕುರಿತು ನಿವೃತ್ತ ಅಧ್ಯಾಪಕ ವೆಂಕಟೇಶಗಿರಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ಎನ್. ಎಫ್. ನರೋನಾ, ನಗರಸಭೆಯ ಉಪಾಧ್ಯಕ್ಷ ಪ್ರಕಾಶ್ .ಪಿ.ನಾಯ್ಕ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಎನ್ .ಜಿ. ನಾಯ್ಕ, ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲೆ ವಿಜಯಾ. ಡಿ. ನಾಯ್ಕ ಹಾಗೂ ಸಿಬ್ಬಂದಿ, ಮತ್ತಿತರು ಉಪಸ್ಥಿತಿತರಿದ್ದರು.

error: