April 26, 2024

Bhavana Tv

Its Your Channel

ಗುಳ್ಳಾಪುರ ಸೇತುವೆ ತಾತ್ಕಾಲಿಕ ನಿರ್ಮಾಣ, ಹರ್ಷ ವ್ಯಕ್ತಪಡಿಸಿದ ಜನತೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಕಳೆದ ವರ್ಷ ಸುರಿದ ಅತೀವ ಮಳೆಯಿಂದಾಗಿ ತಾಲೂಕಿನ ಗುಳ್ಳಾಪುರ – ಹಳವಳ್ಳಿ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋದ ಪರಿಣಾಮ ಈ ಭಾಗದ ಸಾರ್ವಜನಿಕರ ಸಂಪರ್ಕ ಕಡಿತಕೊಂಡಿತ್ತು.ಇದರಿAದ ಅಂಕೋಲಾ ಹಾಗೂ ಯಲ್ಲಾಪುರದ ಸಂಪರ್ಕಕ್ಕೆ ತೊಂದರೆಯಾಗಿ ಜನರ ಜೀವನದ ಮೇಲೆ ಪರಿಣಾಮ ಬೀರಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿತ್ತು.ಇದನ್ನು ಮನಗೊಂಡು ಸ್ಥಳೀಯರ ಬೇಡಿಕೆಗೆ ಶೀಘ್ರವಾಗಿ ಸ್ಪಂದಿಸಿದ ಸಚಿವರಾದ ಶಿವರಾಮ ಹೆಬ್ಬಾರವರು 20 ಲಕ್ಷ ರೂಪಾಯಿ ವಿಶೇಷ ಅನುದಾನವನ್ನು ಮಂಜೂರಿ ಮಾಡುವ ಮೂಲಕವಾಗಿ ತಾತ್ಕಾಲಿಕ ಸೇತುವೆ ನಿರ್ಮಾಣದ ಸಹಕರಿಸಿದರು.
ಸಚಿವರ ಸಹಕಾರದೊಂದಿಗೆ ಸ್ಥಳೀಯರು ಸೇರಿಕೊಂಡು ತಾತ್ಕಾಲಿಕ ಸೇತುವೆಯನ್ನು ನಿರ್ಮಾಣಗೊಂಡ ಪ್ರಯುಕ್ತ ಸೇತುವೆಯನ್ನು ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರವರು ತಾತ್ಕಾಲಿಕ ಸೇತುವೆಯ ಪರಿಶೀಲನೆ ನಡೆಸಿ, ಸ್ಥಗಿತಗೊಂಡ ಯಲ್ಲಾಪುರ – ಹಳವಳ್ಳಿ ಬಸ್ ಪುನರ್ ಆರಂಭಕ್ಕೆ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರು ಹಾಗೂ ಹಿರಿಯರಾದ ಶ್ರೀಕಾಂತ ಶೆಟ್ಟಿ, ಪ್ರಮುಖರಾದ ಮುರಳಿ ಹೆಗಡೆ, ವಿಜಯ ಮಿರಾಶಿ ಹಾಗೂ ಗ್ರಾಮ ಪಂಚಾಯತ ಸದಸ್ಯರು, ಗುಳ್ಳಾಪುರ – ಹಳವಳ್ಳಿ ಭಾಗದ ಮುಖಂಡರು, ಗ್ರಾಮಸ್ಥರು, ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

error: