January 25, 2022

Bhavana Tv

Its Your Channel

ಯಲ್ಲಾಪುರದಲ್ಲಿ ಗಣರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಣಯ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಯಲ್ಲಾಪುರದ ತಹಶೀಲ್ದಾರ ಕಛೇರಿಯಲ್ಲಿ ಗಣರಾಜ್ಯೋತ್ಸವದ ಪೂರ್ವ ಸಿದ್ಧತೆಗಳ ಬಗ್ಗೆ ತಹಶೀಲ್ದಾರ ಶ್ರೀಕೃಷ್ಣ ಕಾಮಕರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಭಾರತಸೇವಾದಳ, ಸ್ಕೌಟ್ಸ& ಗೈಡ್ಸ್, ಎನ್.ಸಿ.ಸಿ, ಅಗ್ನೀಶಾಮಕ ದಳ, ಗೃಹರಕ್ಷಕ ದಳವರು ಒಟ್ಟು 200 ಜನರಿಗೆ ಸೀಮಿತವಾಗಿ ಪಥಸಂಚಲನದ ಮೂಲಕ ಗಣರಾಜ್ಯೋತ್ಸವ ಸಮಾರಂಭ ಆಚರಿಸಲು ನಿರ್ಧರಿಸಲಾಗಿದೆ.ಯಾವದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸದೆ ಇರಲು ನಿರ್ಧರಿಸಲಾಯಿತು.ಸರಕಾರದ ಮುಂದಿನ ಕೋವಿಡ ನಿಯಮದಲ್ಲಿ ಏನಾದರೂ ಬದಲಾವಣೆಯಾದರೆ ಅದರಂತೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.ಬೆಳಿಗ್ಗೆ 9 ಗಂಟೆಗೆ ಕಾಳಮ್ಮನಗರದ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸುವದು.ವೇದಿಕೆಯಲ್ಲಿ ಆಮಂತ್ರಿತರು ಮತ್ತು ಗಣ್ಯರು, ಜನಪ್ರತಿನಿಧಿಗಳು ಮಾತ್ರ ಕೂರಲು ಅವಕಾಶ ನೀಡ ಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿವಿಧ ಇಲಾಖೆಗಳಿಗೆ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಲಾಯಿತು.ಸಭೆಯಲ್ಲಿ ಗ್ರೇಡ-2 ತಹಶೀಲ್ದಾರ ಸಿ.ಜಿ.ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪ್ರಕಾಶ ನಾಯಕ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ, ನಾಗರೀಕ ವೇದಿಕೆಯ ಅಧ್ಯಕ್ಷರಾದ ರಾಮು ನಾಯ್ಕ,ಸಿಡಿಪಿಒ ರಪೀಕಾ, ಕ್ರೀಡಾಧಿಕಾರಿ ನಾರಾಯಣ ನಾಯಕ, ಸಂಜೀವ ಕುಮಾರ ಹೊಸ್ಕೇರಿ,ಸುಧಾಕರ ನಾಯಕ,ಗುರು ಗಡಗಿ, ಅಂಬೇಡ್ಕರ ಸೇವಾ ಸಮಿತಿಯ ಜಗನ್ನಾಥ ರೇವಣಕರ,ನಂದಿನ ಬಾಳಗಿ ಮುಂತಾದವರು ಉಪಸ್ಥಿತರಿದ್ದರು.

error: