May 16, 2024

Bhavana Tv

Its Your Channel

ಇಂದಿರಾ ನಾಯಕ ಅವರ ಕೊಡುಗೆ ಮಾದರೀಯ- ಉಪ ನಿರ್ದೇಶಕ ಟಿ.ಬಸವರಾಜ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ; ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕಿಯರಾದ ಇಂದಿರಾ ನಾಯಕ ಮೊಗಟಾ ಅವರು ನಲವತ್ತೈದು ಸಾವಿರ ಮೌಲ್ಯದ ಪೀಠೋಪಕರಣ, ಒಂದನೇ ತರಗತಿಯಿಂದ ಏಳನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಪಾಠೋಪಕರಣ ಹಾಗೂ ಶಾಲೆಗೆ ಕಬ್ಬಿಣದ ಗೇಟ್ ಒಳಗೊಂಡು ಸುಮಾರು ಒಂದು ಲಕ್ಷ ಮೌಲ್ಯದ ವಸ್ತುಗಳನ್ನು ತಾವು ಸೇವೆ ಸಲ್ಲಿಸುತ್ತಿರುವ ನಂದೊಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಿದ್ದು, ಅವರ ಕೊಡುಗೆ ಮಾದರಿಯಾದದ್ದು. ಇದು ನಲಿಕಲಿ ಮಕ್ಕಳ ಆರೋಗ್ಯ ಮತ್ತು ಕಲಿಕೆಗೆ ಅಮೂಲ್ಯ ನೆರವು ನೀಡುತ್ತದೆಯಲ್ಲದೇ ನಿವೃತ್ತಿಯ ಸಮಯದಲ್ಲಿ ಅವರು ನೀಡಿದ ಕೊಡುಗೆಯನ್ನು ಇಲಾಖೆ ಶ್ಲಾಘಿಸುತ್ತದೆ. ಸ್ಮಾರ್ಟ ಕ್ಲಾಸಿಗೆ ನೆರವುನೀಡಿದ ಪಾಲಕರು ನಮ್ಮೂರ ಶಾಲೆಯನ್ನು ನಾವೇ ಕಟ್ಟೋಣ ಎಂಬುದಕ್ಕೆ ಒಂದು ಉದಾಹರಣೆ ಎಂದು ಉಪನಿರ್ದೇಶಕರಾದ ಪಿ.ಬಸವರಾಜಪ್ಪ ನುಡಿದರು. ಅವರು ನಂದೊಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಿದ ಕೊಡುಗೆಯನ್ನು ಸ್ವೀಕರಿಸಿ ಹಾಗೂ ಸ್ಮಾರ್ಟ ಕಾಸ್ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾರಾಯಣ ನಾಯಕ, ತಾಲೂಕಾ ಶಿಕ್ಷಕ ಸಂಘದ ಅಧ್ಯಕ್ಷರಾದ ಆರ್.ಆರ್.ಭಟ್ಟ, ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ವಿನಾಯಕ ಭಟ್ಟ, ಸಿ.ಆರ್.ಪಿ.ಸಂಜೀವ ಹೊಸಗೇರಿ, ಶಿಕ್ಷಕಿ ಪ್ರತಿಭಾ ಹೆಗಡೆ ಮುಂತಾದವರು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕರಾದ ಭಾಸ್ಕರ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಅಮಿತ ಚವ್ಹಾಣ ವಂದಿಸಿದರು. ಇಂದಿರಾ ನಾಯಕ ಮೊಗಟಾ ಎಲ್ಲರಿಗೂ ಔತಣ ಕೂಟ ಏರ್ಪಡಿಸಿದ್ದರು.

error: