April 29, 2024

Bhavana Tv

Its Your Channel

ಗುಡಂದೂರನಲ್ಲಿ “ಹೊನಲು ಬೆಳಕಿನ ಮುಕ್ತ ಕಬ್ಬಡ್ಡಿ ಪಂದ್ಯಾವಳಿ”

ವರದಿ:ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಕಿರವತ್ತಿ ಗ್ರಾಮ ಪಂಚಾಯಿತ ವ್ಯಾಪ್ತಿಯ ಗುಡಂದೂರು ಗ್ರಾಮದಲ್ಲಿ “ಊರ ನಾಗರಿಕರು ಹಾಗೂ ಗುರು ಹಿರಿಯರ ಸಯುಕ್ತ” ಆಶ್ರಯದಲ್ಲಿ ಹೊನಲು ಬೆಳಕಿನ ಮುಕ್ತ ಕಬ್ಬಡ್ಡಿ ಪಂದ್ಯಾವಳಿ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರು ಮತ್ತು ಪ್ರಥಮ ಬಹುಮಾನದ ಪ್ರಾಯೋಜಕರು ಆಗಿರುವ ವಿಜಯ ಮಿರಾಸಿ, ಬಿಜೆಪಿ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಗ್ರಾಮ ಪಂಚಾಯತ ಸದಸ್ಯರಾದ ರೆಹಮತ ಅಬ್ಬಿಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಎಲ್ಲರಿಗೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಯಾ ಭೈರು ಪಾಟೀಲರವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಾನು ಬೈರು ಪಾಟೀಲ್, ಕಾಳ ಭೈರು ಪಾಟೀಲ್, ಲಕ್ಷ್ಮಣ್ ಕಾಳು ಪಾಟೀಲ್,ಜಾನು ಸಾಜೂ ಪಾಟೀಲ್, ಜಾನು, ಯಮ್ಕರ್ ಮಾಕು ಕೊಕ್ರೆ, ರಾಮು ಕೊಕ್ರೆ, ದೊಂಡು ಬಾಜಾರಿ, ಶಿಕ್ಷಕರರಾದ ನಾಗರಾಜ ನಾಯ್ಕ ನಾರಾಯಣ ಕಾಂಬ್ಳೆ, ಉದಯಕುಮಾರ್ ದೇವಕರ, ಚಂದ್ರೇಗೌಡ, ಮಂಜುನಾಥ್ ಬ್ಯಾಹಟ್ಟಿ ,ಜಗ್ಗು ಬಿರು ಯಮ್ಕರ,ಶಾಮು ಮಳ್ಳು ಪಿಂಗ್ಳೆ, ಸಿದ್ದು ಯಮ್ಕರ್ ಮುಂತಾದವರಿದ್ದರು
ಇದೇ ಸಂದರ್ಭದಲ್ಲಿ “ಬಂಜಾರ ಸಾಹಿತ್ಯ ಸೇವಾ ರಾಜ್ಯ ಪ್ರಶಸ್ತಿ” ಪುರಸ್ಕೃತ ಶಿಕ್ಷಕರಾದ ಗಂಗಾಧರ ಎಸ್ ಎಲ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೆ ರೆಹಮತ್ ಅಬ್ಬಿಗೇರಿಯವರನ್ನು ಶಿಕ್ಷಕರುಗಳಾದ ನಾರಾಯಣ ಕಾಂಬ್ಳೆ, ಉದಯಕುಮಾರ ದೇವ್ಕರ, ಚಂದ್ರೇಗೌಡ , ಮಂಜುನಾಥ, ಮುಸ್ತಾಕ್ ಶೇಖ್,ಉಸ್ಮಾನ್ ಪಟೇಲ ಹಾಗೂ ವಿವಿಧ ಮುಖಂಡರನ್ನು ಸಮಾಜದ ಸೈನಿಕರನ್ನು ಗೌರವಿಸಿ ಸನ್ಮಾನಿಸಲಾಯಿತು
ಪಂದ್ಯಾವಳಿಗೆ ಪ್ರಥಮ ಬಹುಮಾನ ೧೨,೦೦೧,ನ್ನು ವಿಜಯ ಮಿರಾಸಿ ಅವರು ಹಾಗೂ ಟ್ರೋಪಿಯನ್ನು ರೆಹಮತ್ ಅಬ್ಬಿಗಿರಿಯವರು, ದ್ವಿತೀಯ ಬಹುಮಾನವನ್ನು ಮಾಕು ಕೊಕ್ರೆ ಮತ್ತು ಧೋಂಡು ಬಾಜಾರಿ ಮತ್ತು ಟ್ರೋಪಿಯನ್ನು ರಾಮು ಪಾಂಡ್ರಮಿಸೆಯವರು, ತೃತೀಯ ಬಹಮಾನವನ್ನು ಧೂಳು ಪಿಂಗ್ಳೆ ಮತ್ತು ಟ್ರೋಫಿಯನ್ನು ಬಮ್ಮ ಬೀರು ಯಮ್ಕ, ಚತುರ್ಥ ಬಹುಮಾನವನ್ನು ಲಕ್ಕು ರಾಮು ಕೊಕ್ರೆ ಯವರು ಮತ್ತು ಟ್ರೋಫಿಯನ್ನು ಬಾಬು ನಾವು ಯಮ್ಕರವರು ನೀಡಿದರು.

error: