April 30, 2024

Bhavana Tv

Its Your Channel

ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್ ವಿತರಣೆ

ಬಾಗೇಪಲ್ಲಿ:- ಯುನೈಟೆಡ್ ವೇ ಬೆಂಗಳೂರು ಹಾಗೂ ಫೇಸ್ಬುಕ್ ಸಹಯೋಗದೊಂದಿಗೆ ಇಂದು ಬಾಗೇಪಲ್ಲಿ ಪಟ್ಟಣದ ಬಾಲಕಿಯರ ಶಾಲೆಯ ಆವರಣದಲ್ಲಿ ಸುಮಾರು ೧೬೫ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್ ಅನ್ನು ಬಾಗೇಪಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸತ್ಯನಾರಾಯಣ ರೆಡ್ಡಿ ಅವರಿಗೆ ಯುನೈಟೆಡ್ ವೇ ಮುಖ್ಯಸ್ಥ ಅನಿಲ್ ಕುಮಾರ್ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ಬಾಗೇಪಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸತ್ಯನಾರಾಯಣ ರೆಡ್ಡಿ ಮಾತನಾಡಿ ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಆಶಾ ಕಾರ್ಯಕರ್ತರು ಕೋವಿಡ್ ನಿರ್ಮೂಲನೆ ಮಾಡುವಲ್ಲಿ ಅವರ ಪಾತ್ರ ದೊಡ್ಡದು ಎಂದು ಹೇಳಿದರು. ಮುಂಚೂಣಿ ಕಾರ್ಯಕರ್ತರಾಗಿ ತಮ್ಮ ಅಮೂಲ್ಯ ಕೊಡುಗೆ ನೀಡುತ್ತಿರುವ ಕಾರ್ಯಕರ್ತೆಯರಿಗೆ ಅವರ ಆರೋಗ್ಯ ಸುರಕ್ಷತೆಯನ್ನು ಕಾಪಾಡಲು ನಮ್ಮ ಮೇಲೆ ಜವಾಬ್ದಾರಿ ಇದೆ ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ಕಳೆದ ವರ್ಷ ಕರೋನ ಸಮಯದಲ್ಲಿ ನೆರವಿನ ಹಸ್ತ ಚಾಚಿದರು ಇಂದು ಸಹ ಈ ಸಂಸ್ಥೆ ಮುಂದೆ ಒಂದು ಅಗತ್ಯ ಮಾಸ್ಕ್, ಸ್ಯಾನಿಟೈಜರ್, ಗ್ಲೌಸ್ ಹಾಗೂ ಫೇಸ್ ಶೀಲ್ಡ್ ಸೇರಿದಂತೆ ಅಗತ್ಯ ಆರೋಗ್ಯ ಪರಿಕರಗಳನ್ನು ವಿತರಣೆ ಮಾಡಿದ್ದಾರೆ
ಆಶಾ ಕಾರ್ಯಕರ್ತೆಯರಿಗೆ ೩ ಪದರ ೧೦,೦೦೦ ಮಾಸ್ಕ್ ಗಳು, ೧೦,೦೦೦ ಎನ್-೯೫ ಮಾಸ್ಕ್, ಸ್ಯಾನಿಟೈಜರ್, ೧೦೦೦ ಹ್ಯಾಂಡ್ ಗ್ಲೌಜ್, ಫೇಸ್ ಶೀಲ್ಡ್ಗಳನ್ನು ಹಾಗೂ ೧೬೫ ಆಶಾ ಕಾರ್ಯಕರ್ತರಿಗೆ ಪಿ.ಪಿ.ಕಿಟ್ ಗಳನ್ನು ಒಳಗೊಂಡ ಸುರಕ್ಷಿತ ಆರೋಗ್ಯ ಪರಿಕರ (ಸೇಫ್ಟಿ ಕಿಟ್) ಗಳನ್ನು ನೀಡಿದ್ದಾರೆ ಎಂದು ಹೇಳಿದರು.


ತಾಲ್ಲೂಕು ತಹಶಿಲ್ದಾರ್ ಡಿ.ಎ.ದಿವಾಕರ್ ಮಾತನಾಡಿ ಕೊರೊನಾ ಸೋಂಕು ಭೀತಿಯಲ್ಲೂ ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾದದು ಎಂದು ಹೇಳಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಗೆ ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ಬಾಗೇಪಲ್ಲಿ ತಾಲ್ಲೂಕು ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಹದಿನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಆರೋಗ್ಯ ಕಿಟ್ ಗಳನ್ನು ನೀಡಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ.ಇಂದಿರಾ ಆರ್.ಕಬಾಡೆ ಬಾಗೇಪಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ ಸತ್ಯನಾರಾಯಣ ರೆಡ್ಡಿ, ತಾಲ್ಲೂಕು ತಹಶಿಲ್ದಾರ್ ಡಿ. ಎ.ದಿವಾಕರ್, ಯುನೈಟೆಡ್ ವೇ ಮುಖ್ಯಸ್ಥ ಅನಿಲ್ ಕುಮಾರ್ ಹಾಗೂ ಯುನೈಟೆಡ್ ವೇ ಪದಾಧಿಕಾರಿಗಳು ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು

error: