April 30, 2024

Bhavana Tv

Its Your Channel

ಎರಡು ಸಾವಿರ ಪ್ರಶ್ನೋತ್ತರಗಳಿಗೆ ಉತ್ತರಿಸುವ ನಾಗಮಂಗಲ ಹತ್ತು ವರ್ಷದ ಗ್ರಾಮೀಣ ಪ್ರತಿಭೆ ತನುಶ್ರೀ

ನಾಗಮಂಗಲ ತಾಲೂಕಿನ ಹೋಣಕೆರೆ ಹೋಬಳಿಯ ಗುರುಗಳ ಮಾದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿರುವ ಹತ್ತು ವರ್ಷದ ತನುಶ್ರೀ ಸುಮಾರು ೨೦೦೦ ಕ್ಕೂ ಹೆಚ್ಚು ಪ್ರಶ್ನೆಗಳಿಗೆ ತಟ್ಟನೆ ಉತ್ತರಿಸುತ್ತಾ ತನ್ನಲ್ಲಿರುವ ಆಗಾದವಾದ ಜ್ಞಾಪಕಶಕ್ತಿಯನ್ನು ಹೊರಚೆಲ್ಲುತ್ತಾಳೆ ಶಿಕ್ಷಣ ಇಲಾಖೆ ವತಿಯಿಂದ ನಡೆಸುವ ಪ್ರತಿಭಾಕಾರಂಜಿಯ ತಾಲ್ಲೂಕು ಮಟ್ಟ ಮತ್ತು ಜಿಲ್ಲಾಮಟ್ಟದ ಕಾರ್ಯಕ್ರಮಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾಳೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮೈಸೂರು ವಿಭಾಗದ ಗಣ್ಯವ್ಯಕ್ತಿಗಳು ಬಂದು ಹುಡುಗಿಯ ಸಂದರ್ಶನವನ್ನು ಮಾಡಿ ಗೌರವಪೂರ್ವಕವಾಗಿ ಸನ್ಮಾನಿಸಿದ್ದಾರೆ
ವಿದ್ಯಾಭ್ಯಾಸ ಜೊತೆಗೆ ಕ್ರೀಡೆ. ಚಟುವಟಿಕೆ.ಸಾಹಿತ್ಯ ಆಸಕ್ತಿಯನ್ನು ಮೈಗೂಡಿಸಿಕೊಂಡಿರುವ ಈ ಪುಟ್ಟ ಬಾಲೆ ಮುಂದಿನ ದಿನದಲ್ಲಿ ನಾನು ಓದಿದ ಶಾಲೆಗೆ ಶಿಕ್ಷಕಿಯಾಗಿ ಬರಬೇಕೆಂಬುದು ಮಹದಾಸೆಯನ್ನು ಹೊಂದಿದ್ದಾಳೆ

ಅರಳುವ ಪ್ರತಿಭೆ ಮೊಳಕೆಯಲ್ಲೇ ಜ್ಞಾನದ ಪಸಿರನ್ನು ಹೊರಚೆಲ್ಲುತ್ತದೆ ಎಂಬುದಕ್ಕೆ ಗುರುಗಳ ಮಾದಹಳ್ಳಿ ಗ್ರಾಮದ ಬಡಕುಟುಂಬದ ಕೇಶವಮೂರ್ತಿ ಹಾಗೂ ಭಾಗ್ಯಮ್ಮನವರ ಸುಪುತ್ರಿ ತನುಶ್ರೀ ಎಂಬ ಈ ಪುಟ್ಟ ಬಾಲಕಿ ಸುತ್ತಮುತ್ತಲ ಗ್ರಾಮದ ಪುಟ್ಟ ಪುಟ್ಟ ಮಕ್ಕಳಿಗೆ ಸ್ಪೂರ್ತಿ ಆಗಿದ್ದಾಳೆ

ಖಾಸಗಿ ಶಾಲೆಗಳ ವ್ಯಾಮೋಹದಿಂದ ಪೋಷಕರು ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸುವ ಈ ಕಾಲಘಟ್ಟದಲ್ಲಿ ಸರ್ಕಾರಿ ಕನ್ನಡ ಶಾಲೆಯಲ್ಲಿ ಕಲಿತು ಎಲ್ಲ ವಿಚಾರಗಳನ್ನು ಮಂಥನ ಮಾಡಿಕೊಂಡು ರಾಜ್ಯ. ಅಂತರರಾಜ್ಯ. ವಿಶ್ವಮಟ್ಟದ ವಿಚಾರ. ಸಮಗ್ರ ಸಾಹಿತ್ಯ .ಸಂಗೀತ. ನಾಟಕ.ಕಲೆ. ಪರಿಸರ. ವಿಜ್ಞಾನ. ಕ್ರೀಡೆ. ರಾಜಕೀಯ ವ್ಯಕ್ತಿಗಳ ಪರಿಚಯ .ನಾಗಮಂಗಲ ತಾಲೂಕು ಸಮಗ್ರ ಮಾಹಿತಿಯನ್ನು ನಿರ್ಗಳವಾಗಿ ಸುಲಲಿತವಾಗಿ ಮಾತನಾಡುತ್ತಾಳೆ

ಉತ್ತಮ ಪರಿಸರ ಮನೆಯ ಒಳ್ಳೆಯ ವಾತಾವರಣ ಮಾರ್ಗದರ್ಶಕ ಗುರುವಿದ್ದರೆ ಹಳ್ಳಿಯ ಸೊಗಡಿನ ಇಂತಹ ನೂರಾರು ವಿದ್ಯಾರ್ಥಿಗಳು ಭಾರತದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಕಾರವಾಗುತ್ತದೆ
ಬಾಲಕಿಯ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವುದು ಇದೇ ಶಾಲೆಯ ಶಿಕ್ಷಕ ಆನಂದ ಶೆಟ್ಟಿಯವರು ಅಪಾರ ಶ್ರಮ ಅಪಾರವಾದದ್ದು ತನುಶ್ರೀ ಯಂತೆ ಹಲವು ಮಕ್ಕಳಲ್ಲಿ ಸ್ಪೂರ್ತಿದಾಯಕ ವಾಗಿ ವಿದ್ಯಾಭ್ಯಾಸ ನೀಡುತ್ತಿದ್ದಾರೆ ಕಲಿಕೆಯನ್ನು ಚಿತ್ರಣ ನೋಡಿ ಕರೆಯಬೇಕೆಂದು ತಮ್ಮ ಸ್ವಂತ ಖರ್ಚಿನಿಂದ ಶಾಲೆಯ ಪ್ರತಿ ಗೋಡೆಗಳಲ್ಲಿ ಕಲಿಕೆಯ ಸಮಗ್ರ ಮಾಹಿತಿಯನ್ನು ಚಿತ್ರಿಸಿ ವಿದ್ಯಾಭ್ಯಾಸ ನೀಡುತ್ತಿದ್ದಾರೆ ಹಾಗೂ ಖಾಸಗಿ ಶಾಲೆಗೆ ಹೋಗುತ್ತಿದ್ದ ಮಕ್ಕಳನ್ನು ಕೂಡ ಸರ್ಕಾರಿ ಶಾಲೆಗೆ ಕರೆತಂದು ಉತ್ತಮ ಶಿಕ್ಷಣ ನೀಡುತ್ತಿದ್ದಾರೆ ತನುಶ್ರೀ ಯಂತೆ ಗ್ರಾಮೀಣ ಪ್ರದೇಶದ ಹತ್ತಾರು ಮಕ್ಕಳು ವಿದ್ಯಾವಂತರಾಗಿ ಸಮಾಜಕ್ಕೆ ಒಬ್ಬ ಗಣ್ಯ ವ್ಯಕ್ತಿಯಾಗಿ ಹೊರಹೊಮ್ಮಲಿ ಎಂಬುದು ಶಿಕ್ಷಕ ಆನಂದ ಶೆಟ್ಟಿ ಅವರ ಕನಸಾಗಿದೆ

ವರದಿ: ಚಂದ್ರಮೌಳಿ ನಾಗಮಂಗಲ

.

error: