April 30, 2024

Bhavana Tv

Its Your Channel

ಫೆ.೮ರಿಂದ ಫೆ.೧೪ರವರೆಗೆ ಸಾರದಹೊಳೆ ಹಳೆಕೋಟೆ ಹನುಮಂತ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಮಹೋತ್ಸವ

ಭಟ್ಕಳ ತಾಲೂಕಿನ ಶಿರಾಲಿ ಸಾರದಾಹೊಳೆಯಲ್ಲಿರುವ ಐತಿಹಾಸಿಕ ಶ್ರೀ.ಹಳೆಕೋಟೆ ಹನುಮಂತ ದೇವರ
ಪುನರ್ ಪ್ರತಿಷ್ಠಾಪನೆ ಹಾಗೂ ಶಿಲಾಮಯ ದೇವಾಲಯದ ಉದ್ಘಾಟನಾ ಮಹೋತ್ಸವವು ಫೆ.೮ರಿಂದ ಫೆ.೧೪ರವರೆಗೆ ವಿಜೃಂಭಣೆಯಿAದ ನೆರವೇರಲಿದೆ’ ಎಂದು ಮಾವಳ್ಳಿ ಹೋಬಳಿ ನಾಮಧಾರಿ ಸಮಾಜದ ಅಧ್ಯಕ್ಷ ಸುಬ್ರಾಯ ನಾಯ್ಕ ಗುಮ್ಮನಹಕ್ಕಲ ಹೇಳಿದರು.

ಅವರು ಸುದ್ದಿಗೋಷ್ಟಿಯಲ್ಲಿ ಮತನಾಡಿ ಸುಮಾರು ೫.೫ ಕೋಟಿ ರೂಪಾಯಿಗಿಂತ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನಾಮಧಾರಿ ಸಮಾಜದ ಶ್ರೀ.ಹಳೆಕೋಟೆ ಹನುಮಂತ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಶಿಲಾಮಯ ದೇವಾಲಯದ ಉದ್ಘಾಟನಾ ಮಹೋತ್ಸವವು ನಡೆಯಲಿದ್ದು ಫೆ.೮ರಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭವ್ಯ ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಗುತ್ತದೆ. ಅನೇಕ ಕಲಾವಿದರು ಮೆರವಣಿಗೆಗೆ ರಂಗ ನೀಡಲಿದ್ದಾರೆ, ಸಾರ್ವಜನಿಕರಿಗೆ ಕಳಸಾಭಿಷೇಕ ಕಾರ್ಯಕ್ರಮಕ್ಕೂ ಅವಕಾಶ ನೀಡಲಾಗಿದೆ. ಶ್ರೀ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ನಿಮಿತ್ತ ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಫೆ.೧೪ಕ್ಕೆ ಸ್ವಾಮೀಜಿಯವರ ಇಚ್ಛೆಯಂತೆ ಸೀತಾರಾಮ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಜರುಗಲಿದೆ, ಎಲ್ಲ ಸಮಾಜಗಳ ಬಾಂಧವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಎಂದು ವಿನಂತಿಸಿಕೊAಡರು.

ಶಾಸಕ ಸುನೀಲ ನಾಯ್ಕ ಮಾತನಾಡಿದ ಅವರು ಸರಿಸುಮಾರು ರು.೫.೫ ಕೋಟಿ ವೆಚ್ಚದಲ್ಲಿ ನೂತನ ಶಿಲಾಮಯ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈಗಾಗಲೇ ರೂ.೧ಕೋಟಿ, ಮಂಜೂರಿ ಮಾಡಿದ್ದಾರೆ. ಮುಜರಾಯಿ ಇಲಾಖೆಯಿಂದಲೂ ರೂ.೨೫ ಲಕ್ಷ ಅನುದಾನ ದೊರೆತಿದೆ. ಶ್ರೀ ದೇವರ ಪುನರ್ ಪ್ರತಿಷ್ಠಾ ಮಹೋತ್ಸವವನ್ನು ವಿಜೃಂಭಣೆಯಿAದ ನಡೆಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಚಿವರು, ಶಾಸಕರುಗಳಿಗೆ ಕಾರ್ಯಕ್ರಮದ ಆಮಂತ್ರಣ ನೀಡಲಾಗಿದ್ದು, ಫೆಬ್ರವರಿ ೧೧ ಅಥವಾ ೧೨ಕ್ಕೆ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಚಿವ ಶಿವರಾಮ ಹೆಬ್ಬಾರ ಸೇರಿದಂತೆ ಹಲವು ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅವಧಿಯಲ್ಲಿ ಪ್ರತಿ ದಿನ ಮಧ್ಯಾಹ್ನ ೧೦- ೧೫ ಸಾವಿರ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿದರು.
ದೇವಸ್ಥಾನದ ಮೊಕ್ತೇಸರು ಸುಬ್ರಾಯ ನಾಯ್ಕ ತೆರ್ನಮಕ್ಕಿ, ಜೆ.ಜೆ.ನಾಯ್ಕ, ವೆಂಕಟೇಶ ನಾಯ್ಕ ಶಿರಾಲಿ, ಗೌರೀಶ ನಾಯ್ಕ ಕೈಕಿಣಿ, ಮಂಜುನಾಥ ನಾಯ್ಕ ಬೈಲೂರು, ನಾಗಪ್ಪ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

error: