April 30, 2024

Bhavana Tv

Its Your Channel

ಕುಂದಾಪುರ ಲವ್ ಸೆಕ್ಸ್ ಜಿಹಾದ್ ಪ್ರಕರಣದ ಆರೋಪಿ ಬಂಧನ

ಕುಂದಾಪುರ ಲವ್ ಸೆಕ್ಸ್ ಜಿಹಾದ್ ಪ್ರಕರಣದ ಆರೋಪಿ ಬಂಧನ, ಆರೋಪಿ ಅಜೀಜ್ ಮತ್ತು ಆತನ ಸಹೋದರ ರಹೀಂ ಬಂಧನ.

ಭಟ್ಕಳದಿOದ ಉಡುಪಿಯತ್ತ ಆರೋಪಿಗಳು ಬರುತ್ತಿರುವಾಗ ಹೆಮ್ಮಾಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ, ಆರೋಪಿಗಳನ್ನು ಕುಂದಾಪುರ ಸೆಷನ್ ಕೋರ್ಟ್ಗೆ ಹಾಜರು ಪಡಿಸಿದ್ದು ಆರೋಪಿ ಅಜೀಜ್ ಗೆ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ ನೀಡಿದೆ.

ಆರೋಪಿಗೆ ಆಶ್ರಯ ನೀಡಿದ ಸಹೋದರ ರಹೀಂಗೆ 14 ದಿನಗಳ ನ್ಯಾಯಾಂಗ ಬಂಧನ ಆದೇಶ ನೀಡಿದೆ

ಕೆಲವು ದಿನಗಳ ಹಿಂದೆಯಷ್ಟೆ ಲವ್ ಸೆಕ್ಸ್ ಜಿಹಾದ್ ಗೆ ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ ಬಲಿಯಾಗಿದ್ದಳು, ಶಿಲ್ಪಾ ದೇವಾಡಿಗ ಅವರೊಂದಿಗೆ ಅಜೀಜ್ ಪ್ರೀತಿ ಪ್ರೇಮದ ನಾಟಕವಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದ, ವಿವಾಹಿತನಾಗಿದ್ದ ಅಜೀಜ್ ಶಿಲ್ಪಾಳನ್ನು ಮದುವೆಯಾಗಲು ಇಸ್ಲಾಂ ಸ್ವೀಕರಿಸಲು ಒತ್ತಡ ಹಾಕಿದ್ದ ಎನ್ನಲಾಗಿದೆ, ಈ ಹಿನ್ನಲೆಯಲ್ಲಿ ಶಿಲ್ಪಾ ದೇವಾಡಿಗ ಮನನೊಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.

error: